ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ : ಇಂದು ಐದು ಜನ ನಾಮಪತ್ರ ಸಲ್ಲಿಕೆ
ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ : ಇಂದು ಐದು ಜನ ನಾಮಪತ್ರ ಸಲ್ಲಿಕೆ
ಬಳ್ಳಾರಿ 03 : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಚುನಾವಣೆ ಪ್ರಯುಕ್ತ ಇಂದು ಶಿಕ್ಷಕರ ಕ್ಷೇತ್ರದಿಂದ ಐದು ಜನ ನಾಮಪತ್ರ ಸಲ್ಲಿಸಿದರು. ಈ ಚುನಾವಣೆಯಲ್ಲಿ ಸಂಘಕ್ಕೆ 66 ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗುವುದು, ಆ ಸದಸ್ಯರೆಲ್ಲರೂ ಸೇರಿ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುವರು ಎಂದು ಚುನಾವಣಾ ಅಧಿಕಾರಿಗಳಾದ ಕೆ ಅಂಜಿನಪ್ಪ ತಿಳಿಸಿದರು.ಶಿಕ್ಷಕರ ಕ್ಷೇತ್ರದ ಐದು ಜನ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗಾಗಿ ಎರಡು ತಂಡಗಳಿಂದ 10 ಹುರಿಯಾಳುಗಳು ಸ್ಪರ್ಧೆಯಲ್ಲಿದ್ದು ಇಂದು ಸಮಾನಮಸ್ಕಾರ ತಂಡದಿಂದ ಶಿಕ್ಷಕರಾದ ಎನ್ ರಮೇಶ್ ಕೊರಲಗುಂದೆ, ಜೀವೈ ತಿಪ್ಪಾರೆಡ್ಡಿ ಚಾನೆಲ್, ಕೆ ಬಸವರಾಜ್ ಕಂಬಳಿ ಬಜಾರ್, ಮಲ್ಲಿ ಏಕೆ ಬಸರಕೋಡ್, ಜಯಲಕ್ಷ್ಮಿ ಏನ್ ಎಸ್ ಕೌಲ್ ಬಜಾರ್, ಬಳ್ಳಾರಿ ಇವರುಗಳು ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಏನ್ಜಿಓ ಕಚೇರಿಯಲ್ಲಿ ಚುನಾವಣಾ ಅಧಿಕಾರಿಗಳಾದ ಕೆ ಅಂಜಿನಪ್ಪ ಅವರಿಗೆ ನಾಮಪತ್ರವನ್ನು ಸಲ್ಲಿಸಿದರು.
49 ಇಲಾಖೆಗಳ ಸುಮಾರು 4049 ಮತದಾರರು ಇದ್ದು ಇವರಲ್ಲಿ 66 ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಈ ಚುನಾವಣೆಯ ಮೂಲಕ ಆಯ್ಕೆ ಮಾಡಲಾಗುವುದು, ಈ 66 ಜನ ಕಾರ್ಯಕಾರಿ ಸಮಿತಿ ಸದಸ್ಯರು ಸೇರಿ ಒಬ್ಬ ಜಿಲ್ಲಾಧ್ಯಕ್ಷನನ್ನು ಚುನಾವಣೆ ಮೂಲಕ ಆರಿಸಲಾಗುವುದು. ಅಕ್ಟೋಬರ್ 28ರಿಂದ ನವಂಬರ್ 7ರವರೆಗೆ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ನಾಮಪತ್ರವನ್ನು ಸಲ್ಲಿಸಬಹುದಾಗಿದೆ. ನವಂಬರ್ 16 ಸೋಮವಾರದಂದು ನಗರದ ಸರ್ಕಾರಿ ಪ್ರೌಢಶಾಲೆ ಮಾಜಿ ಪುರಸಭೆ ಬಳ್ಳಾರಿ ಯಲ್ಲಿ ಮುಂಜಾನೆ 9:00ಯಿಂದ ಸಂಜೆ 4:00 ವರೆಗೆ ಚುನಾವಣೆ ನಡೆಯಲಿದ್ದು, ಅಂದೆ ಮತ ಎಣಿಕೆ ಕಾರ್ಯವನ್ನು ನಡೆಸಿ ವಿಜೇತ ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದು ಚುನಾವಣೆ ಅಧಿಕಾರಿ ತಿಳಿಸಿದರು. ಈ ಸಂದರ್ಭದಲ್ಲಿ ಉಪ ಚುನಾವಣಾಧಿಕಾರಿ ಹರಿಪ್ರಸಾದ್, ವಿ ಆರ್ ಸಿದ್ದಾರ್ಥ, ಜಿಲಾನಿ ಸೇರಿದಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಗೃಹ ಮಂಡಳಿ ಅಧ್ಯಕ್ಷ ಎಂ ಟಿ ಮಲ್ಲೇಶಪ್ಪ, ಬಡ್ತಿ ಮುಖ್ಯ ಗುರುಗಳ ಸಂಘದ ಅಧ್ಯಕ್ಷರಾದ ಮೆಹತಾಬ್, ಪ್ರಾಥಮಿಕ ಶಾಲಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಪಂಪನಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಿವಾಜಿ ರಾವ್, ಏಕೆ ಹನುಮಂತಪ್ಪ, ರಘೋತ್ತಮ್ ರಾವ್, ನಾಗಪ್ಪ, ವೀರಭದ್ರ ಆಚಾರ್, ಸೇರಿದಂತೆ ಸುಮಾರು 250 ಜನ ಶಿಕ್ಷಕರಿದ್ದರು.