ಮಹಲಿಂಗಪುರ

ನಮ್ಮ ನಡೆ ಮತಗಟ್ಟೆ ಕಡೆ: ಭಂಡಾರಕರ

ನಮ್ಮ ನಡೆ ಮತಗಟ್ಟೆ ಕಡೆ: ಭಂಡಾರಕರ

ಮಹಾಲಿಂಗಪುರ: ಹತ್ತಿರದ ರನ್ನ ಬೆಳಗಲಿ ಪಟ್ಟಣ ಪಂಚಾಯತ್,ಆಶ್ರಯದಲ್ಲಿ 'ನಮ್ಮ ನಡೆ ಮತಗಟ್ಟೆ ಕಡೆ' ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆಯ 2023 ಅಂಗವಾಗಿ ಈ ಕಾರ್ಯಕ್ರಮವು 'ಪ್ರಜಾಪ್ರಭುತ್ವದ ಹಬ್ಬ ಮೇ 10 ಮತದಾನ' ಎಂಬ ದ್ಯೇಯ ವಾಕ್ಯ ದೊಂದಿಗೆ ಜರುಗಿತು.

ವಿಶೇಷವಾಗಿ ಸಿಂಗರಿಸಿದ ಎತ್ತಿನ ಗಾಡಿ, ಅದರಲ್ಲಿ ಪುಟ್ಟ ಬಾಲಕ ಬಾಲಕಿಯರು ರಾಷ್ಟ್ರ ನಾಯಕರ ವೇಷ ಧರಿಸಿ ಮತದಾನದ ಜಾಗೃತಿಯ ನುಡಿಗಳ ಫಲಕ ಹಿಡಿದುಕೊಂಡು ಜಾಗೃತಿ ಮೂಡಿಸಿದರು. ಈ ಒಂದು ಮೆರವಣಿಗೆ ಊರಿನ ಪ್ರಮುಖ ಬೀದಿಗಳನ್ನು ಸಂಚರಿಸಿ ಮತದಾನದ ಘೋಷ ವಾಕ್ಯಗಳ ಜೊತೆಗೆ ಪಟ್ಟಣ ಪಂಚಾಯತ್ ಜೊತೆಗೆ ಸ್ಥಳೀಯ 5 ಕ್ಲಷ್ಟರಗಳಲ್ಲಿ ಚುನಾವಣೆ ಧ್ವಜಾರೋಹಣ ನೆರವೇರಿಸಲಾಯಿತು.

 ಈ ಕಾರ್ಯಕ್ರಮಗಳು ತಾಲೂಕ ಚುನಾವಣೆ ಅಧಿಕಾರಿಗಳಾದ ಸೋಮಲಿಂಗ ಗೆನ್ನೂರ ಹಾಗೂ ಸಹಾಯಕ ಚುನಾವಣೆ ಅಧಿಕಾರಿಗಳು,ತಹಸಿಲ್ದಾರ್ ಮುಧೋಳ ಮತ್ತು ಪಟ್ಟಣ ಪಂಚಾಯತ್,ರನ್ನ ಬೆಳಗಲಿಯ ಆಡಳಿತ ಅಧಿಕಾರಿಗಳಾದ ವಿನೋದ ಲಕ್ಷ್ಮಣ ಹತ್ತಳ್ಳಿ ರವರ ಮಾರ್ಗದರ್ಶನದಂತೆ ಜರುಗಿದವು.ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಗಳಾದ ಅಜಯ ಬಂಡಾರಕರ ರವರು ಪ್ರಾಸ್ತಾವಿಕವಾಗಿ ರಾಜ್ಯಮಟ್ಟದಲ್ಲಿ ಒಂದೇ ರೀತಿಯ ಪ್ರಜಾಪ್ರಭುತ್ವ ಹಬ್ಬ ಮೇ 10 ಮತದಾನ ಎಂಬ ದ್ಯೇಯ ವಾಕ್ಯವನ್ನು ಒಳಗೊಂಡಿರುವ ಈ ಏಪ್ರಿಲ್ 30ರ ಈ ದಿನದಂದು ರಾಜ್ಯದ ಎಲ್ಲಾ ಕಡೆ ಏಕಕಾಲದಲ್ಲಿ ಮತದಾನದ ಬಾವುಟವನ್ನು ಎಲ್ಲ ಪ್ರಮುಖ ಮತಗಟ್ಟೆಗಳಲ್ಲಿ ಈ ದಿನ ಹಾರಿಸುವುದರ ಮುಖಾಂತರ ಈ ಒಂದು ಪ್ರಜಾಪ್ರಭುತ್ವ ಹಬ್ಬವನ್ನು ಯಶಸ್ವಿಗೊಳಿಸಲಾಯಿತು.ಇದರ ನಿಜವಾದ ಯಶಸ್ಸು ನಮಗೆ ದೊರೆಯುವುದು ಮೇ 10ರಂದು ನೂರಕ್ಕೆ ನೂರರಷ್ಟು ಮತದಾನ ಆದರೆ ಮಾತ್ರ. 

