ಹಗರಿಬೊಮ್ಮನಹಳ್ಳಿ

ಅನುಕೂಲಕರ ಸ್ಥಳದಲ್ಲಿ ಗ್ರಾಮ ಪಂಚಾಯತಿ ನಿರ್ಮಿಸುವಂತೆ ಒತ್ತಾಯಿಸಿ ಮನವಿ

ಅನುಕೂಲಕರ ಸ್ಥಳದಲ್ಲಿ ಗ್ರಾಮ ಪಂಚಾಯತಿ  ನಿರ್ಮಿಸುವಂತೆ ಒತ್ತಾಯಿಸಿ ಮನವಿ

ಲೋಕದರ್ಶನ ವರದಿ

ಹಗರಿಬೊಮ್ಮನಹಳ್ಳಿ 01:  ಸಾರ್ವಜನಿಕರಿಗೆ ಅನೂಕುಲಕರವಾಗುವ ಸ್ಥಳದಲ್ಲಿ ಆಡಳಿತ ಕಚೇರಿಯನ್ನು ನಿರ್ಮಿಸುವಂತೆ ಒತ್ತಾಯಿಸಿ ವಲ್ಲಭಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಚ್ಚಿನಬಂಡಿ, ಬಂಡಿಹಳ್ಳಿ, ಬಲ್ಲಾಹುಣ್ಣಿ ಗ್ರಾಮಗಳ ಗ್ರಾಮಸ್ಥರು ತಹಸೀಲ್ದಾರ್ ಶರಣಮ್ಮ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಅಹಿಂದ ವೇದಿಕೆಯ ಜಿಲ್ಲಾ ಸಂಚಾಲಕ ಬುಡ್ಡಿ ಬಸವರಾಜ್ ಮಾತನಾಡಿ  ಬೆರಳೆಣಿಕೆಯಷ್ಟು ಜನರ ಹಿತಾಸಕ್ತಿಗಾಗಿ ಕಂದಾಯ ಗ್ರಾಮವಲ್ಲದ ಗ್ರಾಮವನ್ನು ಗ್ರಾಮ ಪಂಚಾಯಿತಿ ಎಂದು ಘೋಷಣೆ ಮಾಡಿ ಪಂಚಾಯತಿ ರಾಜ್ಯ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿದ್ದು, ಕಳೆದ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳು ವಲ್ಲಭಾಪುರ ಗ್ರಾಮವು ನಾಲ್ಕು ಹಳ್ಳಿಗಳ ಮಧ್ಯೆ ಇರುತ್ತೆ ಎಂದು ನೀಡಿದ ತಪ್ಪು ವರದಿ ನೀಡಿದ್ದಾರೆ. ಇದನ್ನು ಹಲವು ಬಾರಿ ವಿರೋಧಿಸಿ ಮನವಿ ಪತ್ರಗಳನ್ನು ನೀಡಿದರು ಸಾರ್ವಜನಿಕರ ಮನವಿಗೆ ಯಾವುದೇ ರೀತಿಯ ಸ್ಪಂದನೆ ದೊರೆಯಲಿಲ್ಲ. ಗಾಮ ಪಂಚಾಯ್ತಿಗಳನ್ನು ಸ್ಥಾಪನೆ ಮಾಡುವ ಉದ್ದೆಶದಿಂದ ಅಧಿಕಾರ ವಿಕೇಂದ್ರೀಕರಣವಾಗಿರುತ್ತದೆ. ಈಗಾಗಲೇ ಗ್ರಾಮ ಪಂಚಾಯತಿ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಗ್ರಾಮ ಪಂಚಾಯ್ತಿ ಆಡಳಿತ ಕಛೇರಿಯನ್ನು ಬಲ್ಲಾಹುಣ್ಣಿ ಸಮೀಪದ ಸರಕಾರಿ ಜಾಗದಲ್ಲಿ ನಿಮರ್ಿಸಲು ಠರಾವು ಕೂಡ ಪಾಸು ಮಾಡಿರುತ್ತಾರೆ. ಆದ್ದರಿಂದ ಈ ಮೂರು ಗ್ರಾಮಗಳ ಜನರ ಭಾವನೆಗಳಿಗೆ ಸ್ಪಂದಿಸುವ ಮೂಲಕ ವಲ್ಲಭಾಪುರ ಗ್ರಾಮ ಪಂಚಾಯ್ತಿಯ ಆಡಳಿತ ಕಛೇರಿಯನ್ನು ಸಾರ್ವಜನಿಕರಿಗೆ ಅನುಕೂಲವಾಗುವ ಸ್ಥಳದಲ್ಲಿ ನಿಮರ್ಿಸಿದರೆ ಸಾರ್ವಜನಿಕರ ದಿನನಿತ್ಯದ ಕೆಲಸಗಳಿಗೆ ಅನುಕೂಲವಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಯಿತಿ ಸದಸ್ಯರಾದ ಬಿ. ಕರೀಂಸಾಬ್, ಯು.ಎಚ್. ಹನುಮಂತಪ್ಪ, ಬಸವರಾಜ್, ಮುಖಂಡರಾದ ಎ. ಸಂತೋಷ್, ಬಿ.ಎಮ್.ರಫಿ, ಎಚ್.ಕೋಟ್ರಶ್, ಎ.ವೆಂಕಟೇಶ್, ಕೆ. ಮಂಜುನಾಥ್, ಟಿ.ರಮೇಶ್, ಎಸ್. ರವಿ, ಬಂಡಿಹಳ್ಳಿ ಪ್ರಕಾಶ್ ಸೇರಿದಂತೆ ಮೂರು ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು 

ಸುದ್ದಿ ಓದಿ