ನಾಡು ನುಡಿ ನೆಲ ಜಲ ರಕ್ಷಣೆ ನಮ್ಮೆಲರ ಹೊಣೆ : ಸಿದ್ದರಾಮ ಶಿವಯೋಗಿ
ಮಹಾಲಿಂಗಪುರ : ಇಂದಿನ ಯುವಕರು ನಾಡು ಕಟ್ಟುವ ಕೆಲಸಕ್ಕೆ ಮುಂದಾಗಬೇಕು,ಇಂದಿನ ಯುವ ಜನಾಂಗ ದುಶ್ಚಟಗಳಿಗೆ ದಾಸರಾಗುತ್ತಿದ್ದು ಮತ್ತು ಅತಿಯಾದ ಮೊಬೈಲ್ ಗಿಳು ಅಂಟಿಸಿಕೊಂಡು ಮಾನಸಿಕ ಕಿನ್ನತೆಗೆ ಒಳಗಾಗುತ್ತಿದ್ದು. ಮೊಬೈಲ್ ಜಗತ್ತಿನ ಯುವ ಜನತೆಯ ಜೀವನದ ಅತೀ ಅವಶ್ಯ ವಸ್ತುವಾಗಿದ್ದು. ಇದರಿಂದ ಎಷ್ಟು ಉಪಯೋಗವಿದೆಯೋ ಅದಕ್ಕಿಂತ ಹೆಚ್ಚು ದುರುಪಯೋಗವಾಗುತ್ತಿದೆ, ಇದು ದುರಂತ ಇದನ್ನು ಕಡಿಮೆ ಮಾಡಿಕೊಂಡು ನಾಡಿನ ನೆಲ, ಜಲ,ಭಾಷೆ ಗಡಿ ರಕ್ಷಣೆಗೆ ಯುವಕರು ಅನಿಯಾಗಬೇಕು ಎಂದು ಮುಧೋಳ ಸಿದ್ದರೂಢ ಮಠದ ಪ ಪೂ ಶ್ರೀ ಸಿದ್ದರಾಮ ಶಿವಯೋಗಿ ಹೇಳಿದರು
ರನ್ನ ಬೆಳಗಲಿಯ ಶ್ರೀ ಬಂದ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ 68 ನೇ ಕನ್ನಡ ರಾಜ್ಯೋತ್ಸವ ಮತ್ತು ಕನರ್ಾಟಕ ರಾಜ್ಯವಾಗಿ 50 ನೇ ವರ್ಷಾಚರಣೆ ನಿಮಿತ್ಯವಾಗಿ ಡಿಕೆ ಗೆಳೆಯರ ಬಳಗ,ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನರ್ಾಟಕ ರಕ್ಷಣಾ ವೇದಿಕೆ ರನ್ನ ಬೆಳಗಲಿ ವಲಯ ಘಟಕಗಳ ಆಶ್ರಯದಲ್ಲಿ "ಜನಪದ ಜೈಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಸಿ ಮಾತನಾಡಿ ರಾಜ್ಯೋತ್ಸ ಬರಿ ನವಂಬರ್ 1 ಕ್ಕೆ ಸೀಮಿತವಾಗದೆ ನಿರಂತರವಾಗಿ ನಡೆಯಬೇಕು, ನಮ್ಮ ಭಾಷೆ ವಿಶ್ವದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದೆ ಅದು ನಮ್ಮ ಹೆಮ್ಮೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿ ಕಾರ್ಯಕ್ರಮ ನೀಡುವುದರ ಜೊತೆಗೆ ಕನ್ನಡದ ಕೋಗಿಲೆ ಮಹಣ್ಯಾ ಪಾಟೀಲ, ಪರಶು ಕೊಲೂರ ಮತ್ತು ಸಂಗಡಿಗರು ಮನರಂಜನೆ ಕಾರ್ಯಕ್ರಮವನ್ನು ನೀಡಿದರು.
