ಸಂವಿಧಾನ ವಿರೋಧಿ ಭಾಷಣವನ್ನು ಖಂಡಿಸಿ ಟಿಯುಸಿಐ ಪ್ರಧಾನ ಕಾರ್ಯದರ್ಶಿ ಅರ್‌. ಮಾನಸಯ್ಯ ಬಿಡುಗಡೆ

ಸಂವಿಧಾನ ವಿರೋಧಿ  ಭಾಷಣವನ್ನು  ಖಂಡಿಸಿ ಟಿಯುಸಿಐ ಪ್ರಧಾನ ಕಾರ್ಯದರ್ಶಿ ಅರ್‌. ಮಾನಸಯ್ಯ ಬಿಡುಗಡೆ

 ಸಂವಿಧಾನ ವಿರೋಧಿ  ಭಾಷಣವನ್ನು  ಖಂಡಿಸಿ ಟಿಯುಸಿಐ ಪ್ರಧಾನ ಕಾರ್ಯದರ್ಶಿ ಅರ್‌. ಮಾನಸಯ್ಯ ಬಿಡುಗಡೆ  

ರಾಯಚೂರ 20 : ರಾಜ್ಯ ಸರಕಾರ ಪೊಲೀಸ್ ಬಂದೋಬಸ್ತ್‌ ನೀಡಲೇಬೇಕು!ದಿನಾಂಕ 16.11.2024 ರಂದು ಹಟ್ಟಿ ಚಿನ್ನದ ಗಣಿಯಲ್ಲಿ  ಶ್ರೀರಾಮ ಸೇನೆಯ  ಪ್ರಮೋದ್ ಮುತಾಲಿಕ್ ಮಾಡಿದ ದೇಶ ವಿರೋಧಿ, ಸಂವಿಧಾನ ವಿರೋಧಿ  ಭಾಷಣವನ್ನು  ಖಂಡಿಸಿ ಟಿಯುಸಿಐ ಪ್ರಧಾನ ಕಾರ್ಯದರ್ಶಿ ಅರ್‌. ಮಾನಸಯ್ಯ ಬಿಡುಗಡೆ ಮಾಡಿದ ಹೇಳಿಕೆಯನ್ನು ನಾವು ಸಮರ್ಥಿಸುತ್ತೇವೆ.ಏಕೆಂದರೆ, ದೇಶದ ದಲಿತ ಹಾಗೂ ದುರ್ಬಲ ವರ್ಗಗಳ  ಐಕಾನ್  ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು, ಜಾತಿವಾದಿ, ವರ್ಣಶ್ರಮವಾದಿ, ಸಂವಿಧಾನ ವಿರೋಧಿ  ವಿ.ಡಿ. ಸಾವರ್ಕರ್ ಭಾವಚಿತ್ರದೊಂದಿಗೆ ಹಾಕಿದ್ದಲ್ಲದೆ, ದಲಿತ ಸಂಘಟನೆಗಳ ಬಾವುಟ ಬಣ್ಣದ ನೀಲಿ ಚಡ್ಡಿಗಳನ್ನು ತೊಟ್ಟು ಗಣವೇಶದಾರಿ ಪಥಸಂಚಲನ ನಡೆಸಲಾಗಿದೆ. ಇದು ಅಂಬೇಡ್ಕರ್ ಹಾಗೂ ದಲಿತ, ಶೋಷಿತ ಸಮುದಾಯಕ್ಕೆ ಶ್ರೀರಾಮ ಸೇನೆ ಮಾಡಿದ ಅತಿ ದೊಡ್ಡ ಅವಮಾನವಾಗಿದೆ. ಇದನ್ನು ವಿರೋಧಿಸಿ  ಅರ್‌. ಮಾನಸಯ್ಯನವರು ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮುಸ್ಲಿಮರು, ಕ್ರೈಸ್ತರು,ಕಮ್ಯುನಿಸ್ಟ್‌ ವಿಚಾರವಾದಿಗಳನ್ನು ನಿರ್ನಾಮ ಮಾಡಿ, ಹಿಂದೂ ರಾಷ್ಟ್ರ ಕಟ್ಟುವ  ಮುತಾಲಿಕ್  ಕರೆಯನ್ನು  ಮಾನಸಯ್ಯ ಕಠೋರವಾಗಿ ಖಂಡಿಸಿದ್ದಾರೆ.ಇದನ್ನು ಸಹಿಸದ ಶ್ರೀರಾಮ ಸೇನೆ  ಆರ್‌. ಮಾನಸಯ್ಯನವರ ಅವಹೇಳನ ಮಾಡಿ ಪತ್ರಿಕೆ ಹೇಳಿಕೆ ಹೊರಡಿಸಿದೆ. ಅವರ ಗಟ್ಟಿಮುಟ್ಟಾದ  ರಾಜಿರಹಿತ  ದಲಿತ, ರೈತ,ಕಾರ್ಮಿಕ ವರ್ಗದ ಹೋರಾಟಗಳ ವರ್ಚಸ್ಸು ಹಾಳು ಮಾಡಲು ಅವರ ಮೇಲೆ ಇಲ್ಲ-ಸಲ್ಲದ ಪ್ರಚಾರಕ್ಕೆ ಶ್ರೀರಾಮ ಸೇನೆ ಮುಂದಾಗಿದೆ. ಈ ಹಿಂದುತ್ವ  ಜಾತಿವಾದಿಗಳ  ದುಷ್ಟ ಪ್ರಚಾರವನ್ನು ಜನ ವ್ಯಾಪಕವಾಗಿ ಖಂಡಿಸಬೇಕೆಂದು ಈ ಪತ್ರಿಕೆ ಹೇಳಿಕೆ ಮೂಲಕ  ಕೊರಲಾಗಿದೆ.ಹಾಗೆಯೆ, ಆರ್‌. ಮಾನಸಯ್ಯ ಅವರಿಗೆ ಶ್ರೀರಾಮ ಸೇನೆ ಮುಂದೆ ಕ್ಷಮೆ ಯಾಚಿಸುವಂತೆ ವಾರದ ಗಡುವು ನೀಡಲಾಗಿದೆ. ಇದಾಗದಿದ್ದಲ್ಲಿ ಅವರ ಮನೆ ಮುಂದೆ  ಜಿಲ್ಲಾಮಟ್ಟದ ಹಿಂದೂ ಸಂಘಟನೆಗಳು ಸೇರಿ ಅಣುಕು ಶವ ಸುಟ್ಟು ಪ್ರತಿಭಟಿಸುವ  ಪ್ರಕಟಣೆ ನೀಡಲಾಗಿದೆ. ಕಾರಣ ಕೂಡಲೆ ರಾಜ್ಯ ಸರ್ಕಾರ ಈ ಹೇಳಿಕೆ ನೀಡಿದವರನ್ನು ಬಂಧಿಸಬೇಕು ಹಾಗೂ ಆರ್‌. ಮಾನಸಯ್ಯನವರ ಮನೆಗೆ ಸೂಕ್ತ ಪೊಲೀಸ್ ಬಂದೋಬಸ್ತ್‌ ಒದಗಿಸಬೇಕೆಂದು ಈ ಮೂಲಕ ನಾವು ಒತ್ತಾಯಿಸುತ್ತೇವೆ.ಎಂ.ಗಂಗಾಧರರಾಜ್ಯ ಸಮಿತಿ ಸದಸ್ಯರು ಸಿಪಿಐ ಎಂಎಲ್ ರೆಡ್ ಸ್ಟಾರ್ ಕರ್ನಾಟಕದಿ : 20.11.2024ಸ್ಥಳ: ರಾಯಚೂರು 


ಸುದ್ದಿ ಓದಿ