ಮುದ್ದೆಬಿಹಾಲ್

ನೀರಜ್ ಮಾಶೇಟ್ಟಿ ರಾಜ್ಯ ಮಟ್ಟಕ್ಕೆ ಆಯ್ಕೆ

ನೀರಜ್ ಮಾಶೇಟ್ಟಿ ರಾಜ್ಯ ಮಟ್ಟಕ್ಕೆ ಆಯ್ಕೆ

ನೀರಜ್ ಮಾಶೇಟ್ಟಿ ರಾಜ್ಯ ಮಟ್ಟಕ್ಕೆ ಆಯ್ಕೆ  

ಮುದ್ದೇಬಿಹಾಳ 28: ವಿಜಯಪುರದ ಬಿ ಆರ್ ಅಂಬೇಡ್ಕರ್ ಸ್ಟೇಡಿಯಂನಲ್ಲಿ ದಿ. 26ರಂದು ಜರುಗಿದ ಜಿಲ್ಲಾ ಮಟ್ಟದ ವೈಯಕ್ತಿಕ ಮೇಲಾಟಗಳಲ್ಲಿ  ಶ್ರೀ ಪವಾಡ ಬಸವೇಶ್ವರ ಪ್ರೌಢಶಾಲೆ ಬಸರಕೋಡ ಶಾಲೆಯ ವಿದ್ಯಾರ್ಥಿಗಳಾದ ನೀರಜ್ ಪುಂಡಲೀಕ ಮಾಶೇಟ್ಟಿ 3000  ಮೀಟರ್ ಓಟದ ಸ್ಪರ್ಧೆಯಲ್ಲಿ  ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ ಹಾಗೂ ಸಿದ್ದಮ್ಮ ಕುಂಟೋಜಿ ಉದ್ದ ಜಿಗಿತದಲ್ಲಿ ಮೂರನೇ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. 

ಸಂಸ್ಥೆಯ ಅಧ್ಯಕ್ಷ ಕೆ ವೈ ಬಿರಾದಾರ್, ಸಂಸ್ಥೆಯ ಸದಸ್ಯರು ಪ್ರೌಢ ಶಾಲೆಯ ಮುಖ್ಯ ಗುರುಗಳು ವೀ ಪಿ ಮೇಲ್ಮನಿ, ದೈಹಿಕ ಶಿಕ್ಷಕರು, ಶಾಲೆಯ ಸಿಬ್ಬಂದಿ ವರ್ಗ, ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಊರಿನ ಗಣ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. 


ಸುದ್ದಿ ಓದಿ