ಡಿ. 6ರಿಂದ ಸಿಂದಗಿ ಪ್ರೀಮಿಯರ್ ಲೀಗ್ ಆರಂಭ
Sindh Premier League starts from December 6th
ಸಿಂದಗಿ 20: ಜಿಲ್ಲೆಯಲ್ಲಿಯೇ ಹೆಸರುವಾಸಿಯಾಗಿರುವ ಹೊನಲು ಬೆಳಕಿನ ಕ್ರಿಕೆಟ್ ಲೀಗ್ ಪಂದ್ಯಗಳು ಪ್ರತಿವರ್ಷದಂತೆ ವಿಶ್ವರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ (ಪುಣ್ಯತಿಥಿ) ಅಂಗವಾಗಿ ಡಿ.6 ಪ್ರಾರಂಭವಾಗುವುದು ಎಂದು ಎಸ್.ಪಿ.ಎಲ್. ಮುಖ್ಯ ಸಂಯೋಜಕ ರಾಜಶೇಖರ ಕೂಚಬಾಳ ಹೇಳಿದರು.
ಡಿ.6ರಿಂದ ಪ್ರಾರಂಭವಾಗುವ ಹೊನಲು ಬೆಳಕಿನ ಕ್ರಿಕೇಟ್ ಲೀಗ್ ಪಂದ್ಯಕ್ಕೆ ಪ್ರಥಮ ಬಹುಮಾನ ರೂ.2ಲಕ್ಷ ಯುವ ಉದ್ಯಮಿ ವೆಂಕಟೇಶ್ ಆರ್ ಗುತ್ತೇದಾರ, ದ್ವಿತೀಯ ಬಹುಮಾನ ರೂ.1ಲಕ್ಷ ಬಿಜೆಪಿ ಮುಖಂಡ ರವಿ ನಾಯ್ಕೋಡಿ, ತೃತೀಯ ಬಹುಮಾನ ರೂ.50ಸಾವಿರ ರೈತ ಮುಖಂಡ ಪೀರು ಕೇರೂರ ಹಾಗೂ ನಾಲ್ಕನೆಯ ಬಹುಮಾನ ಕಾಂಗ್ರೆಸ್ ಯುವ ಮುಖಂಡ ಇರ್ಫಾನ ಬಾಗವಾನ ನೀಡಿದ್ದಾರೆ. ಅರಿವೇ ಅಂಬೇಡ್ಕರ್-ಅಮರ ಅಂಬೇಡ್ಕರ್ ಎಂಬ ಘೋಷವಾಕ್ಯದೊಂದಿಗೆ ಅಂಬೇಡ್ಕರರ ಸ್ಮರಣೆ ಟೂರ್ನಿಯುದ್ದಕ್ಕೂ ನಡೆಯಲಿದೆ ಎಂದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಾಂತವೀರ ಬಿರಾದಾರ ಮಾತನಾಡಿದರು. ಈ ವೇಳೆ ನೂತನ ಉಪಾಧ್ಯಕ್ಷ ಹಾಸಿಂಪೀರ ಆಳಂದ, ಎಸ್.ಪಿ.ಎಲ್. ಸಹ ಸಂಯೋಜಕ ಜಿಲಾನಿ ನಾಟೀಕಾರ, ಸಂಯೋಜಕ ಮಹ್ಮದ್ ಪಟೇಲ ಬಿರಾದಾರ, ಮಲ್ಲು ಕೂಚಬಾಳ, ಶಿವಾನಂದ ಆಲಮೇಲ, ಹುಸೇನ ತಾಂಬೋಳಿ, ಸಿದ್ದು ಮ್ಯಾಗೇರಿ, ಬಾಲಕೃಷ್ಣ ಛಲವಾದಿ, ಮುತ್ತು, ದಿನೇಶ ಸೇರಿದಂತೆ ಅನೇಕರು ಇದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 