ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್ನಲ್ಲಿ ರಾಜ್ಯೋತ್ಸವ ಆಚರಣೆ
ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್ನಲ್ಲಿ ರಾಜ್ಯೋತ್ಸವ ಆಚರಣೆ
ಬಳ್ಳಾರಿ 11: ನಗರದ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್ನಲ್ಲಿ 69ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ದಿನಾಂಕ: 4ರಿಂದ 08-11-2024 ರವರೆಗೆ ಕನ್ನಡದ ಹಬ್ಬವನ್ನು ಆಚರಿಸಲಾಯಿತು. ಈ ಆಚರಣೆಯ ಅಂಗವಾಗಿ ಶಾಲೆಯಲ್ಲಿ ವಿವಿಧ ತರಗತಿಗಳ ವಿಧ್ಯಾರ್ಥಿಗಳಿಗೆ ಚಿತ್ರನೋಡಿ ಹೇಳುವಿಕೆ, ಚರ್ಚಾ ಸ್ಪರ್ಧೆ, ಮಾತುಗಾರಿಕೆ ಹಾಗೂ ಉಕ್ತಲೇಖನ ಮುಂತಾದ ಸ್ಪರ್ಧೆಗಳನ್ನು ಏರಿ್ಡಸಲಾಗಿತ್ತು. ಈ ಕನ್ನಡ ಹಬ್ಬದ ಮುಕ್ತಾಯ ಸಮಾರಂಭವನ್ನು ದಿನಾಂಕ: 09ರಂದು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಮಾರಂಭವನ್ನು ಕನ್ನಡಾಂಬೆಯ ಪೂಜಾ ಕಾರ್ಯಕ್ರಮ ಹಾಗೂ ನಾಡಗೀತೆಯನ್ನು ಹಾಡುವುದರ ಮೂಲಕ ಆರಂಭಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಕನ್ನಡ ಶಿಕ್ಷಕಿಯಾದ ಚನ್ನಮ್ಮರವರು ಕನ್ನಡ ಸಾಹಿತ್ಯದ ಚರಿತ್ರೆ, ರಾಜಮನೆತನಗಳ ಬಗ್ಗೆ, ಕರ್ನಾಟಕದ ಏಕೀಕರಣದ ಕುರಿತು ವಿಧ್ಯಾರ್ಥಿಗಳಿಗೆ ತಿಳಿಸಿದರು ಹಾಗೂ ವಿಶೇಷವಾಗಿ 10ನೇ ತರಗತಿ ವಿಧ್ಯಾರ್ಥಿನಿಯಾದ ಕುಮಾರಿ ರಶ್ಮಿಯವರು ಕನ್ನಡ ಭಾಷೆಯಲ್ಲಿ ಹಾಸುಹೊಕ್ಕಾಗಿರುವ ವಿವಿಧ ಭಾಷೆಗಳಿಂದ ಬಳಕೆಯಾಗಿರುವ ಶಬ್ದಗಳ ಪದಗಳ ಬಗ್ಗೆ ತಿಳಿಸಿದರು. 6 ಹಾಗೂ 7ನೇ ತರಗತಿಯ ವಿಧ್ಯಾರ್ಥಿಗಳು ನಾಡು ನುಡಿ ಸಂಸ್ಕೃತಿ, ಕಲೆಯ ಬಗ್ಗೆ ನೃತ್ಯ ಪ್ರದರ್ಶಿಸಿದರು.
ಶಾಲೆಯ ಅಧ್ಯಕ್ಷರಾದ ಡಾ. ಎಸ್.ಜೆ.ವಿ ಮಹಿಪಾಲ್ರವರು, ಕನ್ನಡ ಭಾಷೆಯ ಲಿಪಿ, ಮಾತೃಭಾಷಯೆ ಮಹತ್ವ, ರಾಜರುಗಳ ವೈಭವದ ಆಡಳಿತ, ಕಲೆ ಮತ್ತು ವಾಸ್ತುಶಿಲ್ಪದಲ್ಲಿ ಕರ್ನಾಟಕದ ಕೊಡುಗೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಕೊನೆಯದಾಗಿ ಶಾಲೆಯಲ್ಲಿ ಏರಿ್ಡಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಈ ಸಮಾರಂಭದಲ್ಲಿ ಶಾಲೆಯ ಶಿಕ್ಷಕರು, ವಿಧ್ಯಾರ್ಥಿಗಳು ಹಾಗೂ ಪ್ರಾಂಶುಪಾಲರಾದ ಜೆ. ಅನೀಲ್ ಕುಮಾರರವರು ಹಾಜರಿದ್ದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ಹಿರಿಯ ಕನ್ನಡ ಶಿಕ್ಷಕಿಯಾದ ಶ್ರೀಮತಿ ಶಿಲ್ಪಾರವರು ಮಾಡಿದರು. ಕೊನೆಯಲ್ಲಿ ಸಿಹಿ ಹಂಚುವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.