ಗೋಕಾಕ್

ಸಹಕಾರ ಪತ್ತಿನ ಸಂಘಗಳ ಚಳವಳಿಗೆ ಹೊಸ ಚೈತನ್ಯ; ಡಾ ಸಂಜಯ ಹೊಸಮಠ

ಸಹಕಾರ ಪತ್ತಿನ ಸಂಘಗಳ   ಚಳವಳಿಗೆ ಹೊಸ ಚೈತನ್ಯ; ಡಾ ಸಂಜಯ ಹೊಸಮಠ

ಸಹಕಾರ ಪತ್ತಿನ ಸಂಘಗಳ   ಚಳವಳಿಗೆ ಹೊಸ ಚೈತನ್ಯ; ಡಾ ಸಂಜಯ ಹೊಸಮಠ 

ಗೋಕಾಕ   16; ಮಹಾರಾಷ್ಟ್ರ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಹಾಗೂ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಸಹಕಾರ ಚಳವಳಿ  ಹೊಸ ಚೈತನ್ಯ ತುಂಬುತ್ತಿದೆ ಎಂದು ಗೋಕಾಕ ನಗರದ ವ್ಯದ್ಯರಾದ ಡಾ ಸಂಜಯ ಪಂಚಾಕ್ಷರಿ ಹೊಸಮಠ  ಅವರು ಅಭಿಪ್ರಾಯ ವ್ಯಕ್ತಪಡೆಸಿದರು. ಮಹಾರಾಷ್ಟ್ರ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಹಾಗೂ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಸಂಯುಕ್ತ ಆಶ್ರಯದಲ್ಲಿ   ಕಾರವಾರ ಜಿಲ್ಲೆಯ ಕುಮಟಾದಲ್ಲಿರುವ ಡೆನಿಸನ್ಸೆ-್ಡ   ಬೀಚ್ ರೆಸಾರ್ಟ್‌ನಲ್ಲಿ ಜರುಗಿದ ಅಂತರರಾಜ್ಯ ಸಹಕಾರ ಸಭೆ ಹಾಗೂ ದೀಪಸ್ತಂಭ ಪುರಸ್ಕಾರ ಸಮಾರಂಭದ ಮುಖ್ಯ ಅತಿಥಿಗಳ ಪರವಾಗಿ ಮಾತನಾಡಿದ ಡಾ. ಸಂಜಯ್ ಹೊಸಮಠ ಅವರು, ಕರ್ನಾಟಕ ರಾಜ್ಯದ ಪತ್ತಿನ ಸಂಘಗಳ ಕಾರ್ಯಪದ್ಧತಿ, ಸವಾಲುಗಳು ಹಾಗೂ ಮಹಾಮಂಡಳವು ಪತ್ತಿನ ಸಂಘಗಳ ಮಾತೃ ಸಂಸ್ಥೆಯಾಗಿ ನಿಭಾಯಿಸುತ್ತಿರುವ ಪ್ರಮುಖ ಪಾತ್ರವನ್ನು ವಿವರಿಸಿದರು. 

“ಪತ್ತಿನ ಸಂಘಗಳಲ್ಲಿ ಎದುರಾಗುತ್ತಿರುವ ಆದಾಯ ತೆರಿಗೆ ಮತ್ತು ನಿಯಂತ್ರಣ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಮಹಾಮಂಡಳವು ಸರ್ಕಾರದೊಂದಿಗೆ ನಿರಂತರವಾಗಿ ಸಂವಾದ ನಡೆಸುತ್ತಿದೆ.'' ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಅಧ್ಯಕ್ಷರಾದ, “ಕರ್ನಾಟಕ ರಾಜ್ಯ ಪತ್ತಿನ ಮಹಾಮಂಡಳ ಕಳೆದ ಹಲವು ವರ್ಷಗಳಿಂದ ಪತ್ತಿನ ಸಂಘಗಳ ಶಕ್ತೀಕರಣಕ್ಕೆ ಮುಂಚೂಣಿಯಲ್ಲಿದೆ. ಸಹಕಾರ ಚಳವಳಿಯನ್ನು ಗ್ರಾಮಮಟ್ಟದಿಂದ ರಾಜ್ಯಮಟ್ಟಕ್ಕೆ ತಲುಪಿಸುವ ಕಾರ್ಯದಲ್ಲಿ ಎಲ್ಲರ ಸಹಭಾಗಿತ್ವ ಅಗತ್ಯ,'' ಎಂದು ಹೇಳಿದರು. ಅವರು ಮುಂದಿನ ಅಂತರರಾಜ್ಯ ಸಹಕಾರ ಸಭೆಯನ್ನು ಮೈಸೂರು ನಗರದಲ್ಲಿ ಆಯೋಜಿಸಲು ಆಹ್ವಾನ ನೀಡಿದರು. 

ಜಂಟಿ ನಿಬಂಧಕ ಕಲ್ಲಪ್ಪ ಓಬನ್ಗೋಳ ಅವರು ಕರ್ನಾಟಕ ರಾಜ್ಯದ ಸಹಕಾರ ಕಾಯ್ದೆಯ ವಿಶ್ಲೇಷಣೆ ಮಾಡಿ ಅದರ ನವೀಕರಣದ ಅಗತ್ಯವನ್ನು ಚರ್ಚಿಸಿದರು. ಸಭೆಯ ಅಧ್ಯಕ್ಷತೆಯನ್ನು ಮಹಾರಾಷ್ಟ್ರ ರಾಜ್ಯ ಪತ್ತಿನ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಕಾಕಾಸಾಹೇಬ್ ಕೊಯ್ತೆ ಅವರು ವಹಿಸಿದ್ದರು. ಸಂಚಾಲಕರಾಗಿ ಡಾ. ಸಂಜಯ್ ಪಂಚಾಕ್ಷರಿ ಹೊಸಮಠ, ಮಹಾಮಂಡಳದ ಉಪಾಧ್ಯಕ್ಷ ಧರಿಯಪ್ಪ ಅಲ್ಗೂರ್, ನಿರ್ದೇಶಕರು ತಮ್ಮಣ್ಣ ಬಾಲಪ್ಪ ಕೆಂಚರೆಡ್ಡಿ, ಉಮೇಶ್ ಬಾಳಿ, ಮಹಾರಾಷ್ಟ್ರ ಫೆಡರೇಶನ್‌ನ ಸಂಚಾಲಕರು ಶಶಿಕಾಂತ್ ರಾಜೋಬಾ, ಭಾಸ್ಕರ್ ಬಂಗಾರ, ಬೆಳಗಾವಿ ಪಾಂತೀಯ ಸಹಕಾರಿ ಜಂಟಿ ನಿಬಂಧಕ  ಕಲ್ಲಪ್ಪ ಓಬನ್ಗೋಳ, ಹಾಗೂ ಮಹಾರಾಷ್ಟ್ರದ ಸಹಕಾರಿ ಅಪ್ಪರ್ ನಿಬಂಧಕ  ವಾಡೆಕರ್ ವೇದಿಕೆ ಮೇಲೆ ಉಪಸ್ಥಿತರಿದ್ದರು. 


ಸುದ್ದಿ ಓದಿ