ಮುದ್ದೇಬಿಹಾಳ ಕರ್ನಾಟಕ ರಾಜ್ಯ ಮಾದಿಗ ಮತ್ತು ಸಂಬಂಧಿತ ಉಪಜಾತಿಗಳ ಸಂಘಟನೆಗಳ ಒಕ್ಕೂಟ
ಮುದ್ದೇಬಿಹಾಳ 07: ಒಳ ಮಿಸಲಾತಿಯ ಅಂಗಿಕಾರದಲ್ಲಿನ ಅನ್ಯಾಯದ ಕುರಿತು ಕರ್ನಾಟಕ ರಾಜ್ಯ ಮಾದಿಗ ಮತ್ತು ಸಂಬಂಧಿತ ಉಪಜಾತಿಗಳ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ಶುಕ್ರವಾರ ಮುದ್ದೇಬಿಹಾಳ ಬಂದ ಮಾಡಿ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರಕಾರದ ವಿರುದ್ಧ ಘೋಷಣೆಗಳನ್ನೂ ಕೂಗಿ ಉಗ್ರ ಪ್ರತಿಭಟನೆ ನಡೆಸುವುದರ ಜತೆಗೆ ತಹಶಿಲ್ದಾರ ಕೀರ್ತಿ ಚಾಲಕ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಉಪಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾದಿಗ ಸಮಾಜದ ಮುಖಂಡ ತಿಪ್ಪಣ್ಣ ದೊಡಮನಿ ಅವರು ಮಾತನಾಡಿ ಈಗಾಗಲೇ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾಯ್ದೆ ರೂಪಿಸಿ ರಾಜ್ಯಪಾಲರಿಂದ ಅಂಕಿತ ಪಡೆದಿರುವುದು ಮಾದಿಗ ಸಮುದಾಯದ 35 ವರ್ಷಗಳ ಹೋರಾಟಕ್ಕೆ ದೊರೆತ ಐತಿಹಾಸಿಕ ನ್ಯಾಯವಾಗಿದೆ.
ಅದರಂತೆ ಬೆಳಗಾಂವಿ ಅಧಿವೇಶನದಲ್ಲಿ ಸಂಪೂರ್ಣ ಅಂಗಿಕಾರಕ್ಕೆ ಅನುಮೋದನೆ ನೀಡಿ ಸಧ್ಯ ಕಾಬಿನೆಟ್ ಸಭೆಯಲ್ಲಿ ಯಾವುದೇ ನ್ಯಾಯಾಲಯದ ತೀಪು ಇಲ್ಲದೆ ಕೇವಲ 56ಅ ಮೀಸಲಾತಿ ಸಮರ್ಥಿತಿಸಿಕೊಳ್ಳದೆ ಕೇವಲ ನ್ಯಾಯಾಲಯದ ತಡೆ ಎನ್ನುವ ನೇಪ ಒಡ್ಡಿ ಒಳ ಮಿಸಲಾತಿ ತಪ್ಪಿಸುವ ಹುನ್ನಾರದಿಂದ ಪ.ಜಾ 15ಅ ಮತ್ತು ಪ.ವ 3ಅ ಮಿಸಲಾತಿಯಂತೆ ನೇಮಕಾತಿ ಮಾಡಿಕೊಳ್ಳಲು ಮುಂದಾದ ಸರ್ಕಾರದ ನಡೆ ಪರಿಶಿಷ್ಟ ಜಾತಿ 2 ಮತ್ತು ಪರಿಶಿಷ್ಟ ಪಂಗಡ 4ಅ ಮೀಸಲಾತಿ ಕಡಿಮೆ ಮಾಡಿ ಪ.ಜಾ ಮತ್ತು ಪ.ವ ಸಮುದಾಯಗಳಿಗೆ ಒದಗಬೇಕಾದ 3387ಕ್ಕು ಹೆಚ್ಚು ಹುದ್ದೆಗಳನ್ನು ಮತ್ತು ವಿಶೇಷವಾಗಿ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿಯಿಂದ ಲಭಿಸುವ 3500ಕ್ಕು ಹೆಚ್ಚಿನ ಹುದ್ದೆಗಳನ್ನು ತಪ್ಪಿಸುವ ಹುನ್ನಾರದಿಂದ ತೆಗೆದುಕೊಂಡ ಸರ್ಕಾರದ ನಡೆಗೆ ರಾಜ್ಯದ ಸಮಸ್ತ ಮಾದಿಗರು ಬಲವಾಗಿ ಖಂಡಿಸತ್ತೇವೆ.
ಈ ಕೂಡಲೇ ಒಳ ಮೀಸಲಾತಿ ಜಾರಿಗೊಳಿಸುವ ಮೂಲಕ ನಮ್ಮ ಸಮಾಜಕ್ಕೆ ಸೂಕ್ತ ಸ್ಥಾನ ಮಾನ ನೀಡಿ ಗೌರವಿಸಬೇಕು ಇಲ್ಲದಿದ್ದರೇ ಮುಂಬರುವ ದಿನಗಳಲ್ಲಿ ಇಡಿ ರಾಜ್ಯಧ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು.ಬಾಲಚಂದ್ರ ಹುಲ್ಲೂರ, ಆನಂದ ಮುದೂರ, ಮಂಜುನಾಥ ಕುಂದರಗಿ, ನ್ಯಾಯವಾದಿ ಕೆ ಬಿ ದೊಡಮನಿ, ದುರುಗಪ್ಪ ಗರಸಂಗಿ, ಮುತ್ತು ಅಮರಗೋಳ, , ಬಸವರಾಜ ಸಿದ್ದಾಪೂರ, ಆನಂದ ದೇವೂರ, ಸುಭಾಷ ಕಾಳಗಿ, ಮಹಾಂತೆಶ ಕಂದಗನೂರು, ಶೇಖು ಆಲೂರ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವೈಸಿದ್ದರು