ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿಗೆ ಮನವಿ
ಮಹಾಲಿಂಗಪುರ: ದೇವಸ್ಥಾನದ ಪಾವಿತ್ರ್ಯತೆ ದೃಷ್ಟಿಯಿಂದ ಸ್ಥಳೀಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ಕೋರಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಡಳಿತ ಮಂಡಳಿಗೆ ಮನವಿ ನೀಡಲಾಯಿತು.
ಮಹಾಲಿಂಗೇಶ್ವರ ದೇವಸ್ಥಾನವು ಸನಾತನ ಹಿಂದೂಗಳ ಶ್ರದ್ಧಾ ಸ್ಥಾನವಾಗಿದ್ದು ಪ್ರತಿನಿತ್ಯ ಎರಡು ಸಾವಿರ ಹಾಗೂ ಶ್ರಾವಣದ ಪ್ರತಿ ಸೋಮವಾರ ಸಾವಿರಾರು ಭಕ್ತರು ದರ್ಶನಕ್ಕೆ ಬರುತ್ತಾರೆ. ಈಗಾಗಲೇ ಚಿಕ್ಕಮಗಳೂರಿನ ಇತಿಹಾಸ ಪ್ರಸಿದ್ದ ದೇವಿರಮ್ಮನ ದೇಗುಲ ವಸ್ತ್ರ ಸಂಹಿತೆ ಜಾರಿ ಮಾಡಿರುವ ಮಾದರಿಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿಯೂ ಸಹ ವಸ್ತ್ರ ಸಂಹಿತೆಯನ್ನು ಜಾರಿಮಾಡಬೇಕು, ಮಹಿಳೆಯರಿಗೆ ಭಾರತೀಯ ಸಾತ್ವಿಕ ಉಡುಪುಗಳಾದ ಮಹಿಳೆಯರು ಲಂಗ-ದಾವಣಿ, ಸಲ್ವಾರ್-ಕುರ್ತಾ ಜೊತೆಗೆ ಸೀರೆ, ಓಡಣಿ ಮುಂತಾದವು ಹಾಗೂ ಪುರುಷರಿಗೆ ಕುರ್ತಾ ಧೋತಿ, ಲುಂಗಿ ಅಥವಾ ಪೈಜಾಮ ಅಥವಾ ಸಾಮಾನ್ಯ ಶರ್ಟ್-ಪ್ಯಾಂಟ್ಗಳನ್ನು ಕಡ್ಡಾಯಗೊಳಿಸಿ, ಈ ಕುರಿತಾಗಿ ದೇವಾಲಯ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿ, ಸಾಮಾಜಿಕ ಜಾಲತಾಣ ಮತ್ತು ಪತ್ರಿಕೆಗಳ ಮೂಲಕ ಹೆಚ್ಚು ಪ್ರಚಾರ ಮಾಡಬೇಕೆಂದು ಕೋರಿ ಆಡಳಿತಾಧಿಕಾರಿ ಈಶ್ವರ ಮಠದ ಅವರಿಗೆ ಮನವಿ ಸಲ್ಲಿಸಲಾಯಿತು. ಸಮಿತಿಯ ಉತ್ತರ ಕರ್ನಾಟಕದ ಪ್ರಮುಖ ವೆಂಕಟರಮಣ ನಾಯಕ, ಪ್ರಮುಖ ಸುಜಾತ,ಲಕ್ಷ್ಮಿ,ಶೋಭಾ ಅಂಬಿ,ಇಂದಿರಾ ಹತ್ರೋಟ್ಟಿ, ರವಿ ಜವಳಗಿ,ಭೈರೇಶ ಆದೆಪ್ಪನವರ,ಸಚಿನ.ಕಲಮಡಿ, ನಂದೇಶ ಲಾತುರ, ರಾಘು ಪವಾರ,ಅರ್ಜುನ ಪವಾರ,ಮಹಾಲಿಂಗ ಜಮಖಂಡಿ,ವೀರಭದ್ರ ಮುಗಳ್ಯಾಳ,ಶ್ರೀಶೈಲ ಮಠ, ಸಂತೋಷ ಹಜಾರಿ, ಶಿವು ಹುಣಶ್ಯಾಳ,ಚನ್ನು ಆರೆಗಾರ, ಧರ್ಮರಾಜ್ ಪೂಜಾರಿ, ಚಂದ್ರು ಭಜಂತ್ರಿ,ಸಾಗರ ಪರೀಟ,ಸದಾಶಿವ ಹೊಳಪ್ಪಗೊಳ,ಈರಣ್ಣ ಹುಣಶ್ಯಾಳ,ಆನಂದ ಬಂಡಿಗಣಿ,ಬಸು ಹುದ್ದಾರ,ಮಹಾಲಿಂಗ ಹಾವನಲ್ಲಿ,ರ, ಪ್ರಜ್ವಲ ಕೋರಿಶೆಟ್ಟಿ,ಆನಂದ ಪವಾರ, ಸಂದೀಪ್ ಸೋರಗೊಂಡ, ಇನ್ನು ಹಲವಾರು ಹಿಂದೂ ಸಂಘಟನೆಯ ಕಾರ್ಯಕರ್ತರೂ ಭಾಗಿಯಾಗಿದ್ದರು.