ಸಚಿವ ಸಿಟಿ ರವಿ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ
ಮುದ್ದೇಬಿಹಾಳ: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ತಮ್ಮ ಸಾರ್ವಜನಿಕ ಸಮಾರಂಭದ ಭಾಷಣದಲ್ಲಿ ವಿರೋಧ ಪಕ್ಷದವರನ್ನು ಟೀಕಿಸುವ ಭರದಲ್ಲಿ ಕುರುಡರಿಬ್ಬರ ಕಥೆಯನ್ನು ಹೇಳುವ ಮೂಲಕ ದಿವ್ಯಾಂಗರನ್ನು ಅವಮಾನಿಸಿದ್ದನ್ನು ರಾಜ್ಯ ವಿಕಲಚೇತನರ ಸಂಘವು ತೀವ್ರವಾಗಿ ಖಂಡಿಸುತ್ತದೆ ಎಂದು ದಿವ್ಯಾಂಗ ಚೇತನರ ಸಂಘಟನೆಯ ಜಿಲ್ಲಾಧ್ಯಕ್ಷ ಎಸ್.ಕೆ.ಘಾಟಿ ಹೇಳಿದರು.
ಗ್ರೇಡ್ 2 ತಹಶೀಲ್ದಾರ ಜಿ ಎಸ್ ಕಟ್ಟಿಯವರು ಮನವಿ ಸ್ವೀಕರಿಸಿದರು. ಪಟ್ಟಣದ ಹಳೇ ತಹಶೀಲ್ದಾರ ಕಚೇರಿ (ಸೈನಿಕ ಮೈದಾನ)ದಿಂದ ಬಸವೇಶ್ವರ ವೃತ್ತದ ಮುಖಾಂತರ ತಹಶೀಲ್ದಾರರವರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನೂರುಕ್ಕೂ ಹೆಚ್ಚು ಜನ ತಾಲೂಕಿನ (ದಿವ್ಯಾಂಗ) ವಿಕಚೇತನರು ಸಚಿವ ಸಿ ಟಿ ರವಿ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದ ಅವರು ಮಿನಿವಿಧಾನಸೌಧಕ್ಕೆ ತೆರಳಿ ತಹಶಿಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಗುರುವಾರ ಮನವಿ ಸಲ್ಲಿಸಿ ಮಾತನಾಡಿದ ಅವರು.
ಕಣ್ಣಿಲ್ಲದ ಕುರುಡನು ತನ್ನ ಹೆಗಲಮೇಲೆ ಕಾಲಿಲ್ಲದ ಕುಂಟನನ್ನು ಕುಳ್ಳಿರಿಸಿಕೊಂಡು ಕುಂಟನ ನಿರ್ದೇಶನದಲ್ಲಿ ಭೀಕ್ಷೆ ಬೇಡಲು ಹೊರಟ ಕಥೆ ಹೇಳುತ್ತ, ದಾರಿಯಲ್ಲಿ ಯಾರಾದರೂ ಕರುಣೆಯಿಂದ ಬೆಲೆಬಾಳುವ ವಸ್ತುಗಳನ್ನು ನೀಡಿದಾಗ ಕುಂಟ ಅದನ್ನು ಬಾಯೊಳಗೆ ಹಾಕಿಕೊಂಡು ಕುರುಡನಿಗೆ ಮೋಸ ಮಾಡುತ್ತಿದ್ದ ಎಂದು ಉದಾಹರಿಸುತ್ತಾರೆ. ಈ ಕಥೆಯನ್ನು ಪಕ್ಷವೊಂದನ್ನು ಮೋಸಗಾರ ಪಕ್ಷ ಎಂದು ಹೇಳಲು ಹೊರಟಿದ್ದು, ಮೋಸದ ವ್ಯವಹಾರಕ್ಕೆ ಕುರುಡ ಕುಂಟರನ್ನು ಬಳಸಿಕೊಂಡಿದ್ದು ಅಲ್ಲದೆ ಅವರ ಅಂಗವೈಕಲ್ಯವನ್ನು ಕುಡ್ಡ, ಕುಂಟ' ಎಂದು ಜರಿದು ರಾಜ್ಯಾದ್ಯಂತ ಇರುವ ದಿವ್ಯಾಂಗಚೇತನರಿಗೆ ಅವಮಾನ ಮಾಡಿದ್ದು ನಿಜಕ್ಕೂ ಯಾವೂದೇ ತಪ್ಪು ಮಾಡದ ಹುಟ್ಟಿನಿಂದಲೇ ದಿವ್ಯಾಂಗರಾಗಿ ಎಲ್ಲ ಸಾಮಾನ್ಯರಂತೆ ಬದುಕ ಬೇಕೆಂಬ ಭಾವನೆಯುಳ್ಳ (ದಿವ್ಯಾಂಗ) ವಿಕಲಚೇತನರ ಮನಸ್ಸಿಗೆ ತುಂಬಾ ನೋವನ್ನುಂಟುಮಾಡಿದೆ.
