ಮೈನಳ್ಳಿ ಮಲ್ಲಮ್ಮ ನಿಧನ
ಹಗರಿಬೊಮ್ಮನಹಳ್ಳಿ 28: ತಾಲೂಕಿನ ಸೊನ್ನ ಗ್ರಾಮದಲ್ಲಿರುವ ಮೈನಳ್ಳಿ ಮಲ್ಲಮ್ಮ(88) ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ. ಇತ್ತೀಚಿಗೆ ಅನಾರೋಗ್ಯದಿಂದ ಧಾರವಾಡದ ಶ್ರೀಮಂಜುನಾಥ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದ್ದಾಗ ನಿಧನರಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದರು.
ನಿವೃತ್ತ ಯೋಧರಾದ ಮೈನಳ್ಳಿ ಮಂಜುನಾಥ ಸೇರಿ 5ಜನ ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಹೊಂದಿದ್ದರು