ಪ್ರಜ್ಞಾವಂತ ನಾಯಕರನ್ನು ಆಯ್ಕೆ ಮಾಡುವುದೇ ಮತದಾನ. ನನ್ನ ಮತ ನನ್ನ ಹಕ್ಕು. ನಮ್ಮ ಮತ ಮಾರಾಟಕ್ಕಿಲ್ಲ.ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯಂತೆ ನಾವೆಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು, ಅದರೊಂದಿಗೆ ಮತದಾನದ ಮಹತ್ವವನ್ನು ಜನಸಾಮಾನ್ಯರಿಗೆ ತಿಳುಸುವ ಜಾಗೃತಿ ಕಾರ್ಯಕ್ರಮವೇ ಈ ಪ್ರಜಾಪ್ರಭುತ್ವ ಹಬ್ಬ ಅದುವೇ ಮತದಾನ ದಿನ ಮೇ 10 ಎಂಬ ವಿಚಾರಗಳನ್ನು ತಿಳಿಸಿದರು.ಸ್ಥಳೀಯ ಸೆಕ್ಟರ್ ಅಧಿಕಾರಿಗಳಾದ ಎಮ್ ಎಸ್ ಸುತಾರ,ರವರು ಮತದಾನ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.ಸ್ಥಳೀಯ ಡಪಳಾಪೂರ ವಿದ್ಯಾ ವಿಹಾರ ಶಾಲೆ ವಿದ್ಯಾರ್ಥಿಗಳು ಮತದಾನ ಜಾಗೃತಿಯ ಕುರಿತು ಬೀದಿ ನಾಟಕವನ್ನು ಮಾಡುವುದರ ಜೊತೆಗೆ ಮತದಾನದ ಮಹತ್ವವನ್ನು ಸಾರಿದರು.ಶಿಕ್ಷಕ ರಾಘವೇಂದ್ರ ನೀಲಣ್ಣವರ ರವರು ಐದು ವರ್ಷದ ಸುಭದ್ರ ಆಡಳಿತಕ್ಕೆ ಒಬ್ಬ ಉತ್ತಮ ನಾಯಕನಿಗೆ ಒಂದು ಮತ ಹಾಕಲು ಒಂದು ದಿನವನ್ನು ಮೀಸಲಿಡೋಣ,

