ಕೆಂಚಮ್ಮದೇವಿ ದೇವಸ್ಥಾನದಲ್ಲಿ ಶಿವಾನಂದ ಪ್ರವಚನ-ಕೀರ್ತನೆ ಪ್ರಾರಂಭ
ಲೋಕದರ್ಶನ ವರದಿ
ರೋಣ30: ತಾಲೂಕಿನ ಹುನಗುಂಡಿ ಗ್ರಾಮದ ಕೆಂಚಮ್ಮದೇವಿ ದೇವಸ್ಥಾನದಲ್ಲಿ ಶಿವಾನಂದ ಪ್ರವಚನ ಹಾಗೂ ಕೀರ್ತನ ಪ್ರಾರಂಭವಾಯಿತು.ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಿಜಗುಣ ಮಹಾಸ್ವಾಮಿಗಳು ಶ್ರೀ.ಸದ್ಗುರು ಶಿವಾನಂದ ಬ್ರಹ್ಮವಿದ್ಯಾಶ್ರಮ ಹಳಕಟ್ಟಿ,ಇವರು ವಹಿಸಿದ್ದರು ಹಾಗೂ ಸಕ್ಕರಗೌಡ ಎಚ್.ಹಳೆಮನಿ ಶಾಸ್ತ್ರಿಗಳು,ಕೀರ್ತನವನ್ನು ನಡೆಸಿದರು. ಸಭೆಯಲ್ಲಿ ಶ್ರೀ.ರೇವಣಸಿದ್ದಯ್ಯ ಪ.ಸಾಲಿಮಠ ತಬಲಾಜಿ ನಡೆಸಿದರು. ನಂತರ ಬಸವಂತಪ್ಪ ಎಚ್. ತಳವಾರ. ಮಾಜಿ ಗ್ರಾಮ ಪಂಚಾಯತ ಉಪಾಧ್ಯಕ್ಷರು ಮಾತನಾಡಿ ಪುರಾತನ ಕಾಲದಿಂದ ಶಿವಾನಂದ ಪ್ರವಚನ ಕಿರ್ತನ ಪ್ರಾರಂಭಗೊಂಡಿದ್ದು,ಇವುಗಳನ್ನು ಉಳಿಸಿಕೊಳ್ಳುವದು ಗ್ರಾಮೀಣ ಭಾಗದ ಹಿರಿಯರ,ಯುವಕರ ಕರ್ತವ್ಯವಾಗಿದೆ ಎಂದರು.
ಟಿ.ವಿ. ಮತ್ತು ಮಾಧ್ಯಮಗಳ ಹಾವಳಿಯಲ್ಲಿ ಚಲನಚಿತ್ರದ ಅಬ್ಬರದಲ್ಲಿ, ರಸಮಂಜರಿ ಕಾರ್ಯಕ್ರಮಗಳಲ್ಲಿ, ನಾಟಕಗಳಲ್ಲಿ ಈ ಪುರಾಣ,ಪ್ರವಚನ ಕಿರ್ತನೆ ಮಾಯವಾಗಿವೆ.ಪುನಃಚೇತನ ಮಾಡಲಿಕ್ಕೆ ಗ್ರಾಮೀಣ ಪ್ರದೇಶವಾದ ಹುನಗುಂಡಿ ಗ್ರಾಮದಲ್ಲಿ ಸುಮಾರು 10 ವರ್ಷಗಳಿಂದ ಸತತವಾಗಿ ಸಾಧನೆಯನ್ನು ಗ್ರಾಮದ ಹಿರಿಯರು ಯುವಕರು ಮೇಲಿಂದ ಮೇಲೆ ಈ ಕಾರ್ಯಕ್ರಮಗಳನ್ನು ಪ್ರಾರಂಭಮಾಡಿದ್ದಾರೆ. ಗ್ರಾಮದಲ್ಲಿ ದಿನನಿತ್ಯ ನಡೆಯಲಿರುವ ಈ ಕಾರ್ಯಕ್ರಮದ ಪ್ರವಚನ ಕೀರ್ತನವನ್ನು ತಿಳಿದುಕೊಂಡು ಸಮಾಜದಲ್ಲಿ ಉತ್ತಮರಾಗಬೇಕೆಂದು ಯುವಕ ಯುವತಿಯರಿಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಎಸ್.ವಾಯ್. ಮಂಡಸೊಪ್ಪಿ ಮಾತನಾಡಿ ಹುನಗುಂಡಿ ಗ್ರಾಮದ ಹಿರಿಯರು ಯುವಕರು ಕೂಡಿಕೊಂಡು ಶಿವಾನಂದ ಪ್ರವಚನ ಕಿರ್ತನ ಸತತವಾಗಿ ಪ್ರಾರಂಭ ಮಾಡಿಕೊಂಡು ಬಂದಿದ್ದೀರಿ,ಪ್ರತಿದಿನ ಹಿರಿಯರು ಯುವಕರು ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಶಿವಾನಂದರ ತತ್ವಗಳನ್ನು ತಿಳಿದಿಕೊಂಡು ಉತ್ತಮರಾಗಬೇಕೆಂದು ಕರೆ ನೀಡಿದರು.