ನಂತರ ಮಾತನಾಡಿದ ಜ್ಯೋತಿಷ್ಯ ರತ್ನ ಡಾ. ರಮೇಶ ಕುಮಾರ ಶಾಸ್ತ್ರಿಜೀ ಶ್ರೀ ಚಕ್ರ ಪುರವಾಸಿನಿ ಚಕ್ರೇಶ್ವರಿ ಜ್ಯೋತಿವರ್ಿಜ್ಞಾನ ಸಂಸ್ಥೆ ರನ್ನ ಬೆಳಗಲಿ ಶ್ರೀಗಳು ವಿದ್ಯಾಥರ್ಿಗಳಿಗೆ ನೆಲ, ಜಲ, ನಾಡು,ನುಡಿಗಳ ಬಗ್ಗೆ ಹೆಮ್ಮೆ ಮೂಡಿಸುವ ವಿಷಯಗಳನ್ನು ಉಣಬಡಿಸುವುದರ ಜೊತೆಗೆ ಮಕ್ಕಳಲ್ಲಿ ಅಡಗಿರುವ ಅದ್ಭುತ ಪ್ರತಿಭೆಗಳನ್ನು ತೋರಿಪಡಿಸಲು ಸಾರ್ವಜನಿಕವಾಗಿ ಸ್ಥಳಿಯ ಎಲ್ಲಾ ಶಾಲೆಗಳಿಗಾಗಿ ಸಿದ್ದಪಡಿಸಿದ ವೇದಿಕೆಗೆ ಬಲ ತುಂಬಿದ ಕೊಡಗೈ ದಾನಿಗಳಿಗೆ ಸದಾಕಾಲ ದೇವರು ಅವರಿಗೆ ಆಯುಷ್ಯ ಆರೋಗ್ಯ ಸಕಲ ಭಾಗ್ಯವನ್ನು ಕೊಟ್ಟು ಆಶೀರ್ವದಿಸಲಿ, ಈ ಕಾರ್ಯಕ್ರಮವನ್ನು ಆಯೋಜಿಸಿದ ಎಲ್ಲಾ ಸಂಘಟನಾಕಾರರನ್ನು ಅಭಿನಂದಿಸಿದರು,ಕನರ್ಾಟಕ ರಾಜ್ಯೋತ್ಸವ ಕಾರ್ಯಕ್ರಮ ಕೇವಲ ಒಂದು ದಿನದ ಮಟ್ಟಿಗೆ ಆಗಬಾರದು ಪ್ರತಿ ಕ್ಷಣವು ಕನ್ನಡದ ಬಗ್ಗೆ ಹೆಮ್ಮೆ ಮತ್ತು ಕನ್ನಡದಲ್ಲಿ ವ್ಯವಹಾರ ಮಾಡುವ ಮನಸ್ಸುಗಳು ನಮ್ಮದಾಗಬೇಕು ಎಂದು ಎಂದು ಹೇಳಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಕಜಾಪ ವಲಯ ಅಧ್ಯಕ್ಷರಾದ ರಾಘವೇಂದ್ರ ನೀಲಣ್ಣವರ ರವರು ರನ್ನ ಬೆಳಗಲಿಯು ಕಲೆ, ಕಲಾವಿದರ ತವರೂರು. ನಮ್ಮ ಊರಿನಲ್ಲಿ ಎಲ್ಲಾ ಬಗೆಯ ವಾದ್ಯಗಳ ವಾದಕರು, ಎಲ್ಲ ಪ್ರಕಾರದ ಕಲಾವಿದರು ಇದ್ದಾರೆ ಅವರಿಲ್ಲಿರುವ ಕಲಾ ಸಾಹಿತ್ಯ, ಕಲಾ ಪ್ರಕಾರದ ವಿದ್ಯೆಗಳು ಇಂದಿನ ಪೀಳಿಗೆ ಜೊತೆಗೆ ಮುಂದಿನ ಪೀಳಿಗೆಯವರೆಗೆ ಪರಂಪರಾಗತವಾಗಿ ಕಲೆ ಉಳಿದು ಬರಲು ಸಾಧ್ಯವಾಗುತ್ತಿಲ್ಲ, ಕಲಾವಿದರಿಗೆ ವೇದಿಕೆಯನ್ನು ಒದಗಿಸುವುದರ ಜೊತೆಗೆ ಕಲಾವಿದರನ್ನು ಪ್ರೋತ್ಸಾಹಿಸುವ ಜವಾಬ್ದಾರಿ ನಮ್ಮದಾಗಬೇಕು,ರನ್ನ ಬೆಳಗಲಿಯಲ್ಲಿ ಅನೇಕ ಶಿಲ್ಪ ಕಲಾ ಕೃತಿಗಳು ಬಗ್ನಗೊಂಡ ಅವಶೇಷಗಳಾಗುತ್ತಿವೆ. ಅವುಗಳ ರಕ್ಷಣೆಗೆ ಸಕರ್ಾರ ಮುಂದಾಗಬೇಕು ಮತ್ತು ರನ್ನನ ಹುಟ್ಟೂರು ಅನೇಕ ರನ್ನನ ಕುರುಹೂಗಳನ್ನು ತನ್ನ ಗರ್ಭದಲ್ಲಿ ಇಟ್ಟುಕೊಂಡಿದೆ ಅವುಗಳ ಕುರಿತು ಸಮಗ್ರವಾದ ಅಧ್ಯಯನವಾಗಬೇಕು ಎಂದು ತಿಳಿಸಿದರು.
