ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯಿಂದ ಸದ್ಬೋಧನಾ ಪಾದಯಾತ್ರೆ

ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯಿಂದ ಸದ್ಬೋಧನಾ ಪಾದಯಾತ್ರೆ

ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯಿಂದ ಸದ್ಬೋಧನಾ ಪಾದಯಾತ್ರೆ 


ಭದ್ರಾವತಿ 19: ದಿನಾಂಕ 19-10-2025ನೇ ಭಾನುವಾರ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಜಿಲ್ಲಾ ಘಟಕ ಶಿವಮೊಗ್ಗ ಚಿಕ್ಕಮಗಳೂರು ದಾವಣಗೆರೆ ಹಾಸನ ಕೊಡಗು ಮತ್ತು ಮಂಗಳೂರು ಜಿಲ್ಲೆ ಇವರಿಂದ ಭದ್ರಾವತಿ ತಾಲ್ಲೂಕು ಬಿಳಿಕಿ ಗ್ರಾಮದಲ್ಲಿ ನಡೆದ ಸದ್ಬೋಧನಾ ಪಾದಯಾತ್ರೆಗೆ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಬೆಂಗಳೂರು ಇದರ ನಿಕಟಪೂರ್ವ ಗೌರವ ಅಧ್ಯಕ್ಷರಾದ ಯಡಿಯೂರು ರೇಣುಕ ಶಿವಾಚಾರ್ಯರು ಚಾಲನೆ ನೀಡಿ ಮಾತನಾಡಿ ವೀರಶೈವ-ಲಿಂಗಾಯತ ಸಮಾಜ ಬಾಂಧವರು ಮೊದಲಿಗಿಂತ ಇನ್ನೂ ಹೆಚ್ಚಾಗಿ ಧರ್ಮ ಪ್ರಜ್ಞೆ ರಾಷ್ಟ್ರ ಪ್ರಜ್ಞೆ ಬೆಳೆಸುವಲ್ಲಿ ಶ್ರಮಿಸಬೇಕಾದ ಅಗತ್ಯವಿದೆ. ಬೆಳಯುವ ಮಕ್ಕಳಲ್ಲಿ ಸಂಸ್ಕಾರ ಸದ್ವಿಚಾರಗಳನ್ನು ಬೆಳೆಸಬೇಕು ಎಂದರು. ಇದಕ್ಕೂ ಪೂರ್ವದಲ್ಲಿ ಮದ್ ರಂಭಾಪುರಿ ಶಾಖಾ ಬಿಳಿಕಿ ಹಿರೇಮಠದಲ್ಲಿ ಜರುಗಿದ ಸಮಾರಂಭದಲ್ಲಿ  ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಬೆಂಗಳೂರು ಇದರ ಸಹ ಕಾರ್ಯದರ್ಶಿಗಳಾದ ಬಿಳಿಕಿ ರಾಚೋಟೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿ ಮಾತನಾಡಿ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಧರ್ಮದ ದಶವಿಧ ಸೂತ್ರಗಳು ಸಕಲರ ಬಾಳಿನಲ್ಲಿ ಬೆಳಕು ಮೂಡಿಸುತ್ತವೆ ಎಂದರು. ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಮಳಲಿ ಸಂಸ್ಥಾನ ಮಠದ ಡಾ.ನಾಗಭೂಷಣ ಶಿವಾಚಾರ್ಯರು ಮಾತನಾಡಿ ಭೌತಿಕ ಜೀವನ ಸಮೃದ್ಧಗೊಂಡಂತೆ ಆಂತರಿಕ ಜೀವನ ಪರಿಶುದ್ಧಗೊಳ್ಳಬೇಕು. ಹಣ ಮತ್ತು ಅಧಿಕಾರದ ಬಗ್ಗೆ ಸದಾ ಚಿಂತಿಸುವ ಮನುಷ್ಯ ತನ್ನ ದೇಶ ಸಂಸ್ಕೃತಿ ಮತ್ತು ಧರ್ಮದ ಬಗ್ಗೆ ಸದಾ ಚಿಂತನೆ ನಡೆಸಬೇಕೆಂದರು. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ತೊಗರ್ಸಿ ಪಂಚವಣ್ಣಿಗೆ ಮಠದ. ಚನ್ನವೀರ ದೇಶಿಕೇಂದ್ರ  ಶಿವಾಚಾರ್ಯರು ಮಾತನಾಡಿ ವೀರಶೈವ ಶಿವಾಚಾರ್ಯರು ಹೆಚ್ಚು ಹೆಚ್ಚು ಸಂಘಟಿತರಾಗಿ ಕಾರ್ಯ ಮಾಡುವ ಅವಶ್ಯಕತೆಯಿದ್ದು ಅದು ಇಂದು ಕಾರ್ಯ ರೂಪಕ್ಕೆ ಬರುತ್ತಿದೆ ಎಂದರು. ಈ ಸಂದರ್ಭದಲ್ಲಿ ಸಭೆಯು ಈ ಕೆಳಗಿನ ನಿರ್ಣಯಗಳನ್ನು ಸಂಸ್ಥೆಯ ವಕ್ತಾರರಾದ ಕಡೆನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರು ನಿರ್ಣಯಗಳನ್ನು ಮಂಡಿಸಿದ ನಂತರ ಸಭೆ ಅಂಗೀಕರಿಸಿತು. 


ಸುದ್ದಿ ಓದಿ