ಕಾರ್ಮಿಕ ವಿರೋಧಿಸಿ ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಕೋಡ್ಗಳನ್ನು ಸುಟ್ಟು ಪ್ರತಿಭಟನೆ
ರಾಯಚೂರು 22 :ಕಾರ್ಮಿಕರ ಹೋರಾಟದಿಂದ ಪಡೆದ ಅನೇಕ ಕಾರ್ಮಿಕ ಕಾಯ್ದೆಗಳನ್ನು ಕೇಂದ್ರ ಸರ್ಕಾರವು ರದ್ದುಪಡಿಸಿ ಕೇವಲ ನಾಲ್ಕು ಕೋಡ್ಗಳಲ್ಲಿ ಕಾರ್ಮಿಕ ವಿರೋಧಿ, ಕಾರ್ಮಿಕರ ಮರಣ ಶಾಸನ ವಾಗಿರುವ ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಓಡುಗಳನ್ನು ಸುಟ್ಟು ಹಾಕೋ ಮೂಲಕ ಕಾರ್ಮಿಕ ವಿರೋಧಿ ನಾಲ್ಕು ಕೋಡ್ ಗಳನ್ನು ತಕ್ಷಣ ಕೇಂದ್ರ ಸರ್ಕಾರ ಕೈಬಿಡಬೇಕೆಂದು ಒತ್ತಾಯಿಸಿ ಇಂದು ಟಿಪ್ಪು ಸುಲ್ತಾನ್ ಗಾರ್ಡನ್ ಮುಂದೆ ಪ್ರತಿಭಟನೆ ಮಾಡುವ ಮೂಲಕ ಎಐಸಿಸಿಟಿಯು ಆಕ್ರೋಶ ವ್ಯಕ್ತಪಡಿಸಿತು.ದೇಶಾದ್ಯಂತ ಕಾರ್ಮಿಕರು ಮತ್ತು ಕಾರ್ಮಿಕ ಪರ ಸಂಘಟನೆಗಳು ಟ್ರೇಡ್ ಯೂನಿಯನ್ ಗಳು ಈಗಾಗಲೇ ಭಾರಿ ಪ್ರತಿರೋಧ ಒಡ್ಡಿದಾಗಲೂ ಹೋರಾಟ ಮಾಡಿದಾಗಲೂ ವಿರೋಧಿಸಿದಾಗಲೂ ಕಾರ್ಮಿಕರ ಮನವಿ ಕಾರ್ಮಿಕರ ಹೋರಾಟವನ್ನು ಲೆಕ್ಕಿಸದೆ ಕೇಂದ್ರದ ನರೇಂದ್ರ ಮೋದಿಜಿ ಅವರ ಸರ್ಕಾರ ಕಾರ್ಮಿಕ ವಿರೋಧಿ ಬಿಲ್ಲುಗಳನ್ನು ಜಾರಿಗೆ ತರುವುದರ ಮೂಲಕ ಕಾರ್ಮಿಕರಿಗೆ ಕಾರ್ಮಿಕ ಕಾಯ್ದೆಯಿಂದ ಸಿಗಬೇಕಾದ ಎಲ್ಲಾ ಹಕ್ಕುಗಳನ್ನು ಕಸಿದು ಕಾರ್ಮಿಕರನ್ನು ಕಾರ್ಮಿಕ ಕುಟುಂಬಗಳನ್ನು ಬೀದಿ ಪಾಲು ಮಾಡುವ ಈ ನಾಲ್ಕು ಕೋಡ್ ಗಳನ್ನು ಜಾರಿಗೆ ತರಲು ಬಿಡುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದರು.
ನಿನ್ನೆಯಿಂದ ಜಾರಿಗೊಳಿಸಿದ ಕಾರ್ಮಿಕ ವಿರೋಧಿ ನಾಲ್ಕು ಕೋಡ್ ಗಳನ್ನು ತಕ್ಷಣ ಕೇಂದ್ರ ಸರ್ಕಾರ ಹಿಂಪಪಡೆಯದಿದ್ದಲ್ಲಿ ದೇಶಾದ್ಯಂತ ಕಾರ್ಮಿಕರು ಕಾರ್ಮಿಕ ಸಂಘಟನೆಗಳಿಂದ ಬಹುದೊಡ್ಡ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ಈ ಪ್ರತಿಭಟನೆಯ ಮೂಲಕ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ.ಈ ಸಂದರ್ಭದಲ್ಲಿ:ಎಐಸಿಸಿಟಿಯು ಜಿಲ್ಲಾಧ್ಯಕ್ಷರು ಅಜೀಜ್ ಜಾಗೀರ್ದಾರ್, ಮುಖಂಡರುಗಳಾದ ಜಿಲಾನಿ ಪಾಷಾ, ಜಗದೀಶ್, ನಿಸಾರ್ ಅಹ್ಮದ್, ಭೀಮಣ್ಣ, ಮೊಹಮ್ಮದ್ ಮೂವೀಸ್, ಹನೀಫ್ ಅಬಕಾರಿ, ಮಾರಣ್ಣ ಸೇರಿದಂತೆ ಇದ್ದರು. ದಿನಾಂಕ:22-11-2025 ಸ್ಥಳ:ರಾಯಚೂರು