ಕಂಪ್ಲಿ

ದೇವಲಾಪುರದಲ್ಲಿ ಸಂಭ್ರಮದ ಶ್ರೀ ಕನಕದಾಸ ಜಯಂತಿ.

ದೇವಲಾಪುರದಲ್ಲಿ ಸಂಭ್ರಮದ ಶ್ರೀ ಕನಕದಾಸ ಜಯಂತಿ.

ದೇವಲಾಪುರದಲ್ಲಿ ಸಂಭ್ರಮದ ಶ್ರೀ ಕನಕದಾಸ ಜಯಂತಿ. 

ಕಂಪ್ಲಿ 19: ತಾಲ್ಲೂಕಿನ ದೇವಲಾಪುರ ಗ್ರಾಮದಲ್ಲಿ ಭಕ್ತ ಶ್ರೇಷ್ಠ ಕನಕದಾಸರ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಿದರು.  

ಗ್ರಾಮದ ಹಂಪಿ ವೃತ್ತದಲ್ಲಿರುವ ಶ್ರೀ ಕನಕದಾಸರ ವೃತ್ತಕ್ಕೆ ವಿದ್ಯುತ್ ದೀಪ ಹಾಗೂ ವಿವಿಧ ಹೂಗಳಿಂದ ಅಲಂಕರಿಸಿ, ಕನಕದಾಸರ ಪ್ರತಿಗೆ ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್ ಮಾಲಾರೆ​‍್ಣ ಮಾಡಿ ವಿಶೇಷ ಪೂಜೆಯನ್ನು ಸಲ್ಲಿಸಿದರು. 

ನಂತರ ಅಲಂಕೃತ ವಾಹನದಲ್ಲಿ ಕನಕದಾಸರ ಭಾವಚಿತ್ರವನ್ನಿಟ್ಟು ಮೆರವಣಿಗೆಗೆ ಶಾಸಕ ಜೆ.ಎನ್‌.ಗಣೇಶ್ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಮಹಿಳೆಯರ ಕಳಸ ಕನ್ನಡಿ, ಹಾಲುಮತ ಸಮಾಜದ ವಿಶೇಷ ವಾದ್ಯವಾದ ಡೊಳ್ಳು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು, ಮಂಗಳವಾದ್ಯಗಳು ಭಾಗವಹಿಸಿ ವಿಶೇಷ ಮೆರಗನ್ನು ನೀಡಿದ್ದವು. ಶಾಸಕ ಜೆ.ಎನ್‌.ಗಣೇಶ್ ಡೊಳ್ಳು ಬಾರಿಸುವ ಮೂಲಕ, ನೃತ್ಯ ಮಾಡುವ ಮೂಲಕ ಗ್ರಾಮಸ್ಥರ ಗಮನ ಸೆಳೆದರು. ಕನಕದಾಸರ ಭಾವಚಿತ್ರದ ಮೆರವಣಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಿಂದ ನಡೆಯಿತು. 

ಮೆರವಣಿಗೆಯಲ್ಲಿ ಗ್ರಾಪಂ ಅಧ್ಯಕ್ಷರು,ಸದಸ್ಯರು, ಎಪಿಎಂಸಿ, ಸಹಕಾರ ಸಂಘಗಳ ಪ್ರತಿನಿಧಿಗಳು, ಹಾಲಿ,ಮಾಜಿ ಜನಪ್ರತಿನಿಧಿಗಳು, ಹಾಕುಮತ ಸಮಾಜದ ಮುಖಂಡರು, ಮಹಿಳೆಯರು, ಮಕ್ಕಳು, ಸಾರ್ವಜನಿಕರು ಭಾಗವಹಿಸಿದ್ದರು. 


ಸುದ್ದಿ ಓದಿ