ಹೊಸಪೇಟೆ

ಇರಾನ್ ದೇಶದ ಮೇಲೆ ಅಮೇರಿಕಾ ಮತ್ತು ಇಸ್ರೇಲ್ ನೇತೃತ್ವದ ದಾಳಿಯನ್ನು ಖಂಡಿಸಿ ತಹಶಿಲ್ದಾರರ ಕಛೇರಿ ಎದುರು ಪ್ರತಿಭಟನೆ

ಇರಾನ್ ದೇಶದ ಮೇಲೆ ಅಮೇರಿಕಾ ಮತ್ತು ಇಸ್ರೇಲ್ ನೇತೃತ್ವದ ದಾಳಿಯನ್ನು ಖಂಡಿಸಿ ತಹಶಿಲ್ದಾರರ ಕಛೇರಿ ಎದುರು ಪ್ರತಿಭಟನೆ

ಹೊಸಪೇಟೆ 04:    ‘ ಸೋಷಿಯಲಿಸ್ಟ್‌ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್‌) ಪಕ್ಷದ ನೇತೃತ್ವದಲ್ಲಿ ಇರಾನ್ ದೇಶದ ಮೇಲೆ ಅಮೇರಿಕಾ ಮತ್ತು ಇಸ್ರೇಲ್ ನೇತೃತ್ವದ ದಾಳಿಯನ್ನು ಖಂಡಿಸಿ ತಹಶಿಲ್ದಾರರ ಕಛೇರಿ ಎದುರು ಪ್ರತಿಭಟನೆ ನಡೆಸಿದರು.  

ಎಸ್‌.ಯು.ಸಿ.ಐ ಕಮ್ಯುನಿಸ್ಟ್‌ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಪ್ರಕಾಶ್ ನಾಯಕ್ ಸಭೆಯನ್ನು ಉದ್ದೇಶಿಸಿ “ ಸೋವಿಯತ್ ವ್ಯವಸ್ಥೆಯ ಗೈರುಹಾಜರಿಯಲ್ಲಿ ತಾನು ನಡೆದಿದ್ದೇ ದಾರಿ ಎನ್ನುವಂತೆ ತನ್ನ ಲಾಭಕ್ಕೆ ಅಡ್ಡಿಬರುತ್ತೀರುವ ಎಲ್ಲಾ ದೇಶಗಳನ್ನು  ಕಬಳಿಸುತ್ತಾ ಸಾಗಿದೆ. ದಿನವೂ ಯುದ್ಧದ ಭಾಷೆ ಮಾತಾಡುವ ಟ್ರಂಪ್  ಶಾಂತಿ ನೋಬೆಲ್ ಗೆ ಅರ್ಜಿ ಹಾಕುವುದು ಈ ಕಾಲದಸ ವ್ಯಂಗ.  ಪ್ರಜಾಪ್ರಭುತ್ವ ರಕ್ಷಣೆ ಹೆಸರಿನಲ್ಲಿ ನಡೆಯುವ ಯುದ್ಧಗಳು ಕೇವಲ ಕೆಲವೇ ಕೆಲವು ಬಂಡವಾಳಶಾಹಿಗಳ ರಕ್ಷಣೆಗಾಗಿಎಂಬುದು ಬಹಿರಂಗ ಸತ್ಯ” ಎಂದರು.  

ಡಾ.ಡಿ.ಡಿ ಸಂದೀಪ್ ಸಂಶೋಧಕರು ಮಾತನಾಡಿ “ಸಾಮ್ರಾಜ್ಯಶಾಹಿಗಳು ಲಾಭದ ವಿಸ್ತರಣೆಗಾಗಿ ವಿಶ್ವದಲ್ಲಿ ಹೆಚ್ಚಿನ ತೈಲ ಸಿಗುವ ವೆನುಜುವೆಲ್ಲಾ ದೇಶವನ್ನು, ಮೂರನೇ ಸ್ಥಾನದಲ್ಲಿ ತೈಲವನ್ನು ಉತ್ಪಾಧಿಸುತ್ತೀರುವ ಇರಾನ್ ದೇಶದ ಮೇಲಾ ದಾಳಿ ಮಾಡಲಾಗುತ್ತಿದೆ. ಇದನ್ನು ಅರ್ಥ ಮಾಡಿಕೊಳ್ಳದಂತೆ ಜನತೆಯನ್ನು ಜನಾಂಗೀಯ ಅಮಲನ್ನು ಹರಡಲಾಗುತ್ತದೆ. ಹಿಟ್ಲರ್ ನ ಆರ್ಯನ್ ಜನಾಂಗೀಯತೆಗೆ ಬಲಿಯಾದ ಜ್ಯೂಯಿಸ್ಟ್‌ ಗಳು ಇಂದು ಇಸ್ರೇಲ್ ದೇಶ ಕಟ್ಟಿಕೊಂಡು ಜ್ಯೂಯಿಸಂ ಜನಾಂಗೀಯತೆಯನ್ನು ಬೆಳೆಸುತ್ತಿರುವುದು, ನೆರೆಹೊರೆಯ ರಾಷ್ಟ್ರಗಳನ್ನು ಕಳಬಳಿಸಿರುವುದು ದುರಂತವೇ ಸರಿ. ವಿಶ್ವ ನಾಯಕರು ಸಾಮ್ರಾಜ್ಯಶಾಹಿಗಳ ಸಲುವಾಗಿ ಯುದ್ಧ ಬಯಸಿದೆ, ವಿಶ್ವದ ಜನತೆ ಶಾಂತಿಯನ್ನು ಬಯಸುತ್ತಿದೆ” ಎಂದು ಅ ಭಿಪ್ರಾಯ ಪಟ್ಟರು.  

ಡಾ.ಮಹೇಶ್ ಚಿಕ್ಕಮಂಗಳೂರು ರವರು ಮಾತನಾಡಿ ಭಾರತದ ಗಂಭೀರ ಸಮಸ್ಯೆಗಳಲ್ಲಿ ಇರಾನ್ ಸ್ನೇಹಿತನಂತೆ ಸಹಾಯಕ್ಕೆ ಬಂದಿದೆ. ಅಂತರ ರಾಷ್ಟ್ರೀಯ ಮುತ್ಸದ್ದಿತನವನ್ನು ವಿಶ್ವನಾಯಕರು ಮರೆತು ದಶಕಗಳು ಉರುಳಿವೆ” ಎಂದರು.  ಪ್ರತಿಭಟನೆಯಲ್ಲಿ ಶ್ರೀನಿವಾಸ್ ಮರಬ್ಬಿಹಾಳ್, ಪಾಲಾಕ್ಷ ಹಡಗಲಿ, ಸಮೀರ್ ಚೆಲುವಾದಿಕೇರಿ, ಹಿರೇಹಡಗಲಿ ಮುಸ್ತಫಾ, ಡಾ.ಸಂದ್ಯಾ, ಅರವಿಂದ್ ನಾಯಕ್ ಭಾಗವಹಿಸಿದ್ದರು. 


ಸುದ್ದಿ ಓದಿ