ಬಳ್ಳಾರಿ

ಖನಿಷ್ಠ ಬೆಂಬಲ ಬೆಲೆಗಾಗಿ ಆಗ್ರಹಿಸಿ ರೈತ ಸಂಘಟನೆಯಿಂದ ದೇಶವ್ಯಾಪಿ ಪ್ರತಿಭಟನೆ,

ಖನಿಷ್ಠ ಬೆಂಬಲ ಬೆಲೆಗಾಗಿ ಆಗ್ರಹಿಸಿ  ರೈತ ಸಂಘಟನೆಯಿಂದ ದೇಶವ್ಯಾಪಿ ಪ್ರತಿಭಟನೆ,


ಖನಿಷ್ಠ ಬೆಂಬಲ ಬೆಲೆಗಾಗಿ ಆಗ್ರಹಿಸಿ  ರೈತ ಸಂಘಟನೆಯಿಂದ ದೇಶವ್ಯಾಪಿ ಪ್ರತಿಭಟನೆ. 

ಬಳ್ಳಾರಿ 19: ಎಐಕೆಕೆಎಂಎಸ್ ರೈತ ಸಂಘಟನೆ ವತಿಯಿಂದ ದೇಶವ್ಯಾಪಿ ನಡೆಯುತ್ತಿರುವ ಹೋರಾಟದ ಅಂಗವಾಗಿ ಇಂದು ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿ, ರೈತರ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಮಾನ್ಯ ಅಪರ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಪ್ರಾಧಾನಿ ಮತ್ತು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಗೋವಿಂದ್ ಮಾತನಾಡುತ್ತಾ ಈ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿ ಆಳ್ವಿಕೆ ನಡೆಸಿದ ಎಲ್ಲಾ ಪಕ್ಷಗಳೂ ಸಹ ರೈತರ ಪರವಾಗಿ ನೀತಿಗಳನ್ನು ಜಾರಿಗೊಳಿಸದೆ, ಕಾರ​‍್ೊರೇಟ್ ಪರ ನೀತಿಗಳನ್ನು ಜಾರಿಗೊಳಿಸಿ ರೈತರ ಬದುಕನ್ನು ದುರ್ಬರಗೊಳಿಸಲಾಗಿದೆ. ಈ ವ್ಯವಸ್ಥೆ ಬಂಡವಾಳಶಾಹಿ ವ್ಯವಸ್ಥೆ ಆಗಿರುವುದರಿಂದ ಇಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಹ, ಶ್ರೀಮಂತರ ಪರವಾಗಿ ನೀತಿಗಳು ಜಾರಿಗೆ ಬರುತ್ತವೇ, ಒರೆತು ದುಡಿಯುವ ಜನರ ಪರವಾಗಿ ಅಲ್ಲ, ಇದಕ್ಕೆ ಉದಾಹರಣೆ ದೇಶವನ್ನು ಅಭಿರುದ್ದಿ ಮಾಡುತ್ತೇವೆ, ರೈತರ ಆದಾಯವನ್ನು ಎರೆಡು ಪಟ್ಟು ದ್ವಿಗುಣಗೊಳಿಸುತ್ತೇವೆ ಎಂದು ಅಬ್ಬರಿಸುತ್ತಾ ಅಧಿಕಾರಕ್ಕೆ ಬಂದ ಕೇಂದ್ರ ಬಿಜೆಪಿ ಸರ್ಕಾರ ಇಂದು ರೈತರ ಬದುಕನ್ನು ಸರ್ವ ನಾಶ ಮಾಡುವಂತಹ ಕೃಷೀನೀತಿಗಳನ್ನು ಜಾರಿಗೆ ತಂದು, ಜನರ ಪ್ರತಿರೋಧ ಎದುರಿಸಿ, ಕೊನೆಗೆ ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ಈ ರೀತಿಯ ಹೋರಾಟಗಳು ಇಂದು ಅವಶ್ಯಕವಾಗಿ ಬೆಳಸುವ ಸಲುವಾಗಿ ನಾವು ದೇಶವ್ಯಾಪಿ ಈ ಹೋರಾಟವನ್ನು ಕೈಗೆತ್ತಿಕೊಂಡಿದ್ದೇವೆ, ಕೇಂದ್ರ, ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳನ್ನು ಹಿಡೇರಿಸದಿದ್ದರೆ ಬೃಹತ್ ಹೋರಾಟ ಅನಿವಾರ್ಯ ಎಂದರು.  ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡುತ್ತಾ ರಾಜ್ಯ ಸರ್ಕಾರವು ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳನ್ನು ಇದುವರೆಗೂ ಹಿಂತೆಗೆದುಕೊಳ್ಳದೆ, ಕೊಟ್ಟ ಮಾತನ್ನು ತಪ್ಪಿ, ಆಳ್ವಿಕರಿಗೆ ತನ್ನ ನಿಷ್ಠೆಯನ್ನು ತೋರಿಸಿದೆ. ಬಳ್ಳಾರಿ ಸೇರಿದಂತೆ ರಾಜ್ಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ನಿರಂತರವಾಗಿ ಸುರಿದ ಮಳೆಗೆ ಕಟಾವಿಗೆ ಬಂದಿದ್ದ ಭತ್ತದ ಬೆಲೆ ಸಂಪೂರ್ಣವಾಗಿ ನಷ್ಟಕ್ಕೀಡಾಗಿದೆ. ಆದ್ದರಿಂದ ಸದ್ಯ ಈಗ ಕೈಗೆ ಸಿಗುವ ಭತ್ತಕ್ಕೆ 3500 ರೂ. ಮೆಣಸಿನಕಾಯಿ ಬೆಳೆಗೆ 25,000 ರೂ. ಕೊಡಬೇಕು ಜೊತೆಗೆ ಬಳ್ಳಾರಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸಬೇಕು, ಮತ್ತು ಭತ್ತವನ್ನು ಜನವರಿ ತಿಂಗಳಲ್ಲಿ ಖರೀದಿ ಮಾಡುವ ನಿರ್ಧಾರ ಕೈಬಿಟ್ಟು, ಕೂಡಲೇ ಇದೇ ತಿಂಗಳಲ್ಲಿ ಖರಿಧಿ ಮಾಡಬೇಕು ಮತ್ತು ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ಕೊಡಬೇಕು ಎಂಬುದು ಸೇರಿದಂತೆ ಇತರ ಬೇಡಿಕೆಗಳ ಹಿಡೇರಿಸಬೇಕು, ಇಲ್ಲದಿದ್ದಲ್ಲಿ ಬೃಹತ್ ಹೋರಾಟಕ್ಕೆ ರೈತ ಸಮುದಾಯ ಸಿದ್ಧವಾಗಬೇಕಾಗುತ್ತೆ ಎಂದು ಹೆಚ್ಚರಿಸಿದರು. ಈ ಸಂದರ್ಭದಲ್ಲಿ  ರಾಜ್ಯ ಸಮಿತಿ ಸದಸ್ಯ ಈ.ಹನುಮಂತಪ್ಪ ಮಾತನಾಡಿದರು. ಬಳ್ಳಾರಿ ತಾಲ್ಲೂಕು ಅಧ್ಯಕ್ಷ ಈರಣ್ಣ, ಕಾರ್ಯದರ್ಶಿ ಧನರಾಜ್, ಕುರುಗೋಡು ತಾಲ್ಲೂಕು ಅಧ್ಯಕ್ಷ ಲಿಂಗಪ್ಪ, ಕಾರ್ಯದರ್ಶಿ ಕೆರೆಕೆರೆ ಬಸವರಾಜ್, ರೈತ ಮುಖಂಡ ಕಲ್ಲುಕಂಬ ಪಂಪಾಪತಿ, ಜಿಲ್ಲಾ ಸದಸ್ಯರಾದ ಮಲ್ಲಪ್ಪ, ಮಾಬುಸಾಬ್, ಹೊನ್ನೂರ​‍್ಪ, ಕಾಸಿಂ ಸಾಬ್, ಗಾದಿಲಿಂಗ ರೈತರಾದ ರಮೇಶ್, ಕಾಳಿಂಗಪ್ಪ, ದಸ್ತಗಿರಿ ಸಾಬ್, ನಾಗಭೂಷಣ, ನಾಯ್ಕಪ್ಪ, ಸಿದ್ದಪ್ಪ, ನಾಗರಾಜ, ಹುಲುಗಪ್ಪ, ಹುಸೇನ್‌ವಲಿ, ಗಡಿಗೆ ಚೆನ್ನಪ್ಪ, ಶಿವಲಿಂಗಪ್ಪ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು. 


ಸುದ್ದಿ ಓದಿ