ಸೀಟು ಬ್ಲಾಕಿಂಗ್: ತಜ್ಞರ ಸಮಿತಿಯನ್ನು ರಚಿಸಿ
ಸೀಟು ಬ್ಲಾಕಿಂಗ್: ತಜ್ಞರ ಸಮಿತಿಯನ್ನು ರಚಿಸಿ
ಬಳ್ಳಾರಿ 30: ಪ್ರಮುಖ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ‘ಸೀಟು ಬ್ಲಾಕಿಂಗ್’ ದಂಧೆ ನಡೆದಿರುವ ಶಂಕೆ ವ್ಯಕ್ತವಾಗಿರುವುದು ತುಂಬಾ ಆತಂಕಕಾರಿ ವಿಷಯ. ಇದರಿಂದ ಎಷ್ಟೋ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಪ್ರವೇಶ ಪಡೆಯದ 2,348 ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೋಟಿಸ್ ಕೊಟ್ಟಿರುವುದು ನಿಜ. ಆದರೆ ಈ ಕ್ರಮ ಏನು ಸಹಕಾರಿಯಾಗುವುದಿಲ್ಲ. ಬದಲಿಗೆ ಯಾವ ಖಾಸಗಿ ಕಾಲೇಜುಗಳು ಈ ದಂಧೆಯಲ್ಲಿ ಭಾಗಿಯಾಗಿದ್ದಾರೋ ಅವರನ್ನು ಈ ಕೂಡಲೇ ಕಠಿಣ ಶಿಕ್ಷೆಗೆ ಒಳಪಡಿಸಿ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೂ ಈ ಕೂಡಲೇ ಸರಕಾರವೇ ಒಂದು ತಜ್ಞರ ಸಮಿತಿಯನ್ನು ರಚಿಸಿ, ಈ ಸಮಸ್ಯೆ ಎದುರಾಗದಂತೆ ಗಮನವಹಿಸಬೇಕೆಂದು ಬಳ್ಳಾರಿ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಆಗ್ರಹಿಸಿದ್ದಾರೆ.