ಆ ದಿನವೇ ಮೇ 10 ಮತದಾನದ ದಿನ, ಎಲ್ಲರೂ ಮತವನ್ನು ಹಾಕೋಣ ಜೊತೆಯಾಗಿ ಬರೋಣ ನಮ್ಮೂರನ್ನ, ನಮ್ಮ ನಾಡನ್ನು ಅಭಿವೃದ್ಧಿಪಡಿಸುವ ನಾಯಕರಿಗೆ ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ,ನಮ್ಮ ಮತವನ್ನು ಮಾರಿಕೊಳ್ಳದೆ ಪವಿತ್ರವಾದ ಮತವನ್ನು ಹಾಕುವುದರ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸೋಣ ಎಂಬ ವಿಚಾರವನ್ನು ತಿಳಿಸುವುದರ ಜೊತೆಗೆ ಎಲ್ಲಾ ಮಹನೀಯನ್ನು ಸ್ವಾಗತ ಮಾಡಿಕೊಂಡು ಕಾರ್ಯಕ್ರಮವನ್ನು ನಿರೂಪಿಸಿದರು.ಮತದಾನ ಜಾಗೃತಿಯ ಮೆರವಣಿಗೆಯಲ್ಲಿ ರಾಷ್ಟ್ರ ನಾಯಕರ ವೇಷದಲ್ಲಿ ಮಿಂಚಿದ ಪುಟಾಣಿಗಳು ವಿನಾಯಕ ಸೊನೋನೆ, ತನುಜಾ ಕಂಬಾರ, ಸೃಷ್ಟಿ ಹೊಸಪೇಟಿ, ಸಂಪತ ದಡ್ಡಿನವರ, ಶ್ರೀಶೈಲ ರಾಮದುರ್ಗ,ಸಹನಾ ಕೊಣ್ಣೂರ್,ಅಸ್ಮಿತಾ ಸ್ಥಾವರಮಠ,ಅಥರ್ವ ಖಾಡದೇವರ, ಶ್ರೀಶೈಲ ಬಾಗಲಿ,ಸಮೃದ್ಧಿ ನೀಲಣ್ಣವರ,ಸಾನ್ವಿ ಬಾಗಲಿ,ಈ ಎಲ್ಲ ಪುಟಾಣಿ ಮಕ್ಕಳು ಎಲ್ಲರ ಗಮನವನ್ನು ಸೆಳೆದರು.ಸ್ಥಳೀಯ ರೈತರಾದ ಈರಪ್ಪ ಸಣ್ಣಟ್ಟಿ, ರಾಮಪ್ಪ ದೋಬಸಿ,ಬಸಣ್ಣ ಪೂಜಾರಿ,ಮತ್ತು ನಾಗಪ್ಪ ಸವಳಿ,ತಮ್ಮ ಎತ್ತಿನ ಗಾಡಿಗಳನ್ನು ಸಿಂಗರಿಸಿ ಮತದಾನ ಜಾಗೃತಿಯಲ್ಲಿ ಪಾಲ್ಗೊಂಡು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಿದರು.ಇದೇ ಸಂದರ್ಭದಲ್ಲಿ ಪಿ ಡಿ ನಾಗನೂರು,ಸಂತೋಷ್ ಚೌಹಾನ,ಎಸ್ ಬಿ ಚೌದ್ರಿ, ಸುರೇಶ್ ಹರಿಜನ್,ಪಟ್ಟಣ ಪಂಚಾಯತ್ ಸಿಬ್ಬಂದಿಗಳು, ಪೌರಕಾಮರ್ಿಕರು,ಆಶಾ ಕಾರ್ಯಕತರ್ೆಯರು, ಅಂಗನವಾಡಿ ಕಾರ್ಯಕತರ್ೆಯರು ಮತ್ತು ಸಹಾಯಕರು, ಡಪಳಾಪುರ ವಿದ್ಯಾ ವಿಹಾರ ಶಾಲೆಯ ವಿದ್ಯಾಥರ್ಿಗಳು ಮತ್ತು ಶಿಕ್ಷಕರು ಹಾಗೂ ಸ್ಥಳೀಯ ಸಾರ್ವಜನಿಕರು ಭಾಗಿಯಾಗಿದ್ದರು.


ಸುದ್ದಿ ಓದಿ