ಕಥೆ ಮತ್ತು ವಿಶೇಷ ಲೇಖನಗಳು

ಭಗವದ್ಗೀತೆ ಮನುಕುಲಕ್ಕೆ ಅತ್ಯದ್ಭುತವಾಗಿ ಬೋಧಿಸಿದ ತತ್ವಶಾಸ್ತ್ರ

ಭಗವದ್ಗೀತೆ ಮನುಕುಲಕ್ಕೆ ಅತ್ಯದ್ಭುತವಾಗಿ ಬೋಧಿಸಿದ ತತ್ವಶಾಸ್ತ್ರ

-ದೀಪಿಕಾ ಚಾಟೆ, ಬೆಳಗಾವಿ 

ಭಗವದ್ಗೀತೆಯು ಕೇವಲ ಕೃಷ್ಣ ಮತ್ತು ಅಜರ್ುನರ ಮಧ್ಯ ನಡೆದಿರುವ ಸಂವಾದವಷ್ಟೇ ಅಲ್ಲ. ಇಡೀ ಮನುಕುಲಕ್ಕೆ ಅತ್ಯದ್ಭುತವಾಗಿ ಬೋಧೀಸಿದ ತತ್ವಶಾಸ್ತ್ರ, ಮಾನಸಿಕ ಶಾಸ್ತ್ರ ಮತ್ತು ಆಧ್ಯಾತ್ಮಿಕ ಶಾಸ್ತ್ರ ಎಂದರೆ ಸುಳ್ಳಲ್ಲ. 

ಶ್ರೀಕೃಷ್ಣನು ಮಾನಸಿಕ ತಜ್ಞ ನೆಂದೇ ಹೇಳಬೇಕು. ಅಜರ್ುನನು ಯುದ್ಧಭೂಮಿಗೆ ಬಂದಾಗ ತನ್ನ ಸಂಬಂಧಿಕರು, ನೆಂಟರಿಷ್ಟರನ್ನು ತನ್ನ ವಿರುದ್ಧ ಯುದ್ಧ ಮಾಡಲು ನಿಂತಿದ್ದನ್ನು ನೋಡಿ ಖಿನ್ನತೆಗೆ ಒಳಗಾಗುತ್ತಾನೆ. ಎಷ್ಟು ಆಳವಾದ ಖಿನ್ನತೆಗೆ ಒಳಗಾಗುತ್ತಾನೆ ಎಂದರೆ ತಾನು ಕ್ಷತ್ರಿಯ ನೆಂಬುದನ್ನೂ ಮರೆತು ಯುದ್ಧ ಭೂಮಿಯಿಂದ ಪಲಾಯನ ಮಾಡಲು ಯತ್ನಿಸುತ್ತಾನೆ.ತನ್ನ ಬಾಂಧವರೊಂದಿಗೆ ಯುದ್ಧ ಮಾಡಿ ಗೆದ್ದರೇನು ಫಲ? ಇದಕ್ಕಿಂತ ಸಾಯುವುದೇ ಲೇಸು ಎಂದು ಕೊಳ್ಳತ್ತಾನೆ.ತನ್ನ ಸ್ವ ಸಾಮಥ್ರ್ಯದ ಮೇಲೆಯೇ ಕೀಳರಿಮೆ, ಖಿನ್ನತೆಯನ್ನು ಹೊಂದಿ, ಸ್ವಾಭಿಮಾನಿ ಯಾದ ಅಜರ್ುನನು ತನ್ನ ಸ್ವಾಭಿಮಾನವನ್ನೇ ಕಳೆದುಕೊಂಡಂತಾಗಿ ಬಿಟ್ಟಿರುತ್ತಾನೆ.  