ನಂತರ ಮಾತನಾಡಿದ ಯೋಗಿರಾಜೇಂದ್ರ ಶ್ರೀ ಸದಾಶಿವ ಗುರೂಜಿ ಋಷಿ ಯೋಗಾಶ್ರಮ ರನ್ನ ಬೆಳಗಲಿ ಅವರು ಸಾನಿಧ್ಯವನ್ನು ವಹಿಸಿದ್ದರು,ಪೂಜ್ಯರಾದ ಕಾಡಯ್ಯ ಗಣಾಚಾರಿ, ಕಾರ್ಯಕ್ರಮದ ಕುರಿತು ಮಾತನಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಾಚಯ್ಯ ಸಾಲಿಮಠ, ಮಾನಪ್ಪ ಲೋಹಾರ, ನ್ಯಾಯವಾದಿಗಳಾದ ಸಿದ್ದು ಸಾಂಗ್ಲಿಕರ, ಕಸಾಪ ಅಧ್ಯಕ್ಷರಾದ ಮಹಾಂತೇಶ ಕುಂಬಾರ, ಡಿಕೆ ಗೆಳೆಯರ ಬಳಗ ಮುಖಂಡರಾದ ದುರ್ಗಪ್ಪ ಪೂಜಾರಿ, ಡಿ ಎಸ್ಸ್ ಅಧ್ಯಕ್ಷರಾದ ಅಜ್ಜಪ್ಪ ದೊಡಮನಿ ,ಈಶ್ವರಪ್ಪ ಅಮಾತಿ, ರಮೇಶ ಕೆಸರಗೊಪ್ಪ, ಮಾಜಿ ಸೈನಿಕರಾದ ಶ್ರೀಶೈಲ ಭಜಂತ್ರಿ, ನಾಗರಾಜ ಭಜಂತ್ರಿ, ಪತ್ರಕರ್ತರಾದ ಮಹಾದೇವ ಕುಲಗೊಡ,ಯಮನಪ್ಪ ಪೂಜೇರಿ, ಮುತ್ತಪ್ಪ ಪೂಜೇರಿ, ಮತ್ತು ಸ್ಥಳೀಯ ಶ್ರೀ ಗುರು ಮಹಾಲಿಂಗೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಜ್ಞಾನ ಗುರುಕುಲ ಶಾಲಾ ಸಮೂಹ, ಸಮೃದ್ಧಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆ, ಮಾದರಿ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಜನತಾ ಪ್ಲಾಟ್, ಕನ್ನಡ ಹೆಣ್ಣು ಮಕ್ಕಳ ಶಾಲೆ, ಸರಕಾರಿ ಪ್ರೌಢಶಾಲೆ, ಕವಿ ಚಕ್ರವತರ್ಿರನ್ನ ಪೂರ್ವ ಪ್ರಾಥಮಿಕ ಶಾಲೆಗಳ ಶಿಕ್ಷಕವೃಂದ, ವಿದ್ಯಾಥರ್ಿಬಳಗ, ಊರಿನ ಸಮಸ್ತ ಸಾರ್ವಜನಿಕರು ಭಾಗವಹಿಸಿದರು.ಕಾರ್ಯಕ್ರಮವನ್ನು ಶಿಕ್ಷಕರಾದ ನಾಗೇಶ ಬಟಾಟೆಪ್ಪಗೊಳ ನಿರೂಪಿಸಿ ವಂದಿಸಿದರು.