ಮಹಲಿಂಗಪುರ

ಶಾಲಾ ಪ್ರಾರಂಭೋತ್ಸವ.

ಶಾಲಾ ಪ್ರಾರಂಭೋತ್ಸವ.

ಮಹಾಲಿಂಗಪುರ 31:  ಮಹಾಲಿಂಗಪುರದ ಸರಕಾರಿ ಪ್ರೌಢಶಾಲೆಯಲ್ಲಿ ಸನ್ 2023- 24ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ನಡೆಯಿತು, ಶೈಕ್ಷಣಿಕ ವರ್ಷದ ಮೊದಲ ದಿನದಂದು ಆಗಮಿಸಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಪ್ರೀತಿಯಿಂದ ಪುಷ್ಪ ಕೊಡುವುದರ ಮೂಲಕ ಸ್ವಾಗತಿಸಿಕೊಂಡರು, ನಂತರ  ಸರಸ್ವತಿಯ ಭಾವಚಿತ್ರಕ್ಕೆ ಪೂಜೆ  ಸಲ್ಲಿಸುವುದರ ಮುಖಾಂತರ ಹೊಸ ಶೈಕ್ಷಣಿಕ ವರ್ಷವನ್ನು ಬರಮಾಡಿಕೊಳ್ಳಲಾಯಿತು, ಇದೇ ಸಂದರ್ಭದಲ್ಲಿ ಮಕ್ಕಳಿಗೆ ಪಠ್ಯಪುಸ್ತಕವನ್ನು ವಿತರಿಸಲಾಯಿತು. ಶಾಲಾ ದಾಖಲಾತಿಯ ಆಂದೋಲನದ ಪ್ರಯುಕ್ತ ಘೋಷವಾಕ್ಯಗಳೊಂದಿಗೆ ನಗರದ ಪ್ರಮುಖ ಕಡೆಗಳಲ್ಲಿ ಪ್ರಭಾತಪೇರಿ ನಡೆಸಲಾಯಿತು. ಇಸಿಓ ಗಳಾದ ಸಂಜು ಸಾವಳಗಿ ಅವರು ಮಾತನಾಡಿ 2023 -24ನೇ ಸಾಲಿನಲ್ಲಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿತು ಒಳ್ಳೆಯ ಜ್ಞಾನ ಸಂಪಾದಿಸಿಕೊಂಡು ಒಳ್ಳೆಯ ಶೈಕ್ಷಣಿಕ ಸಾಧನೆಯನ್ನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು, ನಂತರ ಸಿಆರ್‌ಪಿಗಳಾದ ಬ್ಯಾಳಿ ಸರ್ ಅವರು ಮಾತನಾಡಿ ಸರ್ಕಾರದ ಎಲ್ಲ ಯೋಜನೆಗಳನ್ನು ಬಳಸಿಕೊಂಡು ಉನ್ನತ ಸಾಧನೆಯನ್ನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದರು, ಇದೇ ಸಂದರ್ಭದಲ್ಲಿ ಡಿ ಬಿ ಕುಲಕರ್ಣಿ, ಪಿ ಸಿ ಫಕೀರನ್ನವರ, ಪಿ ಎಸ್ ಕೋಲಕಾರ, ಮುಕ್ತಾಬಾಯಿಸುರೇಶ್ , ಭಾರತಿ ಜಿರಲಿ, ರುಕ್ಮವ್ವ   ಲಮಾಣಿ ಇನ್ನಿತರರು  ಹಾಜರಿದ್ದರು.

ಸುದ್ದಿ ಓದಿ