ಆ ಸಂದರ್ಭದಲ್ಲಿ ಶ್ರೀಕೃಷ್ಣನು ಅಜರ್ುನನಿಗೆ ಮಾನಸಿಕ ಉಪಚಾರಕ್ಕಾಗಿ ತಂತ್ರಗಳನ್ನು ಬಳಸುತ್ತಾನೆ.ಅವನಲ್ಲಿ ಉಂಟಾದ ಒತ್ತಡವನ್ನು ಶಮನಗೊಳಿಸಲುದುವ್ಯಕ್ತನಾಗುತ್ತಾನೆ.ಈ ಭಗವದ್ಗೀತೆಕೇವಲ ಅಜರ್ುನನಿಗಾಗಿ ಬೋಧಿಸಿದ ಗ್ರಂಥವಲ್ಲ. ಜನಸಾಮಾನ್ಯರಿಗೂ ಅರಿವು ಮೂಡಿಸುವ,  ಒತ್ತಡ ಕಡಿಮೆಗೊಳಿಸುವ, ಮನಸ್ಸನ್ನು,  ಬುದ್ಧಿ ಯನ್ನು ಹತೋಟಿಯಲ್ಲಿಟ್ಟು ಹೇಗೆ ಕಾರ್ಯಸಾಧಿಸಬೇಕು?, ಆರೋಗ್ಯಕ್ಕಾಗಿ ಎಂಥ ಆಹಾರ ಸೇವಿಸಬೇಕು, ಯಾಯರ್ಾರೊಂದಿಗೆ ಹೇಗೆ ವತರ್ಿಸಬೇಕುಎಂದೆಲ್ಲ ವಿಷದವಾಗಿ ವಿವರಿಸಿದ ಗ್ರಂಥವಾಗಿದೆ. 

         ಸುಮಾರು ಐದು ಸಾವಿರ ವರ್ಷಗಳ ಹಿಂದೆ ಯೇ ವ್ಯಾಸರಿಂದ ಹೇಳಿಸಿದ, ಗಣಪತಿಯಿಂದ ಬರೆಯಿಸಲ್ಪಟ್ಟ ಭಗವದ್ಗೀತೆಯಾದರೂ ಕೂಡ ಯುದ್ಧಭೂಮಿಯಲ್ಲಿ ಶ್ರೀಕೃಷ್ಣನಿಂದ ಅಜರ್ುನನಿಗೆ ಬೋಧಿಸಲ್ಪಟ್ಟದ್ದಾಗಿದೆಆದರೂ ಇಂದಿಗೂ ಆ ಗ್ರಂಥ ಪ್ರಸ್ತುತವಾಗಿದೆ ಎಂದರೆ ಸುಳ್ಳಲ್ಲ. 

     ಇಂದಿನ ಎಲ್ಲ ಮ್ಯಾನೇಜ್ ಮೆಂಟ್ ಕೋರ್ಸಗಳಲ್ಲಿ ಭಗವದ್ಗೀತೆಯ ಉದಾಹರಣೆಗಳನ್ನೇ ಕೊಡಲಾಗುತ್ತದೆ.ಭಗವದ್ಗೀತೆಯ ತತ್ವದ ಬುನಾದಿಯಲ್ಲಿ ಅರಳಿರುವ ಬ್ಯುಜಿನೆಸ್ಸುಗಳು ಲಾಭದಲ್ಲಿ ನಡೆಯುತ್ತಿರುತ್ತವೆ.ಅನೇಕ ಉದಾಹರಣೆಗಳಲ್ಲಿ ಇದು ಸಿದ್ಧಗೊಂಡಿದೆ. 

      ಯಾವುದೇಒಂದು ಕಾರ್ಯಸಾಧಿಸಲು  ಒತ್ತಡ ರಹಿತ ಶಾಂತ ಮನಸ್ಥಿತಿ ಅವಶ್ಯಕವಾಗಿ ಬೇಕು.ಮತ್ತು ಆಕೆಲಸದ ಬಗ್ಗೆ ಏಕಾಗ್ರತೆ ಕೂಡ ಬೇಕು.ಆಗ ಯಾವುದೇ ಗೊಂದಲವಿಲ್ಲದೇ ಕಾರ್ಯ ಸಾಧಿಸಬಹುದು. 

