ಪ್ಲಾಸ್ಟಿಕ್ ಮುಕ್ತ ಅಭಿಯಾನ ಕಾರ್ಯಕ್ರಮ
ಮಹಾಲಿಂಗಪುರ: ಸಮೀಪದ ರನ್ನ ಬೆಳಗಲಿ ಪಟ್ಟಣ ಪಂಚಾಯತ ಆಶ್ರಯದಲ್ಲಿ,ಸ್ವಚ್ಛ ಭಾರತ ಮಿಷನ್ ಯೋಜನೆಯ ಪ್ಲಾಸ್ಟಿಕ್ ಮುಕ್ತ ಅಭಿಯಾನ ಕಾರ್ಯಕ್ರಮ ಜರುಗಿತು.
ರನ್ನ ಬೆಳಗಲಿ ಪಟ್ಟಣದ ಎಲ್ಲಾ ವರ್ತಕರಿಗೆ ಅನದಿಕೃತ ಪ್ಲಾಸ್ಟಿಕ್ ದಾಸ್ತಾನು ಮತ್ತು ಬಳಕೆ ತಡೆಯಲು,ಪ್ಲಾಸ್ಟಿಕ್ ದಾಳಿ ನಡೆಸಲು ನಗರ ಸ್ಥಳೀಯ ಸಂಸ್ಥೆಗಳ ತಂಡಗಳನ್ನು ರಚಿಸುವುದು ಮತ್ತು ಸದರಿ ತಂಡಗಳ ಸದಸ್ಯರುಗಳಿಗೆ ನಗರದ ಪ್ರಮುಖ ಪ್ರದೇಶಗಳಾದ ತರಕಾರಿ ಮಾರುಕಟ್ಟೆ, ಸ್ಥಳೀಯ ಸಗಟು ಮಾರುಕಟ್ಟೆಗಳು,ಕೈಗಾರಿಕಾ ಪ್ರದೇಶಗಳು, ಬೀದಿ ವ್ಯಾಪಾರಿಗಳು,ಹೂವು ಮಾರಾಟಗಾರರು,ಬಸ್ ನಿಲ್ದಾಣಗಳು,ಸಾರ್ವಜನಿಕ ಮತ್ತು ವಾಣಿಜ್ಯ ಸ್ಥಳಗಳಲ್ಲಿ ದಾಳಿ ನಡೆಸಿ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಳ್ಳಲು ಯೋಜನೆ ರೂಪಿಸಿಕೊಂಡು,ಜುಲೈ ಒಂದು ತಿಂಗಳ ಪ್ಲಾಸ್ಟಿಕ್ ಮುಕ್ತ ಅಭಿಯಾನ ಕಾರ್ಯಕ್ರಮ ಜರುಗುವುದು ಹಾಗೂ ಈ ಜುಲೈ ತಿಂಗಳ ಮೊದಲ ವಾರದಲ್ಲಿ ಪೌರಕಾರ್ಮಿಕರಗಳಿಗೆ ಏಕೆ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಗುರುತಿಸಲು ಮತ್ತು ಏಕ ಬಳಕೆ ಪ್ಯಾಸ್ಟಿಕ್ ನಿಂದ ಉಂಟಾಗುವ ದುಷ್ಪರಿಣಾಮಗಳು ಮತ್ತು ಸದರಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಸಂಭವಿಸಬಹುದಾದ ವಿವಿಧ ರೀತಿಯ ಗಾಳಿ,ನೀರು ಮತ್ತು ಮಣ್ಣಿನ ಮಾಲಿನ್ಯದ ಕುರಿತು,ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮ ಜರುಗಿತು.
ಈ ವಿಷಯವನ್ನು ಸ್ಥಳೀಯ ಪಟ್ಟಣದ ಎಲ್ಲಾ ವರ್ತಕರಿಗೆ ಪಟ್ಟಣ ಪಂಚಾಯತ್ ಸಿಬ್ಬಂದಿ ವರ್ಗದವರು ಪ್ರತಿ ಅಂಗಡಿ ಮುಗಟ್ಟುಗಳಿಗೆ ಭೇಟಿ ನೀಡಿ ಮಾಹಿತಿಯನ್ನು ನೀಡಿದರು ಹಾಗೂ ಅವರಲ್ಲಿದ್ದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡರು.ಈ ಸಂದರ್ಭದಲ್ಲಿ ಪ್ರಭಾರ ಆರೋಗ್ಯ ನಿರೀಸಿಕರಾದ ಪಿ ಡಿ ನಾಗನೂರ, ಕಂದಾಯ ನಿರೀಕ್ಷಕರಾದ ಸಂತೋಷ ಚೌವ್ಹಾನ, ಬೆಳಗಲಿಯ ಬೀಟ್ ರಾದ ಸಂಗಪ್ಪ ರೇವಶೆಟ್ಟಿ,ಸತ್ಯಪ್ಪ ಹನಗಂಡಿ,ಸಚಿನ ಕಾಸರ,ಹಾಗೂ ಇತರರು ಉಪಸ್ಥಿತರಿದ್ದರು.