ಬರ ಪರಿಹಾರ ಕಾರ್ಯವನ್ನು ಶೀಘ್ರವೇ ಜಾರಿಗೊಳಿಸಲು ಆಗ್ರಹಿಸಿ ಪ್ರತಿಭಟನೆ
ಬಳ್ಳಾರಿ: ನಗರದಲ್ಲಿ AIKKMS ರೈತ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಹಾಗೂ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಬರ ಪರಿಹಾರ ಕಾರ್ಯವನ್ನು ಜಾರಿಗೊಳಿಸಲು ಆಗ್ರಹಿಸಿ ಪ್ರತಿಭಟನೆ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಲಾಯಿತು.ನಂತರ AIKKMS ಜಿಲ್ಲಾ ಅಧ್ಯಕ್ಷ ಗೋವಿಂದ್ ಮಾತನಾಡುತ್ತಾ ಈ ವರ್ಷ ರಾಜ್ಯದಲ್ಲಿ ಮುಂಗಾರು ಮಳೆ ಅಭಾವದಿಂಗಾಗಿ ರೈತರು ಬಿತ್ತಿದ ಯಾವುದೇ ಬೆಳೆ ಕೈ ಸೇರದೆ ನಾಶವಾಗಿದ್ದು, ಈ ಪರಿಸ್ಥಿತಿಯಿಂದ ರಾಜ್ಯ ಸರ್ಕಾರ ರಾಜ್ಯದಲ್ಲಿ ಬಹುತೇಕ ಎಲ್ಲಾ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದ್ದು, ಇಡೀ ರಾಜ್ಯವೇ ಗಮನಿಸಿದೆ, ದುರಂತ ವೆಂದರೆ ರಾಜ್ಯದಲ್ಲಿ ಬರ ಎಂದು ಘೋಷಣೆ ಮಾಡಿ ಸುಮಾರು ಎರೆಡು ತಿಂಗಳಾದರೂ ಸಹ ಇದುವರೆಗೂ ಸಹ ಯಾವುದೇ ಬರ ಕಾಮಗಾರಿಯನ್ನು ಕೈಗೆಟ್ಟಿಕೊಂಡಿಲ್ಲ ಇದನ್ನು ನಾವು ಖಂಡಿಸುತ್ತೇವೆ, ಈ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬರ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಬೇಕೆಂದು ಆಗ್ರಹಿಸಿದರು.ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡುತ್ತಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬರ ಪರಿಸ್ಥಿತಿಯಲ್ಲಿಯೂ ಸಹ ರಾಜಕೀಯ ಮಾಡುತ್ತಿರುವುದು ವಿಪರಿಯಾಸವಾಗಿದೆ. ಭಾರತದ ಪ್ರಧಾನಿ ಅವರು ಪಂಚರಾಜ್ಯ ಚುನಾವಣೆಯಲ್ಲಿ ಮುಳುಗಿ, ಪಿಎಂ ಕಿಸಾನ್ ಹಣ ಬಿಡುಗಡೆ ಮಾಡುವುದು. ನಮ್ಮ ರಾಜ್ಯದ ಶಾಸಕರು ತೆಲಂಗಾಣ ರಾಜ್ಯದ ಚುನಾವಣೆಗೆ ಉಸ್ತುವಾರಿಗಳಾಗುವುದು ಇದೆಲ್ಲವೂ ಈ ಪಕ್ಷಗಳ ಮುಖವಾಡವನ್ನು ಬಯಲಿಗೆಳೆಯುತ್ತಿದೆ. ಇದನ್ನು ಜನಸಾಮಾನ್ಯರು ಅರ್ಥ ಮಾಡಿಕೊಂಡು ಈ ಪಕ್ಷಗಳ ಜನ ವಿರೋಧಿ ನೀತಿಗಳ ವಿರುದ್ಧ ಬಲಿಷ್ಠ ಚಳುವಳಿಗಳು ಬೆಳೆಸಲು ಕರೆ ನೀಡಿದರು.
ಜಿಲ್ಲಾ ಉಪಾಧ್ಯಕ್ಷ ಈರಣ್ಣ, ಜಿಲ್ಲಾ ಸಮಿತಿ ಸದಸ್ಯರಾದ ಬಸವರಾಜ, ಮಲ್ಲಿಕಾಜರ್ುನ, ಸದಸ್ಯರಾದ ಧನರಾಜ, ರಮೇಶ್, ತಿಪ್ಪಯ್ಯ, ಮಾಬುಸಾಬ್, ಹುಲುಗಪ್ಪ, ವೀರೇಶ್ ಸೇರಿದಂತೆ ಇತರರು ಇದ್ದರು