ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಒಟ್ಟು 12 ಸ್ಥಾನಗಳ ಸದಸ್ಯರ ಆಯ್ಕೆ

ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಒಟ್ಟು 12 ಸ್ಥಾನಗಳ ಸದಸ್ಯರ ಆಯ್ಕೆ
Selection of members for total 12 posts for the Governing Board of Primary Rural Agricultural Coope

ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಒಟ್ಟು 12 ಸ್ಥಾನಗಳ ಸದಸ್ಯರ ಆಯ್ಕೆ  

ಬೆಟಗೇರಿ 12: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಒಟ್ಟು 12 ಸ್ಥಾನಗಳ ಸದಸ್ಯರ ಆಯ್ಕೆಗಾಗಿ 24 ಜನ ಅಭ್ಯರ್ಥಿಗಳು ಚುನಾವಣೆ ಅಖಾಡದಲ್ಲಿದ್ದು. ಇದೇ ಶನಿವಾರ ಡಿ.14ರಂದು ಚುನಾವಣೆಯ ಮತದಾನ ನಡೆಯುವ ಹಿನ್ನಲೆಯಲ್ಲಿ ಬಿರುಸಿನ ಚುನಾವಣೆ ಪ್ರಚಾರ ನಡೆಯುತ್ತಿದೆ. 

      ಸ್ಥಳೀಯ ಎರಡು ರಾಜಕೀಯ ಗುಂಪುಗಳ ಮುಖಂಡರು ಭಾರಿ ಕಸರತ್ತು ಮಾಡಿ ಪ್ರಬಲ ಅಭ್ಯರ್ಥಿ, ಯುವಕರನ್ನು ತಮ್ಮ ಗುಂಪುಗಳತ್ತ ಸೆಳೆದು ಯುವ ಅಭ್ಯರ್ಥಿಗಳು ಸೇರಿ ಸಹಕಾರಿ ಕೆಲ ಧುರೀಣರು ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಹೀಗಾಗಿ ನೇರಾ ನೇರ ಎರಡು ಪೆನಲ್‌ಗಳ ಮಧ್ಯ ತುರುಸಿನ ಚುನಾವಣೆ ಏರ​‍್ಪಟಟಿದೆ. ಎರಡು ಪ್ರಬಲ ಗುಂಪುಗಳ ಮುಖಂಡರು ಮತ್ತು ಬೆಂಬಲಿಗರ ನಡುವೆ ಕುಂತ್ರೂ, ನಿಂತ್ರೂ ಜೀವಕ್ಕಿಲ್ಲಾ ಸಮಾಧಾನ ಎನ್ನುವಂತಾಗಿದೆ. ಹೀಗಾಗಿ ಯಾವ ಗುಂಪಿನ ಅಭ್ಯರ್ಥಿಗಳು ಗೆಲವು ಸಾಧಿಸುತ್ತಾರೆ ಅಂಬುವದು ಗ್ರಾಮಸ್ಥರಲ್ಲಿ ಕುತೂಹಲ ಮೂಡಿಸಿದೆ. 

   ಬೆಟಗೇರಿ ವಿಪಾಗ್ರಾಕಸ ಸಂಘ ಸನ್ 1917 ಜೂನ್ 5 ರಂದು ಗ್ರಾಮ ಸೇವಾ ಸಹಕಾರಿ ಸಂಘ ಅಂತಾ ಸ್ಥಾಪನೆಗೊಂಡು, ವ್ಯವಸಾಯ ಸೇವಾ ಸಹಕಾರಿ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಹೀಗೆ ಕೆಲವು ಹೆಸರಿನಿಂದ ಬದಲಾವಣೆ ಹೊಂದುತ್ತಾ ಶತಮಾನ ಪೂರೈಸಿದ ಸಂಘ ಈಗ ತನ್ನ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಕೇವಲ ಮೂರು ಸಲ 1985, 1999, 2014ರಲ್ಲಿ ಮಾತ್ರ ತುರುಸಿನ ಚುನಾವಣೆ ನಡೆದು, 2019ರಲ್ಲಿ ಮತ್ತೆ ಅವಿರೂಧ ಆಯ್ಕೆ ನಡೆದಿತ್ತು, ಸಂಘದ ಇನ್ನೂಳಿದ ಅವಧಿಗೆ ಹೆಚ್ಚು ಸಲ ಆಡಳಿತ ಮಂಡಳಿ ಸದಸ್ಯರು ಅವಿರೋಧ ಆಯ್ಕೆ ಮೂಲಕ ಆಯ್ಕೆಗೊಂಡಿದ್ದು ಇತಿಹಾಸವೇ ಇದೆ. ಈ ಸಲ ಮತ್ತೆ ತುರುಸಿನ ಜಿದ್ದಾ ಜಿದ್ದಿ ಚುನಾವಣೆ ಜರುಗುತ್ತಿದೆ. 

ಅವಿರೂಧ ಆಯ್ಕೆಗೆ ಇಚ್ಛಾಶಕ್ತಿ ಕೊರತೆ:ಶತಮಾನ ಪೂರೈಸಿದ ಬೆಟಗೇರಿ ಗ್ರಾಮದ ವಿಪಾಗ್ರಾಕಸ ಸಂಘದ ಸಮಗ್ರ ಅಭಿವೃದ್ಧಿ ಹಿತದೃಷ್ಠಿಯಿಂದ ಇಲ್ಲಿಯ ರಾಜಕೀಯ ಮುಖಂಡರು, ಯುವಕರು ಎಲ್ಲ ಸಮುದಾಯದ ಹಿರಿಯ ನಾಗರಿಕರ ಜೋತೆ ಚುನಾವಣೆ ಸಾಧಕ-ಭಾದಕಗಳ ಕುರಿತು ಚರ್ಚಿಸಿ ಎಲ್ಲರ ಒಮ್ಮತದಂತೆ ಈ ಸಲ ಸಂಘದ ಆಡಳಿತ ಮಂಡಳಿ ಸದಸ್ಯರ ಆಯ್ಕೆ ಮಾಡಬಹುದಿತ್ತು. ಎರಡು ಗುಂಪುಗಳ ಮುಖಂಡರು ಮತ್ತು ಬೆಂಬಲಿಗರ ನಡುವೆ ಹೊಂದಾಣಿಕೆಯ ಇಚ್ಛಾಶಕ್ತಿ ಕೊರತೆಯಿಂದ ಈ ಸಲ ಅವಿರೂಧ ಆಯ್ಕೆಯ ಯಾವ ಕಸರತ್ತು ನಡೆಯಲಿಲ್ಲ ಅಂಬುವುದು ಸ್ಥಳೀಯ ಪ್ರಜ್ಞಾವಂತ ನಾಗರಿಕರ ಅನಿಸಿಕೆಯಾಗಿದೆ. 

    ಸಂಘದ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಈಗ ನೇರಾ ನೇರ ಎರಡು ಪ್ರಬಲ ಪೆನಲ್‌ಗಳ ಮಧ್ಯ ತುರುಸಿನ ಚುನಾವಣೆ ಏರ​‍್ಪಟಟಿದೆ. ಈ ಭಾರಿ ಆಡಳಿತ ಮಂಡಳಿ ಸದಸ್ಯರಾಗಿ ಯಾವ ಗುಂಪಿನ ಅಭ್ಯರ್ಥಿಗಳು ಜಯಸಾಧಿಸಲಿದ್ದಾರೆ ಅಂಬುದನ್ನು ಕಾದುನೋಡಬೇಕಷ್ಟೇ 


ಸುದ್ದಿ ಓದಿ