ಯುವಕ ಕಾಣೆ: ಪತ್ತೆಗೆ ಮನವಿ
ಲೋಕದರ್ಶನ ವರದಿ
ಯುವಕ ಕಾಣೆ: ಪತ್ತೆಗೆ ಮನವಿ
ಬಳ್ಳಾರಿ 30: ಸಿರುಗುಪ್ಪ ನಗರದ 6ನೇ ವಾರ್ಡ್ ಮಾರೆಮ್ಮ ಗುಡಿ ಹತ್ತಿರದ 21 ವರ್ಷದ ಖಾಜಾಹುಸೇನ್ ಎಂಬ ಯುವಕ ಅ.26 ರಂದು ಕಾಣೆಯಾಗಿರುವ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕೆಂದು ಸಹಾಯಕ ಉಪನೀರೀಕ್ಷರು ಮನವಿ ಮಾಡಿದ್ದಾರೆ.
ಯುವಕನ ಚಹರೆ ಗುರುತು: ಎತ್ತರ 5.4 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಗುಲಾಬಿ ಬಣ್ಣದ ಅರ್ಧತೋಳಿನ ಟೀ-ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
ಕನ್ನಡ ಮತ್ತು ಹಿಂದಿ ಭಾಷೆಯನ್ನು ಮಾತನಾಡುತ್ತಾನೆ.
ಮೇಲ್ಕಂಡ ಚಹರೆ ಗುರುತುಗಳುಳ್ಳ ಯುವಕನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಎಸ್.ಪಿ ಕಚೇರಿ ದೂ.08938-258400, ಸಿರುಗುಪ್ಪ ಉಪ ವಿಭಾಗ ಡಿ.ಎಸ್.ಪಿ ದೂ.08392-276000, ಸಿರುಗುಪ್ಪ ವೃತ ಸಿ.ಪಿ.ಐ ದೂ.08396-220003, ಸಿರುಗುಪ್ಪ ಪೊಲೀಸ್ ಠಾಣೆಯ ಪಿ.ಎಸ್.ಐ ದೂ.08396-220333 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.