ಶಿರಸಿ ತಾಲೂಕಿನ ಅಧ್ಯಕ್ಷ ಜಿ.ವಿ.ಹೆಗಡೆ ನಿಧನಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಸಂತಾಪ
ಶಿರಸಿ ತಾಲೂಕಿನ ಅಧ್ಯಕ್ಷ ಜಿ.ವಿ.ಹೆಗಡೆ ನಿಧನಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಸಂತಾಪ
ಬೆಂಗಳೂರು 13: ಸ್ನೇಹ ಜೀವಿ ವಿದ್ಯಾರ್ಥಿಗಳಿಗೆ ಅಚ್ಚು ಮೆಚ್ಚಿನ ಶಿಕ್ಷಕ ಜಿ.ಯು ಹೆಗ್ಡೆಯವರು ನಿಧನಕ್ಕೆ ವಿಧಾನ ಪರಿಷತ್ ಸಭಾಪತಿ ಮಾನ್ಯಶ್ರೀ ಬಸವರಾಜ ಎಸ್. ಹೊರಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ತಮ್ಮ ಶೋಕ ಸಂದೇಶದಲ್ಲಿ, ಕಳೆದ 25ವರ್ಷಗಳಿಂದ ಶ್ರೀದೇವಿ ಪ್ರೌಢಶಾಲೆ ಹುಲೇಕಲ್, ಶಿರಸಿ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿ ಮಾಧ್ಯಮಿಕ ಶಾಲಾ ನೌಕರರ ಸಂಘದ ಶಿರಸಿ ತಾಲೂಕಿನ ಅಧ್ಯಕ್ಷರಾಗಿ, ಸಂಪನ್ಮೂಲ ಶಿಕ್ಷಕರಾಗಿ ಶಿಕ್ಷಕ ವಲಯದಲ್ಲಿ ಅಪಾರ ಜನಮನ್ನಣೆ ಗಳಿಸಿದ ಜಿ.ಯು ಹೆಗ್ಡೆಯವರು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕ ಸ್ನೇಹ ಜೀವಿ ಆದ ಜಿ.ಯು ಹೆಗ್ಡೆಯವರು ಬೆಳಗ್ಗೆ ಕರ್ತವ್ಯ ನಿರತರಾಗಿರುವಾಗಲೇ ತೀವ್ರ ಹೃದಯಾಘಾತದಿಂದ ಮರಣ ಹೊಂದಿದ್ದು, ಇವರ ಅಗಲಿಕೆ ವಿದ್ಯಾರ್ಥಿಗಳಿಗೆ ಮತ್ತು ಸಂಘಕ್ಕೆ ತುಂಬಲಾರದ ನಷ್ಟ ಎಂದು ಬಸವರಾಜ ಎಸ್. ಹೊರಟ್ಟಿ ಕಂಬನಿ ಮಿಡಿದಿದ್ದಾರೆ.ಅಪ್ರತಿಮ ಸಂಘಟನಾ ಚತುರರಾಗಿ ಜನಾನುರಾಗಿಯಾಗಿದ್ದ ಜಿ.ಯು ಹೆಗ್ಡೆ ಬಹು ಬೇಗನೆ ಇಹಲೋಕ ತ್ಯಜಿಸಿರುವುದು ದುಃಖದ ಸಂಗತಿ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಹಾಗೂ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸನ್ಮಾನ್ಯ ಶ್ರೀ ಬಸವರಾಜ ಎಸ್. ಹೊರಟ್ಟಿ ಪ್ರಾರ್ಥಿಸಿದ್ದಾರೆ.