ಮುದ್ದೆಬಿಹಾಲ್

ಮೀಸಲಾತಿಯ ಪರಿಷ್ಕರಣೆ ಅಸಂವಿಧಾನಿಕ : ಗುರು ತಾರನಾಳ ಕಿಡಿ

ಮೀಸಲಾತಿಯ ಪರಿಷ್ಕರಣೆ ಅಸಂವಿಧಾನಿಕ : ಗುರು ತಾರನಾಳ ಕಿಡಿ

ಲೋಕದರ್ಶನ ವರದಿ

ಮುದ್ದೇಬಿಹಾಳ 01: ಒಬಿಸಿಯಲ್ಲಿ ಮುಸ್ಲಿಮರು ಪಡೆಯುತ್ತಿದ್ದ ಮೀಸಲಾತಿಯನ್ನು ರದ್ದುಗೊಳಿಸಿರುವುದು ಆ ಸಮುದಾಯಕ್ಕೆ  ಸಿಎಂ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರಕಾರ ಅನ್ಯಾಯ ಮಾಡಿದಂತಾಗುತ್ತದೆ, ಮಾತ್ರವಲ್ಲದೇ ಸಂವಿದಾನ ವಿರೋಧಿಯಾಗಿದೆ  ಎಂದು ತಾಲೂಕಾ ಬ್ಲಾಕ್ ಕಾಂಗ್ರಸ್ ಅಧ್ಯಕ್ಷ  ಗುರು ತಾರನಾಳ ಕಿಡಿಕಾರಿದ್ದಾರೆ.

     ಪಟ್ಟಣದ ಕಾಂಗ್ರೇಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ  ದೇಶದಲ್ಲಿ ಪ್ರದಾನಿ ನರೇಂದ್ರ ಮೋದಿಯವರ ಕೇಂದ್ರ ಸರಕಾರ,  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ  ರಾಜ್ಯದಲ್ಲಿನ ಬಿಜೆಪಿ ಸರಕಾರ ಜನಸಾಮಾನ್ಯರ ಹಾಗೂ ರೈತರ ಅನೂಕುಲಕರವಾದ ಮತ್ತು ಬಡವರ ಪಕ್ಷವಲ್ಲ ಎಲ್ಲೆಡೆ  ಬರಿ ಜಾತಿ ಧರ್ಮಗಳ ಬಗ್ಗೆ ಜನರಲ್ಲಿ ಕೋಮು ಭಾವನೆ ಸೃಷ್ಠಿಸಿ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತದೆ.  ಜನ ವಿರೋಧಿ ಸರಕಾರವಾಗಿ ತಲೆ ಎತ್ತಿನಿಂತಿದೆ ಎನ್ನುವ ಗುತ್ತಿಗೆದಾರ ಸಂಘದವರು ಬಿಜೆಪಿ ಸರಕಾರ ಶೇಕಡಾ 40 ಪರ್ಸಂಟೇಜ ಸರಕಾರವೆಂದು ಘಂಟಾ ಘೋಷವಾಗಿ ಹೇಳಿದ್ದೇ ಪ್ರತ್ಯಕ್ಷ ಸಾಕ್ಷಿಯಾಗಿದೆ.

     ಸಧ್ಯ ರಾಜ್ಯದಲ್ಲಿನ ಬಿಜೆಪಿ ಸರಕಾರ ಇದು ಸೇಡಿನ ರಾಜಕಾರಣ ಮಾಡುತ್ತಿದೆ ಮೀಸಲಾತಿಯ ಹೊಸ ವರ್ಗಿಕರಣ ಮಾಡುವ ಮೂಲಕ ಬಿಜೆಪಿ ಸರ್ಕಾರ ನಾಡಿಗೆ ದ್ರೋಹ ಎಸಗಿದ್ದಾರೆ. ಬಿಜೆಪಿ ಸರ್ಕಾರ ಮೀಸಲಾತಿ ವಿಚಾರವಾಗಿ ಗೊಂದಲ ಸೃಷ್ಟಿಸಿ, ಸೇಡಿನ ರಾಜಕಾರಣ ಮಾಡಿ ಜನರನ್ನು ಧರ್ಮ, ಜಾತಿ ಆಧಾರದ ಮೇಲೆ ವಿಭಜನೆ ಮಾಡುವ ಕೆಲಸ ಮಾಡುವ ಮೂಲಕ ನಾಡಿಗೆ ದ್ರೋಹ ಎಸಗಿದೆ ಎಂದು 

