ಮಹಲಿಂಗಪುರ

ಸತತ ಪರಿಶ್ರಮದಿಂದ ಯಶಸ್ಸು ಸಾಧ್ಯ - ಎಸ್ ಎಂ ಶೇಖ.

ಸತತ ಪರಿಶ್ರಮದಿಂದ ಯಶಸ್ಸು ಸಾಧ್ಯ - ಎಸ್ ಎಂ ಶೇಖ.

ಮಹಾಲಿಂಗಪುರ-01; ಮಹಾಲಿಂಗಪುರದ ಸಮೀಪದ ಕೆಸರಗೊಪ್ಪ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2023 -24ನೇ ಸಾಲಿನ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು  ಪಟ್ಟೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್ ಎಂ  ಶೇಖ ಸೇವಾ ನಿವೃತ್ತಿ ಬೀಳ್ಕೊಡುಗೆ ಸಮಾರಂಭದ ಕಾರ್ಯಕ್ರಮವು  ಕಾಲೇಜಿನ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎಸ್ಎಂ ಶೇಖರವರು   ಮತ್ತು ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸಿ ವಿ ಚೌಧರಿಯವರು , ಮತ್ತು ಎಸ್ ಎಂ ಶೇಖ ರವರ ಧರ್ಮಪತ್ನಿಯಾದ ಜಾಹಿಧಾ  ಬೇಗಂ  ಮತ್ತು ಸಿಬಿಸಿ ಅಧ್ಯಕ್ಷರು, ಉಪಾಧ್ಯಕ್ಷರು,,  ಸದಸ್ಯರು ಹಾಗೂ ಊರಿನ ಹಿರಿಯರೆಲ್ಲರೂ ಸೇರಿ ಸಸಿಗೆ ನೀರುಣಿಸುವುದರ  ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ನಂತರ ಪ್ರಾಚಾರ್ಯ ಎಸ್ ಎಂ ಶೇಖ ರವರಿಗೆ ಕಾಲೇಜಿನ ಉಪನ್ಯಾಸಕರು, ಪ್ರೌಢಶಾಲೆಯ ಶಿಕ್ಷಕರು,  ಕಾಲೇಜಿನ ವಿದ್ಯಾರ್ಥಿಗಳು ಬಹಳ ಪ್ರೀತಿಯಿಂದ ಅವರನ್ನು ಸನ್ಮಾನಿಸಿ ಪ್ರೀತಿಯ ಕಾಣಿಕೆಗಳನ್ನು ನೀಡಿದರು. ಸನ್ಮಾನ ಸ್ವೀಕರಿಸಿದ ನಂತರ ಎಸ್ಎಂ ಶೇಖರವರು ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಚಿರಋಣಿ ನಾನು ಒಂದು ಒಳ್ಳೆಯ ಸೇವೆಯನ್ನು ಮಾಡಲು ಊರಿನ ಸಮಸ್ತ ಹಿರಿಯರು ನಾಗರಿಕರು ಎಲ್ಲ ಉಪನ್ಯಾಸಕರು ಮತ್ತು ಪ್ರೌಢಶಾಲೆಯ ಶಿಕ್ಷಕರು ಎಲ್ಲ ವಿದ್ಯಾರ್ಥಿಗಳು ಹಾಗೂ ನನ್ನ ಧರ್ಮಪತ್ನಿಯಾದ ಜಾಹೀದಾ  ಬೇಗಮ್ ರವರು ಬಹಳಷ್ಟು ಸಹಕಾರ ನೀಡಿದ್ದಾರೆ ನಿಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ನಾನು ಒಳ್ಳೆಯ ಸೇವೆ ಮಾಡಲು ನನಗೆ ಸಾಧ್ಯವಾಗಿದೆ ಎಂದು ಹೇಳಿದರು.

ಎಲ್ಲ ವಿದ್ಯಾರ್ಥಿಗಳು ಶಿಕ್ಷಣ ಜೊತೆಗೆ ಸಂಸ್ಕಾರ ಪಡೆಯಿರಿ ಸತತ ಪ್ರಯತ್ನಯಿಂದ ಮಾತ್ರ ಯಶಸ್ಸು ಸಾಧ್ಯ ನೀವೆಲ್ಲರೂ ಜೀವನದಲ್ಲಿ ದೊಡ್ಡ ವ್ಯಕ್ತಿಗಳಾಗಿ ಉನ್ನತ ಹುದ್ದೆ ಸ್ಥಾನ ಪಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಆಶೀರ್ವದಿಸಿದರು. ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸಿ ವಿ ಚೌದರಿಯವರು ಮಾತನಾಡಿ ಎಸ್ ಎಂ ಶೇಖರವರು ಕಾಲೇಜಿಗೆ ಉತ್ತಮ ಆಡಳಿತ ಕೊಟ್ಟಿದ್ದಾರೆ ಅವರ ಮಾರ್ಗದರ್ಶನದಲ್ಲಿ ನಾವು ಕೂಡ ಮುಂದುವರೆಯುತ್ತಿದ್ದೆವು ಅವರ ನಿವೃತ್ತಿ ಬದುಕು ಆರೋಗ್ಯ ನೆಮ್ಮದಿಯಿಂದ ಕೂಡಿರಲಿ ಇನ್ನೂ ಹಲವಾರು ವಿದ್ಯಾರ್ಥಿಗಳಿಗೆ ವಿಶೇಷ ಜ್ಞಾನ ನೀಡಿ ಮಾರ್ಗದರ್ಶನ ನೀಡುವಂತಾಗಲಿ ಎಂದರು. 

