ಕ್ರೀಡೆಗಳು ನಮ್ಮನ್ನು ದೈಹಿಕ ಮಾನಸಿಕವಾಗಿ ಬಲಿಷ್ಠಗೊಳುಸುತ್ತವೆ : ಪ್ರವೀಣ ಬೀಳಗಿ
ಮಹಾಲಿಂಗಪುರ : ಯಾವ ವ್ಯಕ್ತಿ ತನ್ನ ಜೀವನದಲ್ಲಿ ಕ್ರೀಡೆಯನ್ನು ಅಳವಡಿಸಿಕೊಂಡು ಬದುಕು ಸಾಗಿಸುತ್ತಾನೋ ಅವನು ಸದೃಢವಾಗಿರುತ್ತಾನೆ, ಇಂದಿನ ಮಕ್ಕಳು ಮೊಬೈಲ್ ಆಟಗಳನ್ನು ಬಿಟ್ಟು ನಿಜವಾದ ಆಟಗಳನ್ನು ಅಳವಡಿಕೊಳ್ಳುವುದು ಬಹಳ ಮುಖ್ಯವಾಗಿದೆ, ಮಕ್ಕಳಿಗೆ ಆತದೊಂದಿಗೆ ಪಾಠ ಎನ್ನುವ ಮಂತ್ರವನ್ನು ಅಳವಡಿಸಿಕೊಳ್ಳಬೇಕು ಆಗಲೇ ಮಕ್ಕಳು ಮಾನಸಿಕ ಮತ್ತು ದೈಹಿಕವಾಗಿ ಬಲಿಷ್ಠರಾಗಲು ಸಾಧ್ಯ ಎಂದು ನಗರ ಪೊಲೀಸ್ ಠಾಣೆ ಪಿ ಎಸ್ ಅಯ್ ಪ್ರವೀಣ್ ಬೀಳಗಿ ಹೇಳಿದರು.
ಅವರು ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಢಪಳಾಪುರ ವಿದ್ಯಾ ವಿಹಾರ ಶಾಲೆಯಲ್ಲಿ ನಡೆದ ಸನ್ 2023-24 ನೇ ಸಾಲಿನ ವಾಷರ್ಿಕ ಕ್ರೀಡಾಕೂಟವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನಸಿ ಮಾತನಾಡಿ ಕ್ರೀಡೆಗಳಲ್ಲಿ ಸೋಲು ಗೆಲವು ಮುಖ್ಯವಲ್ಲ ಭಾಗವಹಿಸುವುದು ಬಹಳ ಮುಖ್ಯ ಎಂದು ಹೇಳಿದರು.
ಈ ಕ್ರೀಡಾ ಕೂಟವು ಡಿ. 01, 02ರಂದು ನಡೆಸಲಾಯಿತು. ಈ ಒಂದು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಡಾ.ಪವನ್ ಕುಮಾರ್ ಸೋರಗಾಂವಿ, ಮುಧೋಳ ತಾಲೂಕಿನ ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀ ಕುರಣಿ ಗುರುಗಳು, ನಮ್ಮ ಶಾಲೆಯ ಪ್ರಾಂಶುಪಾಲರಾದ ಶ್ರೀ ಲೂಯಿಸ್ ಬರೆಟೋ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಈ ಒಂದು ಕಾರ್ಯಕ್ರಮವು ನಮ್ಮ ಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ರಾಜಪ್ಪ ನಡೆಗೇರಿ ಅವರ ನೇತೃತ್ವದಲ್ಲಿ ಜರುಗಿದ್ದು , ನರ್ಸರಿಯಿಂದ 10 ನೇ ತರಗತಿಯ ವಿದ್ಯಾಥರ್ಿಗಳು ತಂಡಗಳಿಗನುಸಾರವಾಗಿ ಭಾಗವಹಿಸಿದ್ದು ಅತ್ಯಂತ ಉತ್ಸಾಹದಿಂದ ಕ್ರೀಡೆಗಳಲ್ಲಿ ಭಾಗವಹಿಸಿ ಆಟವಾಡಿ ಪ್ರಶಸ್ತಿಗಳನ್ನು ಪಡೆದು ಸಂಭ್ರಮಿಸಿದರು