ಸಾರ್ವಜನಿಕ ಸೌಲಭ್ಯ ಒದಗಿಸಲು ದಾನಮ್ಮನಗರದ ನಿವಾಸಿಗಳ ಮನವಿ
ಸಾರ್ವಜನಿಕ ಸೌಲಭ್ಯ ಒದಗಿಸಲು ದಾನಮ್ಮನಗರದ ನಿವಾಸಿಗಳ ಮನವಿ
ಮಹಾಲಿಂಗಪುರ 19: ಸ್ಥಳೀಯ ದಾನಮ್ಮದೇವಿ ನಗರದಲ್ಲಿ ಚರಂಡಿ ಸ್ವಚ್ಛತೆ,ಬೀದಿ ದೀಪಗಳ ನಿರ್ವಹಣೆ,ಉದ್ಯಾನ ನಿರ್ಮಾಣ ಹಾಗೂ ಇಲ್ಲಿಯ ರಬಕವಿ ಮುಖ್ಯ ರಸ್ತೆಯಿಂದ ಬುದ್ನಿಪಿಡಿಯಲ್ಲಿ ಹಾದು ಸೈದಾಪೂರ ರಸ್ತೆಗೆ ಕೂಡುವ ಉಪರಸ್ತೆಗೆ ಗಟಾರ ನೀರು ಸರಾಗವಾಗಿ ಹೋಗುವಂತೆ ಚರಂಡಿ ಮೇಲೆ ಸದೃಢ ಸಿಡಿ ಹಾಕಿ ಗಟ್ಟಿಗೊಳಿಸಬೇಕೆಂದು ಆಗ್ರಹಿಸಿರುವ ಅಲ್ಲಿಯ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಮಂಗಳವಾರ ಪುರಸಭೆ ವ್ಯವಸ್ಥಾಪಕ ಎಸ್.ಎನ್.ಪಾಟೀಲ ಹಾಗೂ ಅಭಿಯಂತರ ಎಸ್.ಎಂ.ಕಲಬುರ್ಗಿ ಅವರಿಗೆ ನೀಡಿದರು.
ನಿವಾಸಿಗಳು ಆದಷ್ಟು ಬೇಗ ಮೂಲಭೂತ ಸೌಲಭ್ಯಗಳ ಕುರಿತು ಗಮನ ಹರಿಸಲು ವಿನಂತಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಪುರಸಭೆ ಅಭಿಯಂತರ ಎಸ್.ಎಂ.ಕಲಬುರ್ಗಿ ಹಂತಹಂತವಾಗಿ ಕಾಮಗಾರಿಗಳನ್ನು ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು.
ಪುರಸಭೆ ಆರೋಗ್ಯ ವಿಭಾಗದ ಮಹಾಲಿಂಗ ಮುಗಳಖೋಡ,ದಾನಮ್ಮದೇವಿ ನಗರದ ನಿವಾಸಿಗಳಾದ ಬಸಪ್ಪ ಬಡಿಗೇರ,ಚನ್ನಗಿರೆಪ್ಪ ಬನ್ನೂರ,ವಿನಯ ಬನ್ನೂರ, ಯವ್.ಬಿ.ಬೆನವಾಡಿ,ಪದಮಸಿಂಗ ದೈಹಿಯಾ,ಪ್ರೇಮಾರಾಮ ದೇವಾಸಿ,ಡಾ.ಎಸ್.ಎಂ.ಅರೆನಾಡ,ಬಸವರಾಜ ಪಟ್ಟಣಶೆಟ್ಟಿ,ಶಿವಾನಂದ ಮೆಳವಂಕಿ,ಬಸವರಾಜ ಕುಂಟೋಜಿ,ರಾಜು ಮುಗಳಖೋಡ,ಆರ್.ಎ.ಕೊಣ್ಣೂರ,ಎಸ್.ಎಸ್.ಶಿಪ್ರಿ,ವಿಜಯ ಕಲಾಲ ಮುಂತಾದವರು ಇದ್ದರು.