31ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹಕ್ಕೆ ಬಾರದ ಅಧಿಕಾರಿಗಳು
ಮುದ್ದೇಬಿಹಾಳ 05: ತಹಶೀಲ್ದಾರರ ಕಚೇರಿ ಮುಂದೆ ಮುದ್ದೇಬಿಹಾಳ ನವ ನಿಮರ್ಾಣ ಹೋರಾಟ ವೇದಿಕೆ ಡಿ. 5 ರಂದು ಪ್ರಾರಂಭವಾದ ಹೋರಾಟ 4 ಜನವರಿಗೆ ಒಂದು ತಿಂಗಳು ಕಳೆದರು. ಕೆಬಿಜೆಎನ್ಎಲ್ ಎಎಲ್ಬಿಸಿ ವಿಭಾಗದ ಹಾಗೂ ಲೋಕೋಪಯೋಗಿ ಇಲಾಖೆ ಮತ್ತು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಸೌಜನ್ಯಕಾದರು ಬಂದು ಹೋರಾಟಗಾರರನ್ನು ಆಲಸಬೇಕಿತ್ತು ಮುದ್ದೇಬಿಹಾಳ ಲೋಕೋಪಯೋಗಿ ಇಲಾಖೆಯಲ್ಲಿ ಎಸ್.ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಮತ್ತು ಕೆ.ಬಿ.ಜೆ.ಎನ್.ಎಲ್-ಎ.ಎಲ್.ಬಿ.ಸಿ ವಿಭಾಗದ ಮುದ್ದೇಬಿಹಾಳ ಉಪವಿಭಾಗ ನಂ 2 ಮತ್ತು 3 ಗಳಲ್ಲಿ ಎಸ್.ಎಸ್.ಸಿ.ಪಿ ಮತ್ತು ಟಿಎಸ್.ಪಿ ದಲಿತರಿಗೆ ಮೀಸಲಾದ ಹಣವನ್ನು ಅಧಿಕಾರಿಗಳು ಸಂಪೂರ್ಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಗ್ರಾಮೀಣ ನೀರು ಮತ್ತು ನೈರ್ಮಲ್ಯ ಮುದ್ದೇಬಿಹಾಳ ಜೆ.ಜೆ.ಎಮ್ (ಮನೆ ಮನೆ ಗಂಗೆ) ಯೋಜನೆಯನ್ನು ಅವೈಜ್ಞಾನಿಕ ಕಳಪೆ ಮಟ್ಟದ ಕಳಪೆ ಸಲಕರಣೆಗಳು ಬಳಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಬಂದು ಸಂಪೂರ್ಣವಾಗಿ ಕುಲಂಕೂಷವಾಗಿ ಸಂಪೂರ್ಣ ತನಿಖೆ ನಡೆಸಿ ತಪ್ಪಿಸ್ಥರ ಮೇಲೆ ಕಾನೂನು ಕ್ರಮ ಜರೂಗಿಸಬೇಕೇಂದು ಮುದ್ದೇಬಿಹಾಳ ನವ ನಿಮರ್ಾಣ ಹೋರಾಟ ವೇದಿಕೆ ಸಂಚಾಲಕ ಕೃಷ್ಣ ರಾಠೋಡ ಮತ್ತು ಈರಣ್ಣ ತಾರನಾಳ ಆರೋಪಿಸಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಬರುವವರೆಗೂ ನಮ್ಮ ಹೋರಾಟ ನಿರಂತರವಾಗಿ ಇರುತ್ತದೆ. ಎಂದು ಹೇಳಿದರು