 ಮೀಸಲಾತಿಯ ಅಸಂವಿಧಾನಿಕ ಪರಿಷ್ಕರಣೆ  ನಾಡಿಗೆ ಎಸಗಿರುವ ದ್ರೋಹ. ಜನರಿಗೆ ತಪ್ಪು ಮಾಹಿತಿ ನೀಡಿ ಮೋಸ ಮಾಡುವ ಪ್ರಯತ್ನವನ್ನು ರಾಜ್ಯ ಸಕರ್ಾರ ಮಾಡಿದೆ. ಮೀಸಲಾತಿಯ ಹೊಸ ವರ್ಗಿಕರಣ ಮಾಡುವ ಮೂಲಕ ಬಿಜೆಪಿ ಸಕರ್ಾರ ದ್ರೋಹ ಎಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ಅಂಬೇಡ್ಕರರು ನೀಡಿರುವ ಸಂವಿಧಾನದ ಉದ್ದೇಶ ಯಾವುದೇ ಜಾತಿ, ಧರ್ಮ, ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡದೆ ಸಮಾನ ರಕ್ಷಣೆ ನೀಡಬೇಕು ಎಂಬುದು. ಇದನ್ನೇ ಸಂವಿಧಾನದ 14ನೇ ಪರಿಚ್ಛೇದ ಹೇಳುವುದು. 15 ಮತ್ತು 16ನೇ ಪರಿಚ್ಛೇದವು ಶಿಕ್ಷಣ ಮತ್ತು ಉದ್ಯೋಗದಲ್ಲಿ  ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿದೆ. ಯಾರು ಅವಕಾಶಗಳಿಂದ ವಂಚಿತರಾಗಿದ್ದಾರೆ ಆ ಜನರಿಗೆ ವಿಶೇಷ ಸವಲತ್ತು ನೀಡಿ, ಅವರನ್ನು ಕೂಡ ಮುಖ್ಯವಾಹಿನಿಗೆ ತರಬೇಕು ಎಂಬುದು ಇದರ ಉದ್ದೇಶ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದೆ ಇರುವವರನ್ನು ಮುಖ್ಯವಾಹಿನಿಗೆ ತಂದಾಗ ಮಾತ್ರ ಸಮ ಸಮಾಜ ಸ್ಥಾಪನೆಯ ಕಡೆಗೆ ಹೋಗಲು ಸಾಧ್ಯವಾಗುತ್ತದೆ. ಇದನ್ನು ಸಂವಿಧಾನ ಸ್ಟಷ್ಟವಾಗಿ ಹೇಳಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೀಸಲಾತಿ ನೀಡುತ್ತ ಬಂದಿವೆ. 

     ಸಧ್ಯ ರಾಜ್ಯದಲ್ಲಿ ಚುನಾವಣೆ ಎನ್ನುವ ಮಹಾಸಮರ ಸಿದ್ದಗೊಂಡಿದೆ ಮತದಾರರು ಜಾಗೃತರಾಗುವ ಮೂಲಕ ಇಂತಹ ಬ್ರಷ್ಟ ಹಾಗೂ ಜನವಿರೋಧಿ ಬಿಜೆಪಿ ಪಕ್ಷವನ್ನು ತಿರಸ್ಕರಿಸಿ, ಸಮಾನತೆ , ಬಡವರ ಪರವಾಗಿ ನಿಲ್ಲುವ  ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಇಲ್ಲದಿದ್ದರೇ ಈ ದೇಶದಲ್ಲಿ ಪ್ರಜಾಪ್ರಭುತ್ವವೇ ಇಲ್ಲದಂತೆ ಮಾಡಿಬಿಡುತ್ತಾರೆ ಎಂದರು 

ಸುದ್ದಿ ಓದಿ