ರಾಷ್ಟ್ರೀಯ ಯುವ ದಿನಾಚರಣೆ: ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ
ಮಹಾಲಿಂಗಪುರ: ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪಿಯು ಕಾಲೇಜ್ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ತ ತಂಬಾಕು ಬೇಡ ಎಂಬ ಜಾಗೃತಿ ಜಾಥಾ ನಡೆಸಿದರು. ಜಾಗೃತಿ ಘೋಷಣಾ ಫಲಕ ಪ್ರದರ್ಶಿಸುತ್ತ ಕಾಲೇಜು ಆವರಣದಿಂದ ಬಸವೇಶ್ವರ ವೃತ್ತ, ಜೋಡು ರಸ್ತೆಗಳಿಗೆ ತೆರಳಿ ಪಾನ್ಶಾಪ್ ಮಾಲೀಕರಿಗೆ ಗುಲಾಬಿ ಹೂ ನೀಡಿ ಕಾಲೇಜು ವ್ಯಾಪಿಗೆ ಹತ್ತಿರಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡಬೇಡಿ ಎಂದು ಮನವಿ ಮಾಡಿದರು. ಅಂಗಡಿ ಮುಂದೆ ನಿಂತ ಗ್ರಾಹಕರಿಗೂ ಗುಲಾಬಿ ಹೂ ನೀಡಿ ಮಾದಕ ವಸ್ತು ಸೇವಿಸದಂತೆ ತಿಳುವಳಿಕೆ ನೀಡಿದರು. ಪ್ರಾಚಾರ್ಯ ಹಾಗೂ ಸಿಬ್ಬಂದಿ ಇದ್ದರು.