ದಕ್ಷಿಣ ವಲಯ ಅಂತರ ವಿವಿ ಪಂದ್ಯ: ಗುಲಬರ್ಗಾ ವಿವಿ ಕಬ್ಬಡಿ ತಂಡ ಭಾಗಿ

ದಕ್ಷಿಣ ವಲಯ ಅಂತರ ವಿವಿ ಪಂದ್ಯ: ಗುಲಬರ್ಗಾ ವಿವಿ ಕಬ್ಬಡಿ ತಂಡ ಭಾಗಿ


ದಕ್ಷಿಣ ವಲಯ ಅಂತರ ವಿವಿ ಪಂದ್ಯ: ಗುಲಬರ್ಗಾ ವಿವಿ ಕಬ್ಬಡಿ ತಂಡ ಭಾಗಿ 

ಕಲಬುರಗಿ 28: ಗುಲಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಪುರುಷರ ಕಬ್ಬಡಿ (ಪುರುಷ) ತಂಡವು ತಮಿಳುನಾಡಿನ ಕಟ್ಟಂಕುಲಥೋರ್‌ನ ಎಸ್‌ಆರ್‌ಎಂ ವಿಶ್ವವಿದ್ಯಾಲಯದಲ್ಲಿ ಅ. 30 ರಿಂದ ನ. 4 2024 ರವರೆಗೆ ನಡೆಯಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಪಂದ್ಯದಲ್ಲಿ ಭಾಗವಹಿಸಲಿದೆ.    

ತಂಡದ ನಾಯಕ ಭರತ ಹಾಗೂ ಸದಸ್ಯರಾಗಿ ಕಪಿಲ, ಆಕಾಶ, ದುರ್ಜನ್, ರವಿಕುಮಾರ, ಬಸವರಾಜ, ನಾಗೇಶ, ವಾಸುದೇವ, ಲಕ್ಷ್ಮಣ, ವಿಶ್ವರಾಜ, ರಾಜಕುಮಾರ ಮತ್ತು ನಾಗೇಶ ಇವರು ಭಾಗವಹಿಸುವರು. ತಂಡದ ವ್ಯವಸ್ಥಾಪಕರಾಗಿ ಚಿತ್ತಾಪೂರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಲಕ್ಷೀಪುತ್ರ ಪಾಸೋಡಿ ತೆರಳುವರು.   

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ, ಕುಲಸಚಿವ ಪ್ರೊ. ರಾಜನಾಳ್ಕರ್ ಲಕ್ಷ್ಮಣ, ಮೌಲ್ಯಮಾಪನ ಕುಲಸಚಿವೆ ಪ್ರೊ. ಮೇಧಾವಿನಿ ಕಟ್ಟಿ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎನ್‌. ಜಿ. ಕಣ್ಣೂರು, ಸಂಯೋಜಕ ಹಾಗೂ ಪ್ರಾಂಶುಪಾಲ ಡಾ. ಎಸ್‌.ಹೆಚ್‌. ಜಂಗೆ, ಯೋಗ ತಾಂತ್ರಿಕ ಸಹಾಯಕ ಡಾ. ಚಂದ್ರಕಾಂತ ಬಿರಾದಾರ, ಜಿಮ್ನಾಸ್ಟಿಕ್ ತಾಂತ್ರಿಕ ಸಹಾಯಕ ಪ್ರಶಾಂತಕುಮಾರ್ ಡಿ,  ಹಾಗೂ ಕ್ರೀಡಾ ಸಹಾಯಕ ಅರುಣ್ ಕುಮಾರ್ ಹೆಚ್‌. ಇವರು ತಂಡಕ್ಕೆ ಶುಭ ಹಾರೈಸಿದ್ದಾರೆ. 


ಸುದ್ದಿ ಓದಿ