ಕೆಎಲ್ಇ, ಎಸ್ಸಿಪಿ ಪ್ರೌಢಶಾಲೆಗೆ ಶೇ. ಶೇ.82.28ರಷ್ಟು ಫಲಿತಾಂಶ
ಮಹಾಲಿಂಗಪುರ: ಸ್ಥಳೀಯ ಕೆಎಲ್ ಶಿಕ್ಷಣ ಸಂಸ್ಥೆಯ ಎಸ್ಸಿಪಿ ಪ್ರೌಢಶಾಲೆಯ ಎಸ್ಸೆಸೆಲ್ಸಿ ಪರೀಕ್ಷೆ ಫಲಿತಾಂಶ ಶೇ.82.28ರಷ್ಟಾಗಿದೆ. ಲಕ್ಷ್ಮೀ ಬಂಡಿ (98.72)ಶಾಲೆಗೆ ಮತ್ತು ಮಹಾಲಿಂಗಪುರ ವಲಯಕ್ಕೆ ಪ್ರಥಮ, ಮಹೇಶ ಮರೆಗುದ್ದಿ (94.72) ದ್ವಿತೀಯ, ಶ್ರೀದೇವಿ ಕಂಠಿ (93.6) ತೃತೀಯ ಸ್ಥಾನ ಪಡೆದಿದ್ದಾರೆಂದು ಉಪಪ್ರಾಂಶುಪಾಲ ಬಿ.ಎನ್.ಅರಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