ಕಾರಣ ಸಿ.ಟಿ.ರವಿ ಇವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಜೊತೆಗೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.
ಈ ವೇಳೆ ಜೆಡಿಎಸ್ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ ಎಂ ರಿಸಾಲ್ದಾರ ಅವರು ಮಾತನಾಡಿ ಒಬ್ಬ ಜವಾಬ್ದಾರಿ ಉನ್ನತ ಹುದ್ದೆಯ ಸಚಿವರಾಗಿದ್ದು ಸಿ ಟಿ ರವಿ ರವಿಯವರು ಯಾರನ್ನೇ ಆಗಲಿ ಈ ರೀತಿ ನಿಂದಿಸುವುದು ಮಾತ್ರವಲ್ಲದೇ ವ್ಯಂಗ್ಯವಾಗಿ ಮಾತನಾಡುವುದು ಅವರ ಘನತೆಗೆ ಶೋಭೆ ತರುವಂತಹದ್ದಲ್ಲ ಯಾರೇ ಹುಟ್ಟುವಾಗ ನಾವು ಹೀಗೇ ಹುಟ್ಟುತ್ತೇವೆ ಎಂದು ಹೇಳಿಕೊಂಡು ಹುಟ್ಟುವುದಿಲ್ಲ ಎಂಬುದನ್ನು ಸಿ ಟಿ ರವಿ ಅವರು ಅರ್ಥೈಸಿಕೊಳ್ಳಬೇಕು ದಿವ್ಯಾಂಗರ ಬಗ್ಗೆ ಕೀಳಾಗಿ ಮಾತನಾಡಬಾರದಿತ್ತು. ಕಾರಣ ಈ ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಇಲ್ಲದಿದ್ದರೇ ಇಡೀ ರಾಜ್ಯಾದಾಧ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಲೂಕಾ (ದಿವ್ಯಾಂಗ) ವಿಕಲಚೇತನರ ಸಂಘದ ತಾಲೂಕಾ ಅಧ್ಯಕ್ಷ ಅಡಿವೇಪ್ಪ ಕೊಡಗಾನೂರ, ಉಪಾಧ್ಯಕ್ಷ ಬಾಲಪ್ಪ ಬೀಸಲದಿನ್ನಿ, ಉಮೇಶ ಕತ್ತಿ, ಬಸವರಾಜ ನಾಯ್ಕೋಡಿ, ಗದ್ದೇಪ್ಪ ಹಾದಿಮನಿ, ಬಸಪ್ಪ ದೇಸಾಯಿ, ಆಶಿಪ್ ಮೋಕಾಶಿ, ಭೀಮನಗೌಡ ಪೋಲೇಶಿ, ಸಂಗಪ್ಪ ಡೊಳ್ಳಿನ, ನಾಗೇಶ ಅಮರಾವತಿ, ನಜೀಹಮ್ಮದ ದೊಡಮನಿ, ಸಂಗನಗೌಡ ಬಗಲಿ, ಗದ್ದೇಪ್ಪ ಹಾದಿಮನಿ,ಮಹಮ್ಮದಯಾಶಿನ ಮಮದಾಪೂರ, ಟಿಪ್ಪುಸುಲ್ತಾನ ಮುದ್ನಾಳ, ಯಲಗೂರದಪ್ಪಗೌಡ ಪಾಟೀಲ, ಹಸಿನಾಬಾನು ಕೂಡಗಿ, ನಿಂಗಪ್ಪ ತಳವಾರ ಸೇರಿದಂತೆ ಹಲವರು ಇದ್ದರು.