ಸಮಾಜ ಸೇವೆಯೇ ಮಾನವನ ಸಂಪತ್ತು: ರಾಜೇಂದ್ರ ಸದಾಶಿವ ಗುರೂಜಿ
ರನ್ನ ಬೆಳಗಲಿ 28: ಋಷಿಯೋಗಾಶ್ರಮ ರವರು ಮಹಾಲಿಂಗಪ್ಪ ಗುಂಜಿಗಾವಿ ಅವರು ಸಂಘಟನೆ ಹೋರಾಟಕ್ಕಾಗಿ ತಮ್ಮ ಜೀವನ ಸವೆಸಿದ ಪರಿ ಅಮೋಘವಾಗಿದೆ, ಅವರು ಗಳಿಸಿದ ಸಂಪತ್ತು ಕಣ್ಣೆದುರಿಗಿದೆ, ಮಾನವನ ನಿಜವಾದ ಸಂಪತ್ತು ಎಂದರೆ ಆತನ ಬೆಂಬಲಿಗರಾಗಿ, ಸದಾಕಾಲ ಇರುವ ಜನರ ಪ್ರೀತಿ ವಿಶ್ವಾಸ ನಂಬಿಕೆ. ಇವರು ಈಗಾಗಲೇ ಈ ಸಂಪತ್ತನ್ನು ಗಳಿಸಿದ್ದಾರೆ ಎಂದು ರನ್ನ ಬೆಳಗಲಿ. ಋಷಿಯೋಗಾಶ್ರಮ ಪರಮಪೂಜ್ಯ ಯೋಗ ರಾಜೇಂದ್ರ ಸದಾಶಿವ ಗುರೂಜಿ ಹೇಳಿದರು.
ಶ್ರೀರಾಮ್ ಸೇನಾ ವಲಯ ಘಟಕ ರನ್ನಬೆಳಗಲಿಯ ಆಶ್ರಯದಲ್ಲಿ ಶ್ರೀರಾಮ್ ಸೇನಾ ರಾಜ್ಯ ಪ್ರಧಾನ ಕಾರ್ಯದಶರ್ಿಗಳಾದ ಮಹಾಲಿಂಗಪ್ಪ ಗುಂಜಿಗಾವಿ ರವರ ಅದ್ದೂರಿ ಹುಟ್ಟುಹಬ್ಬದ ಸಮಾರಂಭ ಜರುಗಿತು.
ಶ್ರೀರಾಮಸೇನೆಯ ಎಲ್ಲಾ ಕಾರ್ಯಕರ್ತರು ಇವರ ಆದರ್ಶಗಳನ್ನು ಪಾಲಿಸಿಕೊಂಡು ಹೋಗಿದ್ದೆ ಆದರೆ ನೀವು ಉತ್ತಮ ನಾಯಕರು ಆಗಲು ಯಾವ ಸಂದೇಹವಿಲ್ಲ ಎಂಬ ವಿಚಾರವನ್ನು ತಿಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ರಾಜ್ಯ ಕಾಂಗ್ರೆಸ್ ಕಿಸಾನ್ ಘಟಕದ ಮುಖಂಡರಾದ ಸಿದ್ದಣ್ಣ ಕೊಣ್ಣೂರ ರವರು ನನ್ನ ಬಾಲ್ಯ ಸ್ನೇಹಿತನ ಹುಟ್ಟುಹಬ್ಬಕ್ಕೆ ಶುಭಕೋರುವವರು ಜೊತೆಗೆ ನಾವು ಕಲಿಕೆಯಲ್ಲಿ ಹಿಂದೆ ಉಳಿದಿದ್ದರೂ ಕೂಡ, ನಮ್ಮಿಬ್ಬರಲ್ಲಿ ಸಮಾಜ ದೇಶ, ರಾಷ್ಟ್ರಭಕ್ತಿ, ಸಂಘಟನೆಗಳು ನಮ್ಮನ್ನ ಜಾಗೃತಗೊಳಿಸುತ್ತಿದ್ದಾವು. ಎಂಬ ವಿಚಾರ ತಿಳಿಸುವುದರ ಜೊತೆಗೆ ತಮ್ಮ ಬಾಲ್ಯದ ಘಟನೆಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ಸಿದ್ದು ಸಾಂಗ್ಲಿಕರ. ರಾಜ್ಯ ನೇಕಾರ ಸಂಘದ ಅಧ್ಯಕ್ಷ ಶಿವಲಿಂಗ ತಕರ್ಿ , ಜಿಲ್ಲಾ ಶ್ರೀರಾಮ್ ಸೇನಾ ಹಿಂದುಸ್ತಾನ್ ಅಧ್ಯಕ್ಷರಾದ ನಾಗರಾಜ್ ಭಜಂತ್ರಿ. ಮಾತನಾಡಿದರು. ಈ ಸಮಯದಲ್ಲಿ ಮಹಾಲಿಂಗಣ್ಣ ಗುಂಜಿಗಾವಿ ರವರ ಕುರಿತು,ಯುವ ಸಾಹಿತಿಯಾದ ಪರಶುರಾಮ ಕ್ವಾನ್ಯಾಗೊಳ ರವರು ಸುಂದರ ಗೀತೆ ರಚಿಸಿ ಹಾಡಿದರು, ಹಣಮಂತ ಚಂದಪ್ಪನವರ ರವರು ಗುಂಜಿಗಾವಿ ರವರ ಕಿರುಪರಿಚಯನ್ನು ದ್ವನಿ ಸುರಳಿ ಮೂಲಕ ತಿಳಿಸಿದರು. ಇವರಿಗೆ ಸನ್ಮಾನಿಸುವದರ ಜೊತೆಗೆ ಪತ್ರಕರ್ತ ಮಹಾದೇವ ಕುಲಗೋಡ ಹಾಗೂ ರನ್ನ ಬೆಳಗಲಿಯ ನೂತನ ಕರ್ನಾಟಕ ಜಾನಪದ ಪರಿಸತ್ತಿನ ಅಧ್ಯಕ್ಷರಾದ ರಾಘವೇಂದ್ರ ನೀಲಣ್ಣವರ ರವರಿಗೂ ಸನ್ಮಾನಿಸಿ ಗೌರವಿಸಿದರು..ಶಿಕ್ಷಕರಾದ ಹನುಮಂತ ಚಂದಪ್ಪನವರ ರವರು ಸ್ವಾಗತಭಾಷಣ ಮಾಡುವ ಜೊತೆಗೆ ಪ್ರಾಸ್ತವಿಕವಾಗಿಮಾತನಾಡಿದರು. ಶಿಕ್ಷಕರರಾದ ರಾಘವೇಂದ್ರ ನೀಲಣ್ಣವರ ನಿರೂಪಿಸಿ ವೇದಿಕೆಗೆ ವಂದಿಸಿದರು. ರಾಜ್ಯ ಜಿಲ್ಲೆಯ ತಾಲೂಕು ಹಾಗೂ ಅನೇಕ ಹಳ್ಳಿಗಳಿಂದ ರಾಮಸೇನೆ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು