ರಾಷ್ಟ್ರಮಟ್ಟಕ್ಕೆ ವಿದ್ಯಾರ್ಥಿಗಳ ಆಯ್ಕೆ
ಮಹಾಲಿಂಗಪುರ: ಸಮೀಪದ ಸಮೀರವಾಡಿ ಕೆಜೆ ಸೊಮೈಯಾ ಆಂಗ್ಲ ಮಾಧ್ಯಮ ಶಾಲೆಯ 9 ನೇತರಗತಿ ವಿದ್ಯಾರ್ಥಿಗಳಾದ ಸಿಂಚನಾ ಎಸ್. ಬ್ಯಾಳಿ ಮತ್ತು ದೀಪ್ತಿ ಎನ್. ಎಕ್ಕೇಲಿ ರಾಜ್ಯಮಟ್ಟದ ವಿಜ್ಞಾನ ಪರಿಷತ್ ವತಿಯಿಂದ ಕಲ್ಬುರ್ಗಿಯಲ್ಲಿ ನಡೆದ 30 ನೇ ರಾಜ್ಯಮಟ್ಟದ ವಿದ್ಯಾರ್ಥಿಗಳ ವಿಜ್ಞಾನ ಸಮಾವೇಶದಲ್ಲಿ ಸಾಧನೆ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿಜ್ಞಾನ ಶಿಕ್ಷಕ ಮಹೇಶ ಪಾಟೀಲ ಮಾರ್ಗದರ್ಶನಲ್ಲಿ ಡಿಸೈನ್ ಆ್ಯಂಡ್ ಟೆಸ್ಟಿಂಗ್ ಆಫ್ ಎ ಥಾಮ್ರೋಎಲೆಕ್ಟ್ರಿಕಲ್ ಕೋಲ್ಡ್ ಡೈರೆಕ್ಟ್ ಬಲ ವ್ಯಾಕ್ಸಿನ್ ಕೂಲರ್ ಪ್ರದರ್ಶನ ನೀಡಿ ಸಾಧನೆ ಮಾಡಿದ್ದಾರೆ, ಗುಜರಾತಿನಲ್ಲಿ ರಾಷ್ಟ್ರ ಮಟ್ಟದ ಸಮಾವೇಶ ನಡೆಯಲಿದೆ ಎಂದು ಪ್ರಾಚಾರ್ಯ ಸಿ. ಅನಿಲ ಕುಮಾರ ತಿಳಿಸಿದ್ದಾರೆ