ರಾಯಣ್ಣ ಆಡು-ಕುರಿ ರೈತ ಉತಾದ್ಪಕರ ಸಂಸ್ಥೆಗೆ ಅಧಿಕಾರಿಗಳ ಭೇಟಿ
ಲೋಕದರ್ಶನ ವರದಿ
ಮೂಡಲಗಿ 05: ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ರಾಜ್ಯ ಶ್ರೇಷ್ಠ ಪಶುಪಾಲಕ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮಾರುತಿ ಮರ್ಡಿ ಮೌರ್ಯ ಅವರ ರಾಯಣ್ಣ ಆಡು-ಕುರಿ ರೈತ ಉತಾದ್ಪಕರ ಸಂಸ್ಥೆಗೆ ಮತ್ತು ಕುರಿ ಪಾರ್ಮ ಹೌಸಿಗೆ ರಾಷ್ರೀಯ ಜೀವನೋಪಾಯ ಅಭಿಯಾನ, ಕೌಶಲ್ಯಾಬಿವೃದ್ಧಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಡಾ. ರಾಗಪ್ರೀಯಾ, ಆರ್ ಆಯ್ಎಎಸ್ ಅಧಿಕಾರಿ ಭೇಟಿ ನೀಡಿ ಎಫ್ಪಿಓಗಳ ಪರಿಕಲ್ಪನೆ, ಉದ್ದೇಶ, ಆರ್ಥಿಕತೆ, ಸ್ವಾವಲಂಬಿ ಮಹಿಳೆಯರಿಗೆ ಕುರಿ, ಆಡು ಮತ್ತು ನಾಟಿ ಕೋಳಿ ಸಾಕಾಣಿಕೆ ಬಗ್ಗೆ ಅರಿವು ಮೂಡಿಸುವ ಕಾರ್ಯ ಜಿಲ್ಲಾ ಪಂಚಾಯತ ಮತ್ತು ತಾಲೂಕ ಪಂಚಾಯತ ಮುಖಾಂತರ ಸಲಹೆ ಮತ್ತು ಸಹಕಾರ ನೀಡುತ್ತೇವೆ ಮತ್ತು ಮಾರುತಿ ಮಡರ್ಿ ಸಾಧನೆ ಯುವ ಸಮುದಾಯಕ್ಕೆ ಮಾದರಿ ಎಂದು ಮೆಚ್ಚುಗೆಯ ಹರ್ಷ ವ್ಯಕ್ತ ಪಡಿಸಿದರು.
ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ಮಾತನಾಡಿ ರೈತರಿಗೆ ಮತ್ತು ಕುರಿಗಾರರಿಗೆ ನೇರ ಮಾರುಕಟ್ಟೆಯನ್ನು ಒದಗಿಸಿ ರೈತರ ಆಥರ್ಿಕತೆಯನ್ನು ದ್ವಿಗುಣಗೊಳಿಸುವಲ್ಲಿ ರೈತ ಉತ್ಪಾದಕ ಕಂಪನಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಇಲಾಖೆಯ ಬಂಗಾರಪ್ಪ, ಬೆಳ್ಳೆಗೌಡ, ವೆಂಕಟೇಶ, ವಿನಯಕುಮಾರ ಮೂಡಲಗಿ ತಾಲೂಕು ಕಾರ್ಯ ನಿರ್ವಹಕ ಅಧಿಕಾರಿ ಚಿನ್ನನವರ ಪ್ಯೂಚರ್ ಗ್ರೀನ್ ಸ್ಥಾಪಕ ಬಾಳು ಅಥಣಿ, ಕಲ್ಲೋಳಿ ಪಟ್ಟಣ ಪಂಚಾಯತ ಸದಸ್ಯ ವಂಸತ ತಶೀಲದಾರ, ಬಸಪ್ಪ ಯಾದಗೂಡ, ರವಿ ಹೆಬ್ಬಾಳ, ಲಕ್ಷ್ಮಣ ಮರಡಿ, ವಿನಾಯಕ ಕಟ್ಟಿಕಾರ, ಮುತ್ತು ಬಡವಣ್ಣಿ, ಯಂಕಪ್ಪ ಬೀರಗೌಡ್ರ, ಶಿವಗೊಂಡ ಹೆಬ್ಬಾಳ ಪಟ್ಟಣ ಪಂಚಾಯತ ಕಾರ್ಯದರ್ಶಿ ಮತ್ತು ಸಿಬ್ಬಂದಿ ವರ್ಗ ಅನೇಕ ಮಹಿಳೆಯರು ಮತ್ತು ಸಂಸ್ಥೆಯ ಕಾರ್ಯದರ್ಶಿ ಸಿದ್ದು ಕಟ್ಟಿಕಾರ ಹಾಗೂ ಸಿಬ್ಬಂದಿ ವರ್ಗ ಇದ್ದರು. ಅದ್ಯಕ್ಷತೆಯನ್ನು ಮಾರುತಿ ಮರ್ಡಿ ವಹಿಸಿದ್ದರು