ಮಾರ್ಚ್‌ 4 ರಿಂದ ಶ್ರೀಶೈಲ 22ನೇ ವರ್ಷದ ಪಾದಯಾತ್ರೆ

ಮಾರ್ಚ್‌ 4 ರಿಂದ ಶ್ರೀಶೈಲ 22ನೇ ವರ್ಷದ ಪಾದಯಾತ್ರೆ

ಕೊಲ್ಹಾರ 03: ಮಲ್ಲಿಕಾರ್ಜುನಸ್ವಾಮಿ ಪಾದಯಾತ್ರೆ ಹಾಗೂ ಅನ್ನದಾಸೋಹ ಕಮಿಟಿ ವತಿಯಿಂದ ಕೊಲ್ಹಾರ ಪಟ್ಟಣದಿಂದ ಶ್ರೀಶೈಲದವರೆಗೆ 22ನೇ ವರ್ಷದ ಪಾದಯಾತ್ರೆ ಮಾರ್ಚ್‌ 4 ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಪಾದಯಾತ್ರೆ ಕಮಿಟಿ ಪದಾಧಿಕಾರಿಗಳು ತಿಳಿಸಿದರು. ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಮಾರ್ಚ್‌ 4 ಬುಧವಾರ ಮುಂಜಾನೆ 9 ಗಂಟೆಗೆ ಕೊಲ್ಹಾರ ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದಿಂದ ಹೊರಡುವ ಪಾದಯಾತ್ರೆ ಮಾರ್ಚ್‌ 15 ರಂದು ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ಸನ್ನಿಧಿಗೆ ತಲುಪಲಿದೆ. ಪಟ್ಟಣದಿಂದ ಹೊರಡುವ ಪಾದಯಾತ್ರಿಕರಿಗೆ  ಶ್ರೀಶೈಲ ಮುಟ್ಟುವರೆಗೆ ಪ್ರಸಾದ ವ್ಯವಸ್ಥೆ ಇರುತ್ತದೆ.

ಪಾದಯಾತ್ರಿಗಳು ಹೊರಡುವ ಮುನ್ನ ಕಂಬಿ ಪೂಜೆಗೆ ಕಾಯಿ, ಆರತಿ ಹಾಗೂ ಎಲ್ಲ ಭಕ್ತ ಬಳಗದವರನ್ನು ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಕರೆದುಕೊಂಡು ಬರಬೇಕು.ತಾಲೂಕಿನ ಸುತ್ತಮುತ್ತಲಿನ ಹಳ್ಳಿಯವರಿಗೂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು  ಕಮೀಟಿಯವರ ಹತ್ತಿರ 100/- ರೂ.ಕೊಟ್ಟು ಹೆಸರು ನೋಂದಾಯಿಸತಕ್ಕದ್ದು. ತುಲಾಬಾರ ಮಾಡಿಸುವವರು 1 ಗಂಟೆ ಮುಂಚಿತವಾಗಿ ಕಮೀಟಿ ಯವರ ಹತ್ತಿರ ಹೆಸರು ನೊಂದಾಯಿಸಬೇಕು. ತುಲಾಬಾರವನ್ನು ತಂದೆ-ತಾಯಿ ಆದವರು ತಮ್ಮ ಮಕ್ಕಳ ಮತ್ತು ಮೊಮ್ಮಕ್ಕಳ ತುಲಾಬಾರವನ್ನು ಮಾಡಿಸಬಹುದು. ತುಲಾಬಾರವನ್ನು ಮಕ್ಕಳಾದವರು ತಮ್ಮ ತಂದೆ ತಾಯಿಯರ ತುಲಾಬಾರವನ್ನು ಮಾಡಿಸಬಹುದು ಹೆಚ್ಚಿನ ಮಾಹಿತಿಗಾಗಿ ಕಮೀಟಿಯವರ ಈ ಕೆಳಕಂಡ ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಿದ್ದಾರೆ.

ಸುದ್ದಿ ಓದಿ