ಶಿಕ್ಷಕರು ರಾಜಕಾರಣಿಗಳ ಕೈಗೊಂಬೆಯಾಗದೆ, ಭಗವಂತನ ಕೈಗೊಂಬೆಯಾಗಲಿ; ಸಿ.ಎಸ್ ನಾಡಗೌಡ
ಮುದ್ದೇಬಿಹಾಳ: 2023-24ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳ ಆರಂಭದ ಹಿನ್ನೆಲೆಯಲ್ಲಿ ಶಾಲಾ ಮಕ್ಕಳನ್ನು ಪ್ರೀತಿಯಿಂದ ಸ್ವಾಗತಿಸುವುದರ ಜತೆಗೆ ಶಾಲಾ ಪ್ರಾರಂಭೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಪಟ್ಟಣದ ಸಕರ್ಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಬುಧವಾರ ತಾಲೂಕು ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಅಪ್ಪಾಜಿ ಸಿ.ಎಸ್ ನಾಡಗೌಡ ಅವರು ಮಕ್ಕಳೊಂದಿಗೆ ರಿಬ್ಬನ್ ಕಟ್ ಮಾಡುವುದರೊಂದಿಗೆ ಶಾಲಾ ತರಗತಿಗಳ ಆರಂಭಕ್ಕೆ ಚಾಲನೆ ನೀಡಿದರು.
ಶಾಲಾ ಮುಖ್ಯ ದ್ವಾರದಲ್ಲಿ ರಂಗೋಲಿ ಹಾಗೂ ಹಸಿರು ತೋರಣಗಳಿಂದ ಶಾಸಕರನ್ನು ಹಾಗೂ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು. ಇದೇ ವೇಳೆ ಮಕ್ಕಳಿಗೆ ಸಾಂಕೇತಿಕವಾಗಿ ಪಠ್ಯ ಪುಸ್ತಕ ಹಾಗೂ ಶಾಲಾ ಸಮವಸ್ತ್ರ ನೀಡಲಾಯಿತು. ಅಡುಗೆ ಸಹಾಯಕ ಸಿಬ್ಬಂದಿಗಳಿಗೆ ಬಟ್ಟೆ ವಿತರಣೆ ಮಾಡಿರುವುದು ವಿಶೇಷವಾಗಿತ್ತು.ಈ ವೇಳೆ ಮಾತನಾಡಿದ ಶಾಸಕ ಅಪ್ಪಾಜಿ ಸಿ.ಎಸ್ ನಾಡಗೌಡ ಅವರು, ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶಿಕ್ಷಕರು ಸಂಸ್ಕಾರ ಹಾಗೂ ಸಂಸ್ಕೃತಿ ಕಲಿಸಬೇಕು. ಜತೆಗೆ ವಿದ್ಯಾಥರ್ಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ ಮಾತ್ರ ವಿದ್ಯಾರ್ಥಿಗಳ ಸಾಧನೆಗೆ ಭದ್ರ ಬುನಾದಿಯನ್ನು ಹಾಕಿದಂತಾಗುತ್ತದೆ.
ಆಗ ಶಿಕ್ಷಕರಿಗೆ ಒಂದು ಮೌಲ್ಯ ಬರುತ್ತದೆ ಎಂದು ಅಭಿಪ್ರಾಯಪಟ್ಟರು.ಮೊದಲಿನ ದಿನಗಳಲ್ಲಿ ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಶಿಕ್ಷಣದಲ್ಲಿ ಆದ ಕ್ರಾಂತಿ ನಂತರ ಎಲ್ಲಾ ಸಮುದಾಯದ ಮಕ್ಕಳು ವೈದ್ಯಕೀಯ, ಇಂಜಿನಿಯರ್, ಪಿಎಚ್ ಡಿ ಸೇರಿದಂತೆ ಇನ್ನೀತರ ಉನ್ನತ ಶಿಕ್ಷಣವನ್ನು ಮಕ್ಕಳು ಪಡೆಯುತ್ತಿದ್ದಾರೆ. ಅಂತೆಯೇ ಮಾತನಾಡಿದ ಶಾಸಕರು, ಇತ್ತೀಚಿನ ವರ್ಷಗಳಲ್ಲಿ ಶಿಕ್ಷಕರು ತಮ್ಮ ವೃತ್ತಿಯನ್ನು ಬಿಟ್ಟು ರಾಜಕಾರಣ ಮಾಡುತ್ತಿದ್ದಾರೆ. ಅಂತಹ ಶಿಕ್ಷಕರು ರಾಜೀನಾಮೆ ನೀಡಿ ರಾಜಕಾರಣ ಮಾಡಬೇಕು. ಚುನಾವಣೆಯಲ್ಲಿ ಬಡವರು ಹಣದ ವ್ಯಾಮೋಹಕ್ಕೆ ಒಳಗಾಗುತ್ತಾರೆ. ಆದರೆ ಶಿಕ್ಷಕರು ಆಸೆ-ಆಮಿಷಕ್ಕೆ ಬಲಿಯಾಗಿರುವುದು ನೋವು ತರಿಸಿದೆ ಎಂದರು.ಶಿಕ್ಷಣ ಎನ್ನುವುದು ಪವಿತ್ರವಾದ ವೃತ್ತಿ ಆಗಿದೆ. ಇಂತಹ ವೃತ್ತಿಯನ್ನು ಶಿಕ್ಷಕರು ರಾಜಕೀಯಗೊಳಿಸಿ ಅಂತಹ ರಾಜಕಾರಣಿಗಳ ಜತೆ ಸೇರಿ ಅಪವಿತ್ರಗೊಳಿಸಿದ್ದಾರೆ. ಈ ಮೂಲಕ ಶಿಕ್ಷಕರು ಮಕ್ಕಳಿಗೆ ಯಾವ ರೀತಿ ಸಂದೇಶ ಕಳುಹಿಸುತ್ತಿದ್ದಾರೆ. ಇಂತಹ ಅಪವಿತ್ರ ಜನರ ಜತೆ ಸೇರಿ ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡಲು ಸಾಧ್ಯನಾ ಎಂದು ಶಾಸಕ ನಾಡಗೌಡ ಅವರು ಶಿಕ್ಷಕರಿಗೆ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.ಆಗಿನ ಶಿಕ್ಷಕರನ್ನು ನೋಡಿ ಮಕ್ಕಳಿಗೆ ಭಯ, ಸಂಸ್ಕಾರ ಮತ್ತು ಸಂಸ್ಕೃತಿ ಇತ್ತು. ಇಂದಿನ ಶಿಕ್ಷಕರು ಒಂದು ಪಕ್ಷದ ವಕ್ತಾರರಂತೆ ವರ್ತಿ ಸುವುದರಿಂದ ಮಕ್ಕಳಿಗೆ ಶಿಕ್ಷಕರ ಮೇಲೆ ಇರುವ ಗೌರವ ಕಡಿಮೆ ಆಗುತ್ತಿದೆ. ಹೀಗಾಗಿ ಶಿಕ್ಷಕರು ತಮ್ಮ ಜೀವನದ ಶೈಲಿಯನ್ನು ಬದಲಿಸಿಕೊಳ್ಳಬೇಕು. ಶಿಕ್ಷಕರು ಯಾರ ಕೈಗೊಂಬೆಯಾಗಿ ಕೆಲಸ ಮಾಡದೇ ಭಗವಂತನ ಕೈಗೊಂಬೆಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಿ.ಎಸ್ ನಾಡಗೌಡ ಅವರು ಹೇಳಿದರು