ಕ್ಷಕ ವೃತ್ತಿಗೆ ಬರಬೇಕಾದರೆ ಪೂರ್ವ ಜನ್ಮದ ಪುಣ್ಯದ ಫಲ ಇರಬೇಕು - ಶ್ಯಾಮಸುಂದರ ಅಡಿಗ
ಲೋಕದರ್ಶನ ವರದಿ
ರಾಣೆಬೆನ್ನೂರು 3 : ಸಮಾಜದಲ್ಲಿ ಶಿಕ್ಷಕ ವೃತ್ತಿಗೆ ಯಾರೇ ಬರಲಿ ಅವರು ಪೂರ್ವಜನ್ಮದ ಪುಣ್ಯವಂತವರಾಗಿರಬೇಕು, ಅಂಥವರು ಮಾತ್ರ ಈ ಪವಿತ್ರವಾದ ಶಿಕ್ಷಣ ಕ್ಷೇತ್ರಕ್ಕೆ ಬರಲು ಸಾಧ್ಯವಿದೆ. ಗುರು ಎನ್ನುವ ಪದಸ್ಥಾನ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕ
ಅವಕಾಶವನ್ನು ಶಿಕ್ಷಕರು ತಮ್ಮ ಮಕ್ಕಳ ಪರಿಪೂರ್ಣ ಶಿಕ್ಷಣಕ್ಕೆ ಮೀಸಲಾಗಿಟ್ಟದ್ದರೆ, ಸಮಾಜ ಎಂದಿಗೂ ಅವರನ್ನು ಎಂದೆಂದಿಗೂ ಮರೆಯುವುದಿಲ್ಲ ಎಂದು ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮ ಸುಂದರ ಅಡಿಗ ಹೇಳಿದರು.
ಅವರು ತಾಲೂಕಿನ ದೇವರಗುಡ್ಡ (ಗುಡ್ಡ ಗುಡ್ಡಾಪುರ ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಅಲ್ಲಿನ ಪ್ರಧಾನ ಗುರುಮಾತೆ ಶ್ರೀಮತಿ ನಿರ್ಮಲಾ ಕೃಷ್ಣಕುಮಾರ ಮಾನೆ ಅವರ ಸೇವಾ ನಿವೃತ್ತಿ ನಿಮಿತ್ತ ಆಯೋಜಿಸಿದ್ದ, ಅಭಿನಂದನಾ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ನಿರ್ಮಲ ಮಾನೆ ಆವರು ತಾವು ಕಂಡಂತೆ ಕೇವಲ ಶಿಕ್ಷಕಿಯಾಗದೆ, ಜೊತೆ, ಜೊತೆಗೆ ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದ ಸಾಂಸ್ಕೃತಿಕ, ಸಾಹಿತ್ತಿಕ, ಕಾವ್ಯ, ಬರಹ ಸಂಸ್ಕೃತಿ, ಸಂಸ್ಕಾರ, ನೀತಿ ಬೋಧನೆ ಮತ್ತು ವಿಶೇಷ ಪಠ್ಯೇತರ ಚಟುವಟಿಕೆಯ ಮೂಲಕ ಕ್ರಿಯಾಶೀಲತೆ ಬೆಳೆಸಿಕೊಂಡವರಾಗಿ ದ್ದಾರೆ. ಮಕ್ಕಳ ಪರಿಪೂರ್ಣ ಪ್ರಗತಿಗೆ ಇಂತಹ ಗುಣ ಧರ್ಮಗಳು ಎಲ್ಲರೂ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.