ಸರ್ಕಾರವು ಒಳ ಮೀಸಲಾತಿ ಮಾಡಿ ಸಮಾಜಗಳಿಗೆ ಅನ್ಯಾಯ ಮಾಡಿದ್ದು ಇದನ್ನು ಖಂಡಿಸಿ ಕೇಂದ್ರಗಳಲ್ಲಿ ಪ್ರತಿಭಟನೆ
ರಾಣೆಬೆನ್ನೂರ 10 : ರಾಜ್ಯದಲ್ಲಿರುವ "ಕೊಲಂಬೋ" ಸಮಾಜಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಒಳ ಮೀಸಲಾತಿ ಮಾಡಿ ಈ ಸಮಾಜಗಳಿಗೆ ಅನ್ಯಾಯ ಮಾಡಿದ್ದು ಇದನ್ನು ಖಂಡಿಸಿ ಮಾ.10ರಂದು ಮುಂಜಾನೆ 11 ಘಂಟೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಅರ್ಿಸಲಾಗುವುದು ಎಂದುಸಮಾಜದ ಮುಖಂಡ, ನಿವೃತ್ತ ನ್ಯಾಯಾಧೀಶ ಡಾ. ಸುಭಾಸಚಂದ್ರ ರಾಠೋಡ ಹೇಳಿದರು.ಸೋಮವಾರದಂದು ಸ್ಥಳೀಯ ವಿಹಾನ್ ಸಭಾಭವನದಲ್ಲಿ ಬಂಜಾರಾ, ಭೋವಿ, ಕೊರವ, ಲಂಬಾಣಿ, ಕೊರಮ ಸಮಾಜದವರ ವತಿಯಿಂದ ಏರಿ್ಡಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಒಳ ಮೀಸಲಾತಿಯಲ್ಲಿ ಆಗಿರುವ ಅನ್ಯಾಯವನ್ನು ವಿರೋಧಿಸಿ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು, ಇಂತಹ ಸಂದರ್ಭಗಳಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದವರು ಎಚ್ಚರಿಸಿದರು.ಶೀಘ್ರವಾಗಿ ಈ ಅನ್ಯಾಯ ಸರಿಪಡಿಸದಿದ್ದರೆ, ನಿರ್ಣಯ ಮಾಡಿದರೆ ಮಾ. 12 ರಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಜೊತೆಗೆ ನ್ಯಾಯ ಸಿಗುವವರೆಗೂ ಹೋರಾಟ ಕೈಗೊಳ್ಳಲಾಗುವುದು ಎಂದು ಸುಭಾಸಚಂದ್ರ ಎಚ್ಚರಿಸಿದರು. ರಾಮಣ್ಣ ನಾಯಕ, ಜಯರಾಮ ಮಳ್ಳಾಪುರ, ಹೇಮಂತ ಕುಮಾರ್, ಅನಿಲಕುಮಾರ್ ಮಹಾರಾಜ್, ಶಾಮರಾವ್ ಪವಾರ್, ತಿಪ್ಪಣ್ಣ ವಡೆಯರ್, ವಿನೋದ ಚವ್ಹಾಣ, ಗೋಪಿ ರಾಥೋಡ, ರಮೇಶ ಹುಲಿಹಳ್ಳಿ, ಖಂಡೆಪ್ಪ ಭಜಂತ್ರಿ ಸೇರಿದಂತೆ ಸಮಾಜದ ಮುಖಂಡರುಗಳು ಇದ್ದರು.