ತುಂಗಭದ್ರಾ ನೀರಾವರಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ ನೀಡಲು ಆಗ್ರಹ ಹಿ ಮಾರ್ಚ್ 7ರಂದು ಹಕ್ಕೊತ್ತಾಯ ಸಮಾವೇಶ
ರಾಯಚೂರು 02 : ತುಂಗಭದ್ರಾ ನೀರಾವರಿ ಯೋಜನೆ ಖಾಯಂ ಸ್ವರೂಪದ್ದಾಗಿದ್ದು, ಡ್ಯಾಮ್ ಮ್ಯಾನುಯಲ್ ಪ್ರಕಾರ ಈ ಯೋಜನೆಯಲ್ಲಿ 1818 ಖಾಯಂ ಕಾರ್ಮಿಕ ಹುದ್ದೆಗಳು ಅಸ್ತಿತ್ವದಲ್ಲಿವೆ. ಅದರ ಅನ್ವಯ ಕಾರ್ಮಿಕರಿಗೆ ವರ್ಷಪೂರ್ತಿ ನಿರಂತರ ಕೆಲಸ ನೀಡಬೇಕಾಗಿದೆ. ಹಿಂದಿನ ಅವಧಿಯಲ್ಲಿ ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸ ನೀಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸ ನೀಡದೆ ಅನ್ಯಾಯ ಮಾಡಲಾಗುತ್ತಿದೆ.ಈ ಹಿಂದೆ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸ ನೀಡಲು ಆದೇಶ ಹೊರಡಿಸಿದ್ದರು. ಆದಾಗ್ಯೂ ತುಂಗಭದ್ರಾ ನೀರಾವರಿ ಕೇಂದ್ರ ವಲಯದ ಅಧಿಕಾರಿಗಳು ಆ ಆದೇಶವನ್ನು ಜಾರಿಗೊಳಿಸಿಲ್ಲ.
ಸರ್ಕಾರದ ನಿರ್ದೇಶನದಂತೆ ಹಾಗೂ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ದಿನಾಂಕ 19.07.2025ರಂದು ನೀಡಿದ ಅನುಮೋದನೆ ಪ್ರಕಾರ ಕಾರ್ಮಿಕರನ್ನು ಕೆಲಸದಲ್ಲಿ ಮುಂದುವರೆಸುವಂತೆ ನಮ್ಮ ಸಂಘ ಮನವಿ ಸಲ್ಲಿಸಿದ್ದರೂ, ಅಧಿಕಾರಿಗಳು ಅದನ್ನು ಪರಿಗಣಿಸದೆ ಕಾರ್ಮಿಕರನ್ನು ಕೆಲಸದಿಂದ ತೆಗೆಯಲು ಮುಂದಾಗಿದ್ದರಿಂದ ನಾವು ಕಾನೂನು ಹೋರಾಟಕ್ಕೆ ಮುಂದಾಗಿದ್ದೇವೆ. ಮಾನ್ಯ ಉಪ ಕಾರ್ಮಿಕ ಆಯುಕ್ತರು, ಕಲಬುರ್ಗಿ ಅವರ ನೇತೃತ್ವದಲ್ಲಿ ನಡೆದ ಜಂಟಿ ಸಂಧಾನ ಸಭೆಯ ನಡುವಳಿಗಳ ಅನ್ವಯ ನೀರಾವರಿ ಅಧಿಕಾರಿಗಳು ವ್ಯವಸ್ಥಾಪಕ ನಿರ್ದೇಶಕರಿಗೆ ಸೂಕ್ತ ನಿರ್ದೇಶನ ಕೋರಿ ಪತ್ರ ಬರೆದಿದ್ದಾರೆ.
