ಬಳ್ಳಾರಿ

ಬಾಣಂತಿಯರ ಅಸಹಜ ಸಾವಿನ ಬಗ್ಗೆಯಿ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಮನವಿ

ಬಾಣಂತಿಯರ ಅಸಹಜ ಸಾವಿನ ಬಗ್ಗೆಯಿ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಮನವಿ

ಬಾಣಂತಿಯರ ಅಸಹಜ ಸಾವಿನ ಬಗ್ಗೆಯಿ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಮನವಿ  

  ಬಳ್ಳಾರಿ 14: ಜಿಲ್ಲಾಸ್ಪತ್ರೆಯಲ್ಲಿ ಉಂಟಾದ ಬಾಣಂತಿಯರ ಅಸಹಜ ಸಾವಿನ ಹಿನ್ನಲೆಯಲ್ಲಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಇಂದು ಮನವಿ ಪತ್ರ ಸಲ್ಲಿಸಲಾಯಿತು.  

    ಈ ಸಂದರ್ಭದಲ್ಲಿ ಮಾತನಾಡಿ ಸಂಚಾಲಕರಾದ ಸೋಮಶೇಖರ ಗೌಡ ಅವರು “ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾದ ಮೂವರು ಮಹಿಳೆಯರು ಸೊಂಕಿಗಿ ಒಳಗಾಗಿ, ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಹಾಗೆಯೇ ಇನ್ನು 4 ಬಾಣಂತಿಯರು ತುರ್ತು ನಿಗಾ ಘಟಕದಲ್ಲಿದ್ದು, ಅವರ ಪರಿಸ್ಥಿತಿ ಕೂಡ ಗಂಭೀರವಾಗಿದೆ. ಈ ಅವಗಢದ ಬಗ್ಗೆ ಬಳ್ಳಾರಿ ನಾಗರಿಕ ಹೋರಾಟ ಸಮಿತಿಯು ಆಘಾತ ವ್ಯಕ್ತಪಡಿಸುತ್ತದೆಯಲ್ಲದೆ, ಇಷ್ಟೆಲ್ಲಾ ಆಧುನಿಕ ಶಸ್ತ್ರಚಿಕಿತ್ಸಾ ವ್ಯವಸ್ಥೆಯಿದ್ದಾಗಲೂ, ರೋಗಾಣು ನಿರೋಧಕ ಕ್ರಮಗಳು ಇದ್ದಾಗಲೂ ಇಂತಹ ಘಟನೆ ನಡೆದಿರುವುದು ಅತ್ಯಂತ ನೋವಿನ ವಿಚಾರ. ಈ ಘಟನೆಯಿಂದ ಕಂದಮ್ಮಗಳು ತಮ್ಮ ತಾಯಿಂದರನ್ನು ಕಳೆದುಕೊಂಡಿವೆ. ಇಡೀ ಕುಟುಂಬ ದುಃಖದ ಮಡಿಲಲ್ಲಿವೆ. ಮೃತರ ಕುಟುಂಬದವರು ಅತ್ಯಂತ ಬಡವರಾಗಿದ್ದು, ಮುಂದಿನ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದಾರೆ” ಎಂದರು.  

       “ಬಾಣಂತಿಯರ ಅಸಹಜ ಸಾವಿನ ಕುರಿತ ನಿಷ್ಪಕ್ಷಪಾತ ತನಿಖೆಯಾಗಬೇಕು, ತನಿಖೆಯಿಂದ ನಿರ್ಲಕ್ಷ್ಯ ಸಾಬೀತಾದಲ್ಲಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ತುರ್ತು ನಿಗಾ ಘಟಕದಲ್ಲಿರುವ ಬಾಣಂತಿಯರ ಚಿಕಿತ್ಸಾ ವೆಚ್ಚವನ್ನು ಭರಿಸಬೇಕು, ಮುಂದೆ ಇಂತಹ ಅವಗಢ ನಡೆಯದಂತೆ ಕ್ರಮವಹಿಸಬೇಕು” ಎಂದು  ಸೋಮಶೇಖರ ಗೌಡ ಅವರು ಆಗ್ರಹಿಸಿದರು. 

  ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರು, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ಹಾಗೂ ಚಿಕಿತ್ಸಾ ವೆಚ್ಚ ಭರಿಸಲು ಸರ್ಕಾರದ ಗಮನ ಸೆಳೆಯುವುದಾಗಿ, ಸೂಕ್ತ ತನಿಖೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಮುಂದಿನ ದಿನಗಳಲ್ಲಿ ಇಂತಹ ಅವಗಢ ತಪ್ಪಿಸಲು ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವುದಾಗಿ ಜಿಲ್ಲಾ ಶಸ್ತ್ರಚಿಕಿತ್ಸಕರು ಭರವಸೆ ನೀಡಿದರು. 

 ನಿಯೋಗದಲ್ಲಿ ಸಮಿತಿಯ ಹಿರಿಯ ಸದಸ್ಯರಾದ ಗುರುರಾಜ್ ಹಾಗೂ ಶ್ಯಾಂ ಸುಂದರ್, ಡಾ.ಪ್ರಮೋದ್, ಎ.ಶಾಂತಾ, ಎಸ್‌.ಜಿ ನಾಗರತ್ನ, ಗೋವಿಂದ್, ಧನರಾಜ್, ವಿದ್ಯಾ ಅನ್ಸರ್ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