ಹಲ್ಲೆ ಮಾಡಿದ ಅಪರಾಧಿಗೆ ಶಿಕ್ಷೆ
ಮಹಾಲಿಂಗಪುರ : ಕಳೆದ ಆರು ವರ್ಷಗಳಿಂದ ನಡೆಯುತ್ತಿರುವ ಕೇಸಿನಲ್ಲಿ ಬನಹಟ್ಟಿ ನ್ಯಾಯಾಲಯ ಆರೋಪಿತರು ತಪಿತಸ್ತರೆಂದು ಸಾಬೀಗಿದ್ದರಿಂದ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.ಶಿಕ್ಷೆಪಿರ್ಯಾದಿದಾರ ಮತ್ತು ಆರೋಪಿತರು ರಕ್ತ ಸಂಬಂಧಿಕರಿದ್ದು, ಪಿಯರ್ಾದಿದಾರನಾದ ಸಿದ್ದಪ್ಪ ಬಸಪ್ಪಾ ಬಿಳಿಕುರಿ ಸಾ.ಕಪಲಗುದ್ದಿ, ಇವರು ಗೋಕಾಕ ತಾಲೂಕಿನ ಶಿವಾಪೂರ ಹದ್ದಿಯಲ್ಲಿ ಬರುವ ತನ್ನ ಜಮೀನದಲ್ಲಿನ ಮಣ್ಣನ್ನು ತೆಗೆದು ಮಾರಾಪೂರ ಹದ್ದಿಯಲ್ಲಿ ತನ್ನ ಜಮೀನದಲ್ಲಿ ಹಾಕಿದ್ದಕ್ಕೆ ಈ ಪ್ರಕರಣದ ಆರೋಪಿತರಾದ 1) ಹಣಮಂತ ತಂದೆ ಬಸಪ್ಪ ಬಿಳಿಕುರಿ 2) ಶಿವಪ್ಪ ಯಮನಪ್ಪ ಬಿಳಿಕುರಿ ಇವರು ಪಿರ್ಯಾದಿದಾರನ ಮೇಲೆ ಸಿಟ್ಟಾಗಿ, ಮಹಾಲಿಂಗಪೂರ ಪಟ್ಟಣದ ಮಾರಾಪೂರ ಗ್ರಾಮದ ರಿ.ಸ.ನಂ.40/- ರ ಜಮೀನದಲ್ಲಿ ಪಿರ್ಯಾದಿದಾರನು ನೀರು ಹಾಯಿಸುತ್ತಿದ್ದಾಗ ದಿ.23-3-2017 ರಂದು ಮೇಲೆ ಹೇಳಿದ ಆರೋಪಿತರು ಜಮೀನದಲ್ಲಿ ಅಕ್ರಮ ಪ್ರವೇಶ ಮಾಡಿ, ಅವ್ಯಾಚ್ಯಶಬ್ದಗಳಿಂದ ಬೈದು, ಪಿರ್ಯಾದಿದಾರರನ್ನು ಹಿಡಿದು ಎಳೆದಾಡಿ, ಕೈಯಿಂದ ಮತ್ತು ಕಬ್ಬಿಣದ ರಾಡದಿಂದ ಹೊಡೆದು ಭಾರಿ ಗಾಯ ಪಡಿಸಿ ಜೀವ ಧಮಕಿ ಹಾಕಿರುತ್ತಾರೆಂದು ನೀಡಿದ ದೂರಿನ ಅನ್ವಯ
ಮಹಾಲಿಂಗಪೂರ ಠಾಣೆಯ ಪೊಲೀಸ ಉಪ ನಿರೀಕ್ಷಕ ರಾಠೋಡ ಇವರು ಆರೋಪಿತರ ವಿರುದ್ಧ ದೋಷಾರೋಪಣೆ ಸಲ್ಲಿಸಿದ್ದು, ಸೂಕ್ತ ವಿಚಾರಣೆಯ ನಂತರ ಮಾನ್ಯ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಲಯದ ನ್ಯಾಯಾಧೀಶ ಕಿರಣಕುಮಾರ ವಡಗೇರ ಇವರು ಆರೋಪಿತರ ಅಪರಾಧಗಳು ರುಜುವಾತಾದ ಹಿನ್ನೆಲೆ ಭಾ.ದಂ.ಸಂ. ಕಲಂ 448 ರ ಅಡಿ ಇಬ್ಬರು ಆರೋಪಿತರಿ ಎ 6 ತಿಂಗಳ ಸಾದಾ ಶಿಕ್ಷೆ ಮತ್ತು ತಲಾ ರೂ.1000-00 ದಂಡ, ದಂಡ ತುಂಬಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಶಿಕ್ಷೆ, ಕಲಂ 323 ರಡಿ ಇಬ್ಬರು ಆರೋಪಿತರಿಗೆ ತಲಾ ರೂ2000-00 ದಂಡ, ದಂಡ ತುಂಬಲು ತಪ್ಪಿದ್ದಲ್ಲಿ 2 ತಿಂಗಳ ಸಾದಾ ಶಿಕ್ಷೆ,
ಕಲಂ 326 ರ ಅಡಿ 1 ನೇ ಆರೋಪಿತನಿಗೆ 2 ವರ್ಷಗಳ ಸಾದಾ ಶಿಕ್ಷೆ ಮತ್ತು ರೂ.10,000-00 ಗಳ ದಂಡ, ದಂಡ ತುಂಬಲು ತಪ್ಪಿದ್ದಲ್ಲಿ 6 ತಿಂಗಳ ಸಾದಾ ಶಿಕ್ಷೆ. ಕಲಂ 504 ರ ಅಡಿ 6 ತಿಂಗಳ ಸಾದಾ ಶಿಕ್ಷೆ ತಲಾ ರೂ.2000-00 ಗಳ ದಂಡ, ದಂಡ ತುಂಬಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಶಿಕ್ಷೆ, ಕಲಂ 506 ರ ಅಡಿ 6 ತಿಂಗಳ ಸಾದಾ ಶಿಕ್ಷೆ ತಲಾ ರೂ.2000-00 ಗಳ ದಂಡ ವಿಧಿಸಿ, ದಿನಾಂಕ: 21-11-2023 ರಂದು ತೀರ್ಪು ನೀಡಿದ್ದು ಇರುತ್ತದೆ.ಸರ್ಕಾರ ಪರವಾಗಿ ಹಿಂದೆ ಇದ್ದ ಸಹಾಯಕ ಸರ್ಕಾರಿ ಅಭಿಯೋಜಕ ಮಹಾಂತೇಶ ಚಂದ್ರಶೇಖರ ಮಸಳಿ ಇವರು ಪ್ರಕರಣ ನಡೆಸಿದ್ದು ಈಗಿದ್ದ, ಸಸಲಿ ಅವರಾದ ಭವ್ಯ ಆರ್. ಇವರು ವಾದ ಮಂಡಿಸಿರುತ್ತಾರ