 ಶ್ರೀಕೃಷ್ಣನು ಅಜರ್ುನನನ್ನು ಖಿನ್ನತೆಯಿಂದ ಹೊರತರಲು ಮೂರು ತಂತ್ರಗಳನ್ನು ಮುಖ್ಯವಾಗಿ ಉಪಯೋಗಿಸುತ್ತಾನೆ. 

1) ಮೊದಲು ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿಕೊಳ್ಳಲು ಯೋಗಮಾರ್ಗವನ್ನು ಕೃಷ್ಣ ಹೇಳುತ್ತಾನೆ.ಯೋಗದಿಂದ ಮನಸ್ಸನ್ನು ಹತೋಟಿಯಲ್ಲಿ ತಂದು ಕೆಲಸದ ಕಡೆಗೆ ಏಕಾಗ್ರತೆಯನ್ನು ಹೇಗೆ ತಂದುಕೊಳ್ಳಬಹುದು, ಎಲ್ಲಾ ಒತ್ತಡ, ಭಯಗಳಿಂದ ಮುಕ್ತರಾದಾಗ ಕೆಲಸ ಸಲೀಸು. ಮತ್ತು ಯೋಗವೆಂದರೆ ದೈಹಿಕ ಕಸರತ್ತಷ್ಟೇ ಅಲ್ಲ,ಒಂದು ಶಿಸ್ತು ಬದ್ಧವಾದ ಜೀವನದ ಪದ್ಧತಿ ಅಳವಡಿಸಿಕೊಂಡಾಗ ಮನಸ್ಸು ಹತೋಟಿಯಲ್ಲಿರುತ್ತದೆ. ಯೋಗ ಮನಸ್ಸಿಗೆ ಸಂಬಂಧಿಸಿದ್ದು, ವ್ಯಾಯಾಮ ದೇಹಕ್ಕೆ ಸಂಬಂಧಿಸಿದ್ದು.ಅದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯೋಗಃ ಚಿತ್ತವೃತ್ತಿ ನಿರೋಧಃ ಎಂದು ಶ್ರೀ ಕೃಷ್ಣನು ಹೇಳುವಂತೆ ಮನಸ್ಸಿನ ಹೊಯ್ದಾಟ, ಚಂಚಲ ವಿಚಾರ ಗಳನ್ನೆಲ್ಲ ಬದಿಗೆ ಸರಿಸಿ ಮನಸ್ಸನ್ನು ಒಂದೇ ಕಡೆಗೆ  ನೆಲೆಸುವಂತೆ ಮಾಡುವುದೇ ಆಗಿದೆ. 