ನಂತರ ಕಾಲೇಜಿನ ಹಿರಿಯ ಉಪನ್ಯಾಸಕರಾದ  ಜಿ ಬಿ ಸಜ್ಜನ್ ರವರು  ಮಾತನಾಡಿ ನಾನು ಕಂಡ ಅತ್ಯುತ್ತಮ ಪ್ರಾಚಾರ್ಯರಲ್ಲಿ ಎಸ್ಎಂ ಶೇಖರವರು ಒಬ್ಬರು ಇವರು ವಿಶೇಷ ಜ್ಞಾನಪಾಂಡಿತ್ಯರು ಅವರ ಸೇವೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವಂತಿತ್ತು ಎಂದು ಹೇಳಿದರು. ನಂತರ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರಾದ ಬಿ  ಬಿ ಕುದರಿಮನಿಯವರು ಮಾತನಾಡಿ  ಪ್ರಾಚಾರ್ಯ  ಎಸ್ಎಂ ಶೇಖರವರ ಸೇವೆಯು ಅಭೂತ ಪೂರ್ವವಾಗಿದ್ದು ಎಲ್ಲರಿಗೂ ಮಾರ್ಗದರ್ಶನ ನೀಡುವಂತಾಗಿತ್ತು ಎಂದರು. ನಂತರ ರಸಾಯನ ಶಾಸ್ತ್ರದ ಉಪನ್ಯಾಸಕರಾದ ಡಾ. ಎಂಪಿ ಚಕ್ರವರ್ತಿ ಅವರು ಪ್ರಾಚಾರ್ಯ ಎಸ್ಎಂ ಶೇಖರ್ ಅವರು ಉತ್ತಮ ವ್ಯಕ್ತಿತ್ವ ಮತ್ತು ಆದರ್ಶ ಹೊಂದಿರುವ ವ್ಯಕ್ತಿ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ   ಬಾಳಬೇಕು ಎಂದು ಹೇಳಿದರು. ನಂತರ ಕನ್ನಡ ಉಪನ್ಯಾಸಕಿಯರಾದ ಪಿಎಸ್ ಲೊನಾರಿಯವರು ಪ್ರಾಚಾರ್ಯ ಎಸ್ಎಂ ಶೇಖರವರು  ಸಕಲಕಲಾವಲ್ಲಭ ಅವರು ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು  ಉಪನ್ಯಾಸಕ ಎಲ್ಲರನ್ನೂ ಸೂಕ್ಷ್ಮವಾಗಿ ಅಭ್ಯಾಸಿಸುವಂತಹ ಸ್ನೇಹಮಯ ವ್ಯಕ್ತಿ ಎಂದರು. ಕಾರ್ಯಕ್ರಮದ ಸ್ವಾಗತ ಮತ್ತು ಪ್ರಾಸ್ತಾವಿಕ  ಭಾಷಣವನ್ನು ಇಂಗ್ಲೀಷ್ ಉಪನ್ಯಾಸಕರಾದ ಬಿ ಬಿ ಕುದರಿಮನಿಯವರು ಮಾಡಿದರು, ಕಾರ್ಯಕ್ರಮವನ್ನು ಎ ಬಿ ಗೌಡಪ್ಪನವರ್ ನಿರೂಪಿಸಿ ಮತ್ತು ವಂದಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಜಿ ಬಿ ಸಜ್ಜನ್,  ಎ ಬಿ ಗೌಡಪ್ಪನವರ್,  ಬಿ ಬಿ ಕುದರಿಮನಿ, ಡಾ. ಎಂ ಪಿ ಚಕ್ರವರ್ತಿ, ಪಿ ಎಸ್ ಲೋನಾರಿ ಮತ್ತು ಅತಿಥಿ ಉಪನ್ಯಾಸಕರಾದ ಎಂ ಪಿ ಗೋವಿಂದಗೋಳ,  ಎಂ . ಕೆ ಕುಲಗೋಡ, ಆರ್ ಎಂ ಹುಡೇದಮನಿ, ಆರ್ ವಿ ನಡುವಿನಮನಿ, ಸಿದ್ದು ಸಂಗಮ, ನೀಲಾ ಪಟ್ಟಣಶೆಟ್ಟಿ, ಧರೆಪ್ಪ ಮರನೂರ್ ಊರಿನ ಹಿರಿಯರು ಪ್ರೌಢ ಶಾಲೆಯ ಶಿಕ್ಷಕರು ಇನ್ನಿತರ ಈ ಸಂದರ್ಭದಲ್ಲಿ ಹಾಜರಿದ್ದರು.

ಸುದ್ದಿ ಓದಿ