ಎಸ್ಎಫ್ಐ ರಾಷ್ಟ್ರ ಸಮ್ಮೇಳನದ ಪೋಸ್ಟರ್ ಬಿಡುಗಡೆ
ಲೋಕದರ್ಶನ ವರದಿ
ಶಿಗ್ಗಾವಿ 11: ಎಲ್ಲರಿಗೂ ಶಿಕ್ಷಣ, ಎಲ್ಲರಿಗೂ ಉದ್ಯೋಗ, ಎಲ್ಲರೂ ಒಂದು ಎಂಬ ಪ್ರಮುಖ ಘೋಷಣೆಯಡಿಯಲ್ಲಿ ನಡೆಯುವ ಎಸ್ಎಫ್ಐ 17ನೇ ರಾಷ್ಟ್ರ ಸಮ್ಮೇಳನದ ಪೋಸ್ಟರ್ನ್ನು ತಾಲೂಕ ಸಮಿತಿ ಪದಾಧಿಕಾರಿಗಳು ಅನಾವರಣ ಮಾಡಿದರು.
ಜಿಲ್ಲಾ ಉಪಾದ್ಯಕ್ಷೆ ಜ್ಯೋತಿ ದೊಡ್ಡಮನಿ ಮಾತನಾಡಿ ಕಳೆದ 50 ವರ್ಷಗಳಿಂದ ಶಿಕ್ಷಣದ ಉಳಿವಿಗಾಗಿ, ವಿದ್ಯಾರ್ಥಿಗಳ ಏಳ್ಗೆಗಾಗಿ ನಿರಂತರ ಹೋರಾಟ, ಕಾರ್ಯಕ್ರಮ, ಸಂವಾದ, ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ನಡೆಸುತ್ತಾ ವಿದ್ಯಾರ್ಥಿಗಳ ಆಶಾಕಿರಣವಾಗಿ ಕೆಲಸ ಮಾಡುತ್ತಿರುವ ಎಸ್ಎಫ್ಐ ಸಂಘಟನೆಯ 17ನೇ ರಾಷ್ಟ್ರ ಸಮ್ಮೇಳನ ತೆಲಂಗಾಣ ರಾಜ್ಯದ ಹೈದರಾಬಾದ್ ನಲ್ಲಿ ಡಿ. 13 ರಿಂದ 16ರವರೆಗೆ ನಡೆಯಲಿದೆ. ಎಲ್ಲರಿಗೂ ಶಿಕ್ಷಣ, ಎಲ್ಲರಿಗೂ ಉದ್ಯೋಗ, ಎಲ್ಲರೂ ಒಂದು ಎಂಬ ಪ್ರಮುಖ ಘೋಷಣೆಯಡಿಯಲ್ಲಿ ರಾಷ್ಟ್ರ ಸಮ್ಮೇಳನ ನಡೆಯುತ್ತಿದೆ ಎಂದರು.
ತಾಲೂಕ ಅಧ್ಯಕ್ಷ ರವಿ ಬಂಕಾಪುರ ಮಾತನಾಡಿ ಸರ್ಕಾರದ ಅನೇಕ ಹೊಸ ಶಿಕ್ಷಣ ನೀತಿಗಳು ಖಾಸಗೀಕರಣದ ಕಡೆಗೆ ಜಾಸ್ತಿ ಒತ್ತು ಕೊಡುತ್ತಿವೆ. ಹೀಗಾದರೆ ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಅಂತಹ ಶಿಕ್ಷಣ ನೀತಿಗಳು ವಾಪಸಾಗಬೇಕು. 17 ನೇ ರಾಷ್ಟ್ರ ಸಮ್ಮೇಳನದಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಶಿಕ್ಷಣ ತಜ್ಞರು, ಪ್ರಗತಿಪರ ಚಿಂತಕರು, ಬುದ್ಧಿಜೀವಿಗಳು ದೇಶದ ವಿವಿಧ ಭಾಗಗಳಿಂದ ಒಂದು ಸಾವಿರ ವಿದ್ಯಾರ್ಥಿ ಪ್ರತಿನಿಧಿಗಳು, ವಿದ್ಯಾಥರ್ಿ ಚಳುವಳಿಯಲ್ಲಿರುವ, ನಾಯಕರು ಪಾಲ್ಗೊಳ್ಳುತ್ತಿದ್ದು ಶಿಕ್ಷಣ ಮತ್ತು ಉದ್ಯೋಗ ಸೇರಿದಂತೆ ಹಲವಾರು ಕ್ಷೇತ್ರಗಳ ಕುರಿತು, ರಾಷ್ಟ್ರವನ್ನು ತಲ್ಲಣಗೊಳಿಸುತ್ತಿರುವ ಭಯೋತ್ಪಾದನೆ, ಕೋಮುವಾದ, ಭ್ರಷ್ಠಾಚಾರ, ನಿರುದ್ಯೋಗ, ಬಡತನ ಸೇರಿದಂತೆ ಇನ್ನು ಹಲವಾರು ವಿಷಯಗಳ ಕುರಿತು ವಿಚಾರ ಸಂಕಿರಣಗಳು, ಚರ್ಚಾ ಗೋಷ್ಟಿಗಳು ಪ್ರಸರಿಸಲಿವೆ ಎಂದು ಹೇಳಿದರು.
ಅರ್ಜು ನ ರಾಜಪೂತ್, ರೋಜಾ ಹರಿಜನ, ದೇವರಾಜ್ ಅಕಸಾಲಿ, ಪೂರ್ಣಿ ಮಾ ಡವಗಿ, ಅಭಿಷೇಕ ಕ್ಯಾಲಿಕೊಂಡ, ಲಕ್ಷ್ಮಿ ಡಿ, ಶ್ರೀನಿವಾಸ ಮಣ್ಣವಡ್ಡರ, ಉಪಸ್ಥಿತರಿದ್ದರು