ಕಾರವಾರ

ಸಂಧಾನವೇ ಪರಿಹಾರ: ರಾಷ್ಟ್ರಕ್ಕಾಗಿ 90 ದಿನಗಳ ವಿಶೇಷ ಅಭಿಯಾನ

ಸಂಧಾನವೇ ಪರಿಹಾರ: ರಾಷ್ಟ್ರಕ್ಕಾಗಿ 90 ದಿನಗಳ ವಿಶೇಷ ಅಭಿಯಾನ

ಮುಂಡಗೋಡ   31: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ರಾಜ್ಯಾದ್ಯಂತ “ರಾಷ್ಟ್ರಕ್ಕಾಗಿ 90 ದಿನಗಳ ಮಧ್ಯಸ್ಥಿಕೆ” ಎಂಬ ವಿಶೇಷ ಅಭಿಯಾನವನ್ನು 2026 ಜನವರಿ 2ರಿಂದ ಹಮ್ಮಿಕೊಳ್ಳಲಾಗಿದೆ.  ಮುಂಡಗೋಡ ತಾಲೂಕಿನ ನ್ಯಾಯಾಲಯಗಳಲ್ಲಿ ಬಾಕಿ ಇರುವ ರಾಜಿಯಾಗಬಲ್ಲ ಪ್ರಕರಣಗಳನ್ನು ಸಂಧಾನದ ಮೂಲಕ ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಲು ಈ ಅಭಿಯಾನವು ಸಾರ್ವಜನಿಕರಿಗೆ ಸುವರ್ಣಾವಕಾಶವಾಗಿದೆ.ಈ ಅಭಿಯಾನದಡಿ ಮೋಟಾರ್ ವಾಹನ ಅಪಘಾತ ಪ್ರಕರಣಗಳು, ಬ್ಯಾಂಕ್ ವಸೂಲಾತಿ, ಕಾರ್ಮಿಕ ವಿವಾದಗಳು, ಚೆಕ್ ಅಮಾನ್ಯ ಪ್ರಕರಣಗಳು, ಭೂಸ್ವಾಧೀನ, ಸಿವಿಲ್ ಹಾಗೂ ವೈವಾಹಿಕ ಪ್ರಕರಣಗಳು (ವಿಚ್ಛೇದನ ಹೊರತುಪಡಿಸಿ) ಸೇರಿದಂತೆ ಹಲವಾರು ಪ್ರಕರಣಗಳಿಗೆ ಸಂಧಾನದ ಮೂಲಕ ಪರಿಹಾರ ಒದಗಿಸಲಾಗುತ್ತದೆ.ಕಡಿಮೆ ಖರ್ಚಿನಲ್ಲಿ ಹಾಗೂ ಶೀಘ್ರ ನ್ಯಾಯಸಮ್ಮತ ತೀರ್ಮಾನಕ್ಕಾಗಿ ಆಸಕ್ತರು ತಾಲೂಕು ಕಾನೂನು ಸೇವಾ ಸಮಿತಿ, ಮುಂಡಗೋಡ ಕಚೇರಿಯನ್ನು ಸಂಪರ್ಕಿಸುವಂತೆ ಮುಂಡಗೋಡ ನ್ಯಾಯಾಲಯದ ನ್ಯಾಯಾಧೀಶೆ ಶ್ರೀಮತಿ ಅಕ್ಷತಾ ಸಿ.ಆರ್‌.ಹಾಗೂ ಸದಸ್ಯ ಕಾರ್ಯದರ್ಶಿ ಅವರು ತಿಳಿಸಿದ್ದಾರೆ. 


ಸುದ್ದಿ ಓದಿ