ಮಹಲಿಂಗಪುರ

ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ಶ್ಲಾಘನೀಯ : ಎಸ್.ಆರ್.ಬಿದರಿ

ಕಡಿಮೆ ಶುಲ್ಕದಲ್ಲಿ  ಗುಣಮಟ್ಟದ ಶಿಕ್ಷಣ ಶ್ಲಾಘನೀಯ : ಎಸ್.ಆರ್.ಬಿದರಿ

ಮಹಾಲಿಂಗಪುರ : ರಜಾ ಅವಧಿಯಲ್ಲಿ ಅತೀ ಕಡಿಮೆ ಶುಲ್ಕದಲ್ಲಿ ಗ್ರಾಮೀಣ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಎಂ.ಕೆ.ಕುಲಗೋಡ ಅವರ ಅರಿಸ್ಟಾಟಲ್ ಬೇಸಿಗೆ ಶಿಬಿರದ ಕಾರ್ಯ ಶ್ಲಾಘನೀಯ ಎಂದು ಅವರಾದಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಆರ್.ಬಿದರಿ ಹೇಳಿದರು.

ಸ್ಥಳೀಯ ಡಾ.ರಾಧಾಕೃಷ್ಣನ್ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರ ಸಮಾರೋಪ ಹಾಗೂ ಎಸ್ ಎಸ್ ಎಲ್ ಸಿ ಸಾಧಕ ಮಕ್ಕಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಉತ್ತಮ ಮಾರ್ಗದರ್ಶನ ಇಲ್ಲದೇ ಇಂದು ಗ್ರಾಮೀಣ ಪ್ರತಿಭಾವಂತ ಮಕ್ಕಳು ಅವಕಾಶ ವಂಚಿತರಾಗುತ್ತಿದ್ದಾರೆ, ಇಂದಿನ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ  ಅತ್ಯವಶ್ಯವಿರುವ ಅಡ್ವಾನ್ಸ್ ಸ್ಟಡಿ ಮಾಡಿಸಿ ಮಕ್ಕಳಿಗೆ ಬೆಳಕು ನೀಡುತ್ತಿರುವುದು ಮಾದರಿ ಎಂದರು. 

ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆಗೈದ ಲಕ್ಷ್ಮೀ ಬಂಡಿ, ಚೈತ್ರಾ ಅಂಬನ್ನಗೋಳ, ಗಂಗೋತ್ರಿ ಕೊಣ್ಣೂರ, ವಷರ್ಾ ಕೊಕಟನೂರ,ಸಂಜನಾ ಜೀರಗಾಳ, ಮನೀಷ ಬಾವಿಕಟ್ಟಿ,ಜುನೇದ ಅತ್ತಾರ ಇವರನ್ನು  ಸನ್ಮಾನಿಸಿ ಗೌರವಿಸಲಾಯಿತು.

ಶಶಿಧರ ಉಳ್ಳಾಗಡ್ಡಿ, ಶಿಕ್ಷಕ ಈರಣ್ಣ ಬಾವಿಮನಿ, ಪತ್ರಕರ್ತ ನಾರನಗೌಡ ಉತ್ತಂಗಿ, ಜಿ.ಎಂ.ಗಾಡಿಕಾರ,ಬಿ.ಎಲ್.ಮನ್ನಿಕೇರಿ,ವಿದ್ಯಾಧರ ಗುಡ್ಲಮನಿ ಮಾತನಾಡಿದರು.

ಶಿಕ್ಷಕರಾದ ಬ್ರಹ್ಮಾನಂದ ಶಿಂಧೆ, ವಿ.ಪಿ.ಮಸಗುಪ್ಪಿಮಠ, ಅಜರ್ುನ ಚವ್ಹಾನ, ವಿ.ಬಿ.ಹಿರೇಮಠ, ಸೌಮ್ಯ ಬೆಳಗಲಿ,ವೈಷ್ಣವಿ ಮಿಜರ್ಿ, ಶಿವಾನಂದ ನೀಲನ್ನವರ ಇತರರಿದ್ದರು.

ಪ್ರೀತಿ ಚಿಪ್ಪಲಕಟ್ಟಿ ಮತ್ತು ಸಂಗಡಿಗರು ಪ್ರಾಥರ್ಿಸಿ, éಶಿಕ್ಷಕ ಎಂ.ಕೆ.ಕುಲಗೋಡ ಸ್ವಾಗತಿಸಿ, ವಿ.ಬಿ.ದೊಡಹಟ್ಟಿ ನಿರೂಪಿಸಿದರು.


ಸುದ್ದಿ ಓದಿ