ಆದರೂ ಸಮಸ್ಯೆ ಇನ್ನೂ ಬಗೆಹರಿಯದೆ ಉಳಿದಿದೆ. ಕಳೆದ 25ಹಿ30 ವರ್ಷಗಳಿಂದ ತುಂಗಭದ್ರಾ ನೀರಾವರಿ ಕೇಂದ್ರ ವಲಯದ ಮುನಿರಾಬಾದ್ ವ್ಯಾಪ್ತಿಯಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ತಕ್ಷಣವೇ ನಿರಂತರ ಕೆಲಸ ನೀಡಿ, ಖಾಯಂ ಕೆಲಸಗಾರರೆಂದು ಪರಿಗಣಿಸಿ, ಸರ್ಕಾರದ ನಿರ್ದೇಶನ, ವ್ಯವಸ್ಥಾಪಕ ನಿರ್ದೇಶಕರ ಅನುಮೋದನೆ ಹಾಗೂ ವಲಯದ ಅಧಿಕಾರಿಗಳ ವರದಿ ಅನ್ವಯ ಉದ್ಯೋಗದ ಭದ್ರತೆ ಒದಗಿಸಬೇಕು. ಬದುಕುವ ವೇತನ ಸೇರಿದಂತೆ ಕಾರ್ಮಿಕರ ಎಲ್ಲಾ ಹಕ್ಕುಗಳನ್ನು ರಕ್ಷಿಸಿ, ಯೋಜನೆಯ ಜೀವಾಳುಗಳಾದ ಕಾರ್ಮಿಕರಿಗೆ ನ್ಯಾಯ ನೀಡಬೇಕು.ಈ ನ್ಯಾಯಸಮ್ಮತ ಬೇಡಿಕೆಗಳನ್ನು ಮುಂದಿರಿಸಿ ದಿನಾಂಕ 07.03.2026ರಂದು ರಾಯಚೂರು ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ತುಂಗಭದ್ರಾ ನೀರಾವರಿ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಈ ಸಮಾವೇಶವನ್ನು ಮಾಜಿ ಕಾರ್ಮಿಕ ಸಚಿವರು ಹಾಗೂ ಹಿರಿಯ ಕಾರ್ಮಿಕ ನಾಯಕರಾದ ಎಸ್.ಕೆ. ಕಾಂತ ಉದ್ಘಾಟಿಸಲಿದ್ದಾರೆ. ಜೊತೆಗೆ ಎಐಸಿಸಿಟಿಯು ರಾಷ್ಟ್ರೀಯ ಉಪಾಧ್ಯಕ್ಷರಾದ ಕ್ಲಿಪ್ಟನ್ ಡಿ’ರಿಜೋರಿಯಾ ಹಾಗೂ ಎಐಸಿಸಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್ ಪ್ರಮುಖ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ತುಂಗಭದ್ರಾ ನೀರಾವರಿ ಕೇಂದ್ರ ವಲಯದ ಯರಮರಸ್, ಸಿರಿವಾರ, ಸಿಂಧನೂರು, ವಡ್ಡರಟ್ಟಿ, ಬಳ್ಳಾರಿ, ಮುಂಡರಗಿ ಹಾಗೂ ಮುನಿರಾಬಾದ್ ವಿಭಾಗದ ಎಲ್ಲಾ ಕಾರ್ಮಿಕರು ಕಡ್ಡಾಯವಾಗಿ ಈ ಹಕ್ಕೊತ್ತಾಯ ಸಮಾವೇಶದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೇಂದ್ರ ಸಮಿತಿ ಕರೆ ನೀಡುತ್ತದೆ.ಕೆ. ನಾಗಲಿಂಗ ಸ್ವಾಮಿ ಅಧ್ಯಕ್ಷರುತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ (ಎಐಸಿಸಿಟಿಯು)ಕೇಂದ್ರ ಸಮಿತಿ.ಈ ಸಂದರ್ಭದಲ್ಲಿ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ ಬಸವರಾಜ, ಎಐಸಿಸಿಟಿಯು ಜಿಲ್ಲಾಧ್ಯಕ್ಷ ಅಜೀಜ್ ಜಾಗೀರದಾರ, ಸಿದ್ದಪ್ಪ ಗೌಡ ಯರಮರಸ್, ರಾಮರೆಡ್ಡಿ ಕಲ್ಮಲಾ, ಎಂ ಡಿ ರಫಿ ಮಸ್ಕಿ, ಶರಣಪ್ಪ ಉದ್ಬಾಳ, ಜಗದೀಶ್ ನಿಸಾರ್ ಅಹಮದ್ ಭೀಮಣ್ಣ ಸೇರಿದಂತೆ ಇತರರು ಇದ್ದರು.