ದಿವ್ಯ ಸಾನಿಧ್ಯವನ್ನು ನಿಜಗುಣ ಮಹಾಸ್ವಾಮಿಗಳು ಶ್ರೀ.ಸದ್ಗುರು ಶಿವಾನಂದ ಬ್ರಹ್ಮವಿದ್ಯಾಶ್ರಮ ಹಳಕಟ್ಟಿ, ಇವರು ಆಶಿರ್ವಚನ ನೀಡಿದರು.ಹುನಗುಂಡಿ ಗ್ರಾಮದಲ್ಲಿ ಸುಮಾರ 10 ವರ್ಷದಿಂದ ಶಿವಾನಂದರ ಪ್ರವಚನ ಕಿರ್ತನ ಬಹಳ ಅಚ್ಚುಕಟ್ಟಾಗಿ ನೇಡೆಸಿಕೊಂಡು ಬಂದಿದ್ದೀರಿ,ಆ ದೇವರು ಸಕಲ ಸಂಪತ್ತು ಕೊಟ್ಟು ಕಾಪಾಡಲಿ ಎಂದು ಬೇಡಿಕೊಳ್ಳುತ್ತೇನೆ.ಯಾವುದೇ ರೀತಿಯಿಂದ ದೇವರ ಮೇಲೆ ನಂಬಿಕೆ ಇಟ್ಟು ದಿನಾಲೂ ಪ್ರವಚನ ಕಿರ್ತನ ತಿಳಿದುಕೊಂಡರೆ ಸಮಾಜದಲ್ಲಿ ಉತ್ತಮರಾಗಿ ಬಾಳುವಿರಿ, ಎಂದು ಸಭೆಯಲ್ಲಿ ಆಶಿವರ್ಾದ ಮಾಡಿದರು. ಈ ಸಭೆಯಲ್ಲಿ ರಾಚಯ್ಯ ಹಿರೇಮಠ, ವೀರುಪಾಕ್ಷಪ್ಪ ಮುದೇನಗುಡಿ,ಬಿ.ವಾಯ್. ಮಂಡಸೊಪ್ಪಿ,ಎಸ್.ಎಚ್.ಮಂಡಸೊಪ್ಪಿ, ಎ.ಎಸ್.ಗೌಡರ,ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರು ಹುನಗುಂಡಿ,ಶಿವಾಜಿ ಎಚ್. ಮಂಡಸೊಪ್ಪಿ,ಜಿ.ಎಸ್.ಮಂಡಸೊಪ್ಪಿ,ಮಾಜಿ ಅಧ್ಯಕ್ಷರು,ಗ್ರಾಮ ಪಂಚಾಯತ ಹುನಗುಂಡಿ . ಶರಣಪ್ಪ ಕುರಿ,ಶರಣಪ್ಪ ಜಂಗಣ್ಣವರ ಮಲ್ಲಪ್ಪ ಜಂತ್ಲಿ,ರಮೇಶ ಗೂಳಪ್ಪನವರ ಗ್ರಾಮ ಪಂಚಾಯತ ಸದಸ್ಯರು,ಕಳಕಪ್ಪ ವಿರಸನವರ, ಬಸವಪ್ರಭು ವಸ್ತ್ರದ,ಚನ್ನಪ್ಪ ತಳವಾರ, ಯಚ್ಚರಪ್ಪ ಪಿಂಜಾರ,ಹನಮಪ್ಪ ನೇಲಗಿ, ರಾಮಣ್ಣ ತಳವಾರ ಸೇರಿದಂತೆ ಮುಂತಾದವರು ಈ ಸಭೆಯಲ್ಲಿ ಉಪಸ್ಥಿತರಿದ್ದರು