2) ಅಜರ್ುನನಿಗೆ ಒತ್ತಡ ಶಮನ ಗೊಳಿಸಲು ಶ್ರೀ ಕೃಷ್ಣ ನು ಉಪಯೋಗಿಸಿದ ಎರಡನೇ ತಂತ್ರವೇ ಬುದ್ಧಿಗೆ ಸಂಬಂಧಿಸಿದ್ದು .ಹುಟ್ಟಿದ ಮನುಷ್ಯನಿಗೆ ಸಾವು ನಿಶ್ಚಿತ.ನಿನ್ನ ನೆಂಟರು ನೀನು ಯುದ್ದ ಮಾಡಿದರೂ ಮಾಡದೇ ಇದ್ದರೂ ಒಂದಿಲ್ಲ ಒಂದು ದಿನ ಮರಣವನ್ನು ಹೊಂದುವ ವರೇ.ಕ್ಷತ್ರಿಯ ನಾದ ನೀನು ಯುದ್ಧ ಕ್ಕೆ ಅಂಜಿ ಪಲಾಯನಗೈಯ್ಯುವುದು ಎಷ್ಟು ಸರಿ? ಮಾಡುವ ಕರ್ತವ್ಯವನ್ನು ಬಿಟ್ಟು ಹೋದರೇ ನರಕವೇ ಗತಿ.ಇನ್ನೂ ನೀನು ಕೊಲ್ಲುವುದು ಶರೀರವನ್ನೇ ಹೊರತು ಆತ್ಮವನ್ನಲ್ಲ.ಆತ್ಮ ಅವಿನಾಶಿ. ಅದಕ್ಕೆ ಸಾವಿಲ್ಲ. ಹಳೆಯ ಬಟ್ಟೆ ತೆಗೆದು ಹೊಸಬಟ್ಟೆ ಧರಿಸುವಂತೆ ಆತ್ಮ ಮತ್ತೊಂದು ಜನ್ಮಕ್ಕೆ ಇನ್ನೊಂದು ಶರೀರವನ್ನಾಶ್ರಯಿಸುತ್ತದೆ.ಹೀಗಾಗಿ ನೀನು ಒಂದು ಯುದ್ಧದಲ್ಲಿ ಕೊಂದರೂ ಅದು ತಪ್ಪಿಲ್ಲ. ನೀನು ಯುದ್ಧದಲ್ಲಿ ಸತ್ರೂ ಸ್ವರ್ಗಸೇರುತ್ತೀ, ಅವರೂ ವೀರಮರಣ ಗೈದರೆ ಸ್ವರ್ಗಕ್ಕೆ ಹೋಗುತ್ತಾರೆ. ಆದರೆ ನೀನು ಒಂದುವೇಳೆ ಯುದ್ಧಮಾಡದೇ ಪಲಾಯನ ಗೈದರೆ ಸ್ವಧರ್ಮಕ್ಕೆ ದ್ರೋಹಬಗೆದಂತೆ ಅಲ್ಲದೇ ಅಪಕೀತರ್ಿಗೆ ಒಳಗಾಗುತ್ತೀಯ. ಸ್ವಾಭಿಮಾನಿಯಾದವನಿಗೆ ಅಪಕೀತರ್ಿಯೇ ಮರಣ ಕ್ಕಿಂತ ಹೆಚ್ಚು.ನೀನು ಜನರ ಮನಸ್ಸಿನಲ್ಲಿ ತುಂಬ ಕ್ಷುಲ್ಲಕನಾಗಿ ಬಿಡುತ್ತೀಯೇ ಎಂದು ಹೇಳಿ ಅಜರ್ುನ ನ  ಚಿಂತನೆಯನ್ನು ಬುದ್ಧ್ಯಾ ಪೂರ್ವಕವಾಗಿ ಬದಲಿಸುವ ತಂತ್ರವಾಗಿ ಶ್ರೀ ಕೃಷ್ಣ ಉಪಯೋಗಿಸುತ್ತಾನೆ. 

ಇನ್ನೂ ಶ್ರೀಕೃಷ್ಣನು ಮೂರನೇ ತಂತ್ರವಾಗಿ ಆಧ್ಯಾತ್ಮಿಕ ಚಿಂತನೆಯನ್ನು ಅಜರ್ುನನಲ್ಲಿ ಹರಿಯ ಬಿಡುತ್ತಾನೆ. 

     ಕರ್ಮಣ್ಯೇವಾಧೀಕಾರಸ್ತೇ ಮಾ ಫಲೇಶು      ಕದಾಚನ ! ಮಾ 

ಕರ್ಮಫಲಹೇತುಭರ್ೂಮರ್ಾತೇಸಂಗೋತ್ಸ್ವಕರ್ಮಣಿ!! 

