ಚಿಕ್ಕೋಡಿ

11ನೇ ರಾಷ್ಟೀಯ ಆಯುರ್ವೇದ ದಿನಾಚರಣೆ ಪ್ರಯುಕ್ತ ಜನಜಾಗೃತಿ ರಾ​‍್ಯಲಿ

11ನೇ ರಾಷ್ಟೀಯ ಆಯುರ್ವೇದ ದಿನಾಚರಣೆ ಪ್ರಯುಕ್ತ ಜನಜಾಗೃತಿ ರಾ​‍್ಯಲಿ

ಲೋಕದರ್ಶನ ವರದಿ 

ಚಿಕ್ಕೋಡಿ 23: ಆಯುರ್ವೇದವು ಭಾರತೀಯ ಪರಂಪರೆಯ ಸಮಗ್ರ ಆರೋಗ್ಯ ಪದ್ಧತಿಯಾಗಿದ್ದು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ವೈಯಕ್ತಿಕ ಆರೋಗ್ಯಕರ ಜೀವನಶೈಲಿ ಮತ್ತು ಮುನ್ನೆಚ್ಚರಿಕಾ ಆರೋಗ್ಯ ಕ್ರಮಗಳು ಅವಶ್ಯಕವಾಗಿವೆ ಎಂದು ಕೆ ಎಲ್ ಇ ಯ ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ಕಿರಣ ಮುತ್ನಾಳಿ ಹೇಳಿದರು. 

ಚಿಕ್ಕೋಡಿಯ ಕೆ ಎಲ್ ಇ ಆಯುರ್ವೇದ ವೈದ್ಯಕೀಯ ಕಾಲೇಜು ವತಿಯಿಂದ 11ನೇ ರಾಷ್ಟ್ರೀಯ ಆಯುರ್ವೇದ ದಿನದ ನಿಮಿತ್ತ ಏರಿ​‍್ಡಸಿದ ಜನಜಾಗೃತಿ ರಾ​‍್ಯಲಿಗೆ ಚಾಲನೆ ನೀಡಿ ಮಾತನಾಡುತ್ತಾ ಈ ವರ್ಷದ ಆಯುರ್ವೇದ ದಿನದ ಧೇಯ್ಯ ವಾಕ್ಯವು “ಆರೋಗ್ಯಕರ ನಾಳೆಗಾಗಿ ಆಯುರ್ವೇದ” ವಾಗಿದೆ.

ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಸೂಕ್ತ ಆಹಾರ, ನಿಯಮಿತ ವ್ಯಾಯಾಮ, ಯೋಗ, ಸಮರ​‍್ಕ ನಿದ್ರೆ, ವೈಯಕ್ತಿಕ ಸ್ವಚ್ಛತೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯದತ್ತ ಹೆಜ್ಜೆ ಇಡಬಹುದು ಎಂದು ಹೇಳಿದರು. 

ರಾ​‍್ಯಲಿ: ವಿದ್ಯಾರ್ಥಿಗಳು ಆಯುರ್ವೇದ ಕುರಿತು ಘೋಷಣೆಗಳನ್ನು ಕೂಗುತ್ತಾ ಚಿಕ್ಕೋಡಿಯ ಕೃಷ್ಣಾ ಸರ್ಕಲದಿಂದ ಕೇಂದ್ರೀಯ ಬಸ್ ನಿಲ್ದಾಣದವರೆಗೆ ಜನಜಾಗೃತಿ ರಾ​‍್ಯಲಿಯನ್ನು ಮುಕ್ತಾಯಗೊಳಿಸಲಾಯಿತು. 

ಕೆ ಎಲ್ ಇ ಸಂಸ್ಥೆಯ ಆಡಳಿತ ಮಂಡಳಿಯ ಸದ್ಯಸರ ಮಾರ್ಗದರ್ಶನದಲ್ಲಿ ಆಯೋಜಿಸಿದ ರಾಷ್ಟ್ರೀಯ ಆಯುರ್ವೇದ ದಿನದ ಅಂಗವಾಗಿ ಉಚಿತ ಆರೋಗ್ಯ ಶಿಬಿರಗಳು, ಜಾಗೃತಿ ಕಾರ್ಯಕ್ರಮಗಳು, ಉಪನ್ಯಾಸಗಳು, ಯೋಗ ಮತ್ತು ಜೀವನಶೈಲಿ ಆಧಾರಿತ ಕಾರ್ಯಕ್ರಮಗಳು, ಓಷಧೀಯ ಸಸ್ಯಗಳ ಕುರಿತು ಮಾಹಿತಿ ಹಾಗೂ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. 

ಡಾ. ಶೈಲೇಂದ್ರ ಚೌಗಲಾ ಮಾತನಾಡಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಭಾವನಾ ನಿರೂಪಿಸಿದರು ಹಾಗೂ ವಂದರ್ನಾಪನೆಯನ್ನು ವಿದ್ಯಾರ್ಥಿ ಆಕಾಶ ನೆರವೆರಿಸಿದರು. ಕಾರ್ಯಕ್ರಮದಲ್ಲಿ ಆಯುರ್ವೇದ ಕಾಲೇಜಿನ ಉಪನ್ಯಾಸಕರಾದ ಡಾ.ಬಿ ಬಿ ದೇಸಾಯಿ, ಡಾ.ಸುಧೀಂದ್ರ ಹೊನವಾಡ,  ಡಾ.ಸುಜಾತಾ ಬರಮೊಜಿ, ಡಾ.ರವಿ ಮಡಿವಾಳರ, ಡಾ.ಸಂತೋಷ ಶಿವಣ್ಣವರ ಡಾ.ಶ್ರೀಧರ ಲಕ್ಕುಂಡಿ, ಡಾ.ಬಸವರಾಜ ಬನ್ನನವರ, ಆಡಳಿತಾಧಿಕಾರಿ ಮಹಾಂತೇಶ ಗುಡ್ನವರ ಮತ್ತು ಉಪನ್ಯಾಸಕರು, ವೈದ್ಯರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಜನಜಾಗೃತಿ ರಾ​‍್ಯಲಿಯಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