ವಿದ್ಯಾರ್ಥಿಗಳು ಉತ್ತಮ ಮೌಲ್ಯಗಳನ್ನು ಬೇಳೆಸಿಕೊಳ್ಳಬೇಕು : ಶ್ರೀಶೈಲ ಕಂಕಣವಾಡಿ
ವಿದ್ಯಾರ್ಥಿಗಳು ಉತ್ತಮ ಮೌಲ್ಯಗಳನ್ನು ಬೇಳೆಸಿಕೊಳ್ಳಬೇಕು : ಶ್ರೀಶೈಲ ಕಂಕಣವಾಡಿ
ಮಹಾಲಿಂಗಪುರ 19:ನಗರದ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಕಲಾ,ವಿಜ್ಞಾನ ಹಾಗೂ ಡಿ.ಡಿ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರತಿಭಾ ಪುರಸ್ಕಾರ,ಸಮಾವೇಶ ಮತ್ತು ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಬಾಗಲಕೋಟೆ ಜಂಟಿ ನಿರ್ದೇಶಕರಾದ ಶ್ರೀಶೈಲ ಕಂಕಣವಾಡಿ ಅವರು ಉದ್ಘಾಟಿಸಿ ಮಾತನಾಡಿ.ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಹೋಂದಬೇಕು.ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಿ.ಈ ದಿನಮಾನಗಳು ಸ್ಫರ್ದಾತ್ಮಕವಾಗಿರುವುದರಿಂದ ವಿದ್ಯಾರ್ಥಿಗಳು ಪದವಿಯಲ್ಲೇ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬೇಕು.ಉತ್ತಮ ಮೌಲ್ಯಗಳನ್ನು ಬೇಳೆಸಿಕೊಂಡಾಗ ಮಾತ್ರ ಸಾಧನೆ ಮಾಡಲು ಸಾದ್ಯ ಎಂದು ಶ್ರೀಶೈಲ ಕಂಕಣವಾಡಿ ಹೇಳಿದರು.
ಪದವಿ ಪ್ರಾಚಾರ್ಯರಾದ ಡಾ. ಕೆ ಎಂ ಅವರಾದಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದರೆ ಶಿಕ್ಷಕರಿಗೆ ಹಾಗೂ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ. ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಅನುಗುನವಾಗಿ ಗುರಿಯೆಕಡೆ ಕಮನಹರಿಸಿ ಎಂದರು.
ಮಹಾಲಿಂಗಪುರದ ಡಾ. ರಾಧಾಕೃಷ್ಣ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಶ್ರೀ ಶಶಿಧರ ಉಳ್ಳಾಗಡ್ಡಿ ಶ್ರೀ ಪ್ರಕಾಶ ಕೋಟಿನ ತೋಟ ಅವರು ರಚಿಸಿದ ಡಾ. ಅಶೋಕ ನರೋಡೆಯವರ ‘ಜೀವನ ಚರಿತ್ರೆ’ ಸಂಪುಟವನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಂಟಿ ನಿರ್ದೇಶಕರಾದ ಶ್ರೀಶೈಲ ಕಂಕಣವಾಡಿ,ಪದವಿ ಪ್ರಾಚಾರ್ಯರಾದ ಡಾ ಕೆ ಎಂ ಅವರಾದಿ,ಸಂಯೋಜಕರಾದ ಡಾ. ಅಶೋಕ ನರೋಡೆ,ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಅಶೋಕ ಅಂಗಡಿ,ಸಂತೋಷ ಹುದ್ದಾರ,ಅಲ್ಯೂಮಿನಾಯ್ ಅಧ್ಯಕ್ಷರಾದ ಪ್ರೊ. ಶಿವಾನಂದ ಮೆಳವಂಕಿ, ಪ್ರಕಾಶ ಕೋಟಿನ ತೋಟ,ಶಶಿಧರ ಉಳ್ಳಾಗಡ್ಡಿ, ಶಿವಲಿಂಗ ಸಿದ್ನಾಳ,ಕು ದೀಪಾ ಅಮ್ಮಣಗಿ, ನ್ಯಾಯವಾದಿಗಳಾದ ಮಹಾಲಿಂಗ ಗೋಕಾವಿ, ಸುರೇಶ ಮಡಿವಾಳ, ಸಿದ್ದು ಹುದ್ದಾರ,ಸಂಜು ಶಿರೋಳ ,ಮಹಾಂತೇಶ ಪಾಟೀಲ, ಬಸವರಾಜ ಕುದ್ರಿಮನಿ,ಹಾಗೂ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಎಸ್ ಎಚ್ ಮೆಳವಂಕಿ,ಸ್ವಾಗತಿಸಿದರು, ಶ್ರೀಮತಿ ಜಯಮಂಗಲಾ ಪಾಟೀಲ,ಗಣ್ಯರಿಗೆ ಗ್ರಂಥ ಸಮರೆ್ಣ ಮಾಡಿದರು, ಶ್ರೀ ಆಯ್ ಸಿ ಶಿರೋಳ ನಿರೂಪಿಸಿ, ವಂದಿಸಿದರು.