ಯಾವುದೇ ಕೆಲಸವನ್ನು ನೀನು ನಿನ್ನ ಕರ್ತವ್ಯವೆಂಬಂತೆ ಮಾಡು .ಫಲಾಫಲಗಳ ಅಪೇಕ್ಷೆ ಮಾಡದೇ ನನ್ನ ಮೇಲೆ ಬಿಡು.ಎಂದು ಹೇಳಿದಾಗ ಎಂಥಾ ಒತ್ತಡದ ಮನಸ್ಥಿತಿಯವರೂ ನಮ್ಮಕ್ಕಿಂತ ಅಗೋಚರ ಶಕ್ತಿಯ ಮೇಲೆ ಭಾರಹಾಕಿ ನಮ್ಮ ಕರ್ತವ್ಯ ಮಾಡಲಾರಂಭಿಸಿದಾಗ ನಮ್ಮಲ್ಲಿಯ ಒತ್ತಡ ತನ್ನಿಂತಾನೇ ಮಾಯವಾಗುತ್ತದೆ ಅಲ್ಲವೇ? ಈ ಸಮರ್ಪಣಾ ತಂತ್ರವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ನಮ್ಮಲ್ಲಿಯ ಅಹಮಿಕೆಯನ್ನು ಹೊರದೂಡಿ ಕರ್ತವ್ಯ ಪ್ರಜ್ಞರಾಗುವಂತೆ ಮಾಡುತ್ತದೆ.ಕರ್ತವ್ಯದಿಂದ ಪಲಾಯನ ಮಾಡಿ ಹಿಮಾಲಯಕ್ಕೆ ಹೋದರೆ ಮನದ ನೆಮ್ಮದಿ ಕಡಿಮೆ ಯಾಗಿಸುತ್ತದೆಯೇ? ಖಂಡಿತವಾಗಿಯೂ ಇಲ್ಲ.ಕರ್ತವ್ಯ ಮಾಡುತ್ತಲೇ ದೇವರ ಮೇಲೆ ಭಾರ ಹಾಕಿದಾಗ ಮನದ ಶಾಂತಿ ಹೆಚ್ಚುತ್ತದೆ. 

        ಭಗವದ್ಗೀತೆ ಎಂಬುದು ಸುಮ್ಮನೇ ಶ್ರೀಕೃಷ್ಣನು ಅಜರ್ುನನಿಗೆ ಬೋಧಿಸಿದ್ದಷ್ಟೇ ಅಲ್ಲದೇ ಇಡೀ ಮನುಕುಲಕ್ಕೆ ಸಾಂಖ್ಯಯೋಗ, ಕರ್ಮಯೋಗ, ಜ್ಞಾನ ಯೋಗ, ಭಕ್ತಿಯೋಗ ಸನ್ಯಾಸ ಯೋಗ ಎಂದೆಲ್ಲ ಮಹತ್ವದ ಯೋಗಗಳ ಕುರಿತಾಗಿ ವಿವರಿಸಿದ್ದಾನೆ.ಇದರಲ್ಲಿ ಬರದಿರುವ ವಿಷಯಗಳೇ ಇಲ್ಲ ಎಂದು ಹೇಳಬಹುದು. 

     ಯಾವುದೇ ಕಷ್ಟಕಾಲ ಬಂದಾಗಲೂ ಮಹಾತ್ಮಾ ಗಾಂಧೀಜಿಯವರು ಭಗವದ್ಗೀತೆಯ ಯಾವುದೇ ಪೇಜು ತೆಗೆದು ಓದಿದರೂ ಮನಸ್ಸು ನಿರಾಳವಾಗುತ್ತಿತ್ತಂತೆ.ಅವರ ಸಮಸ್ಯೆಗೆ ತಕ್ಷಣ ಪರಿಹಾರ ಸಿಕ್ಕುಬಿಡುತ್ತಿತ್ತೆಂದು ತಮ್ಮ ಆತ್ಮ ಚರಿತ್ರೆಯಲ್ಲಿ ಹೇಳಿದ್ದಾರೆ... ಇಂಥ ಮಹೋನ್ನತ ಗ್ರಂಥವನ್ನು ಇಂದು ವಿದೇಶಿಗರು ಅಭ್ಯಸಿಸುತ್ತಿದ್ದಾರೆ ಎಂದರೆ ನಮಗೆ ಎಂಥ ಹೆಮ್ಮೆ ಅಲ್ಲವೇ? 


ಸುದ್ದಿ